ಕೊರೋನಾ ವೈರಸ್ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ : ಹೆಚ್.ವಿಶ್ವನಾಥ ರೆಡ್ಡಿ


ಕೊಪ್ಪಳ, ಮಾ : ಕೊಪ್ಪಳ ಜಿಲ್ಲೆಯಲ್ಲಿ ಕೊರೋನಾ ವೈರಸ್ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದು, ಇದುವರೆಗೆ ಜಿಲ್ಲೆಯಲ್ಲಿ ಯಾವುದೇ ರೀತಿಯಾ ಕೊರೋನಾ ಪ್ರಕರಣಗಳು ದಾಖಲಾಗಿಲ್ಲ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ಹೆಚ್.ವಿಶ್ವನಾಥ ರೆಡ್ಡಿ ಹೇಳಿದರು.
ಜಿಲ್ಲಾ ಪಂಚಾಯತ್ ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ಇಂದು (ಮಾ.11) ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (20 ಅಂಶಗಳು ಸೇರಿದಂತೆ) ಪ್ರಗತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆರೋಗ್ಯ ಇಲಾಖೆ ಡಿಎಚ್‌ಒ ಡಾ. ಲಿಂಗರಾಜು, ಮಾತನಾಡಿ, ಕೊಪ್ಪಳ ಜಿಲ್ಲೆಯ ಮೂಲದವರು ಯಾರಾದರೂ ವಿದೇಶದಿಂದ ಜಿಲ್ಲೆಗೆ ಆಗಮಿಸಿದರೆ ಅಂತವರಲ್ಲಿ ಕೊರೋನಾ ವೈರಸನ್ನು ಪತ್ತೆ ಹಚ್ಚಲು ಆರೋಗ್ಯ ಇಲಾಖೆ ವಿವಿಧ ರೀತಿಯಾ ಕ್ರಮಗಳನ್ನು ಕೈಗೊಂಡಿದೆ.  ಕೋರೊನಾ ವೈರಸ್ ಪತ್ತೆ ಹಚ್ಚಲು ಹಾಗೂ ಬಿಗಿ ಭದ್ರತೆಗಾಗಿ ಜಿಲ್ಲೆಯಲ್ಲಿ 15, ಗಂಗಾವತಿಯಲ್ಲಿ 2, ಯಲಬುರ್ಗಾ 2, ಕುಷ್ಟಗಿಯಲ್ಲಿ 1 ಬೆಡ್ ಹಾಗೂ ಲ್ಯಾಬ್ ಮತ್ತು ಮಾಸ್ಕ್ಗಳನ್ನು ಮೀಸಲಿಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಫೆಬ್ರುವರಿ ಅಂತ್ಯದ ವೇಳೆಗೆ ಜಿಲ್ಲೆಯಲ್ಲಿ 112 ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ ಎಂದು ಹೇಳಿದರು.
ಗ್ರಾಮೀಣ ಕುಡಿಯುವ ನೀರಿನ ಪ್ರಗತಿ ಪೂರ್ಣವಾಗಿ ನಡೆಯುತ್ತಿಲ್ಲ. ಬೇಸಿಗೆಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಪೂರೈಕೆಯಾಗಲಿ. ಮುಂದಿನ ತಿಂಗಳಿAದ ಪ್ರತಿಯೊಂದು ಇಲಾಖೆಗೆ ಭೇಟಿ ನೀಡಲಿದ್ದೆನೇ. ಯಾವುದೇ ಸಮಸ್ಯೆಗಳಿದ್ದರೂ ಕೂಡಲೆ ಪರಿಹಾರ ಕಂಡುಕೊಳ್ಳಬೇಕು. ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಪೂರೈಕೆ ಕುರಿತು ವರದಿಯನ್ನು ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.
ಕೃಷಿ ಇಲಾಖೆ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಶೇ0.5 ರಷ್ಟು ಎಣ್ಣೆ ಗಾಣವನ್ನು ಪ್ರಾರಂಭಿಸಲಾಗುತ್ತದೆ.  ಇದರಲ್ಲಿ  ರೈತರಿಗೆ ಶೇ.75 ರಷ್ಟು ಲಾಭ. ಶೇ.25 ರಷ್ಟು ಸಬ್ಸಿಡಿ ಲಾಭ ದೊರೆಯಲಿದೆ. ಆದ್ದರಿಂದ ರೈತರು ಈ ಸೌಲಭ್ಯವನ್ನು ಸದ್ಭಳಕೆ ಮಾಡಿಕೊಳ್ಳಬೇಕು.   ರೈತರು ಎಲ್ಲಾ ರೀತಿಯಾ ಬೀಜಗಳನ್ನು ಎಣ್ಣೆಯನ್ನು ಉತ್ಪತ್ತಿ ಮಾಡಬಹುದು. ವಿವಿಧ ರೀತಿಯಾ ಬೀಜಗಳ ಎಣ್ಣೆಗೆ ತಕ್ಕಂತೆ ಮಾರುಕಟ್ಟೆಯ ಬೆಲೆಯನ್ನು ನಿರ್ಧರಿಸಬಹುದು. ಅಂದಾಜು 1 ಕೆ.ಜಿ.ಗೆ ಎಣ್ಣೆಗೆ ರೂ.300 ರಂತೆ ಮಾರುಕಟ್ಟೆಗೆ ನೀಡಬಹುದು. ಈ ಕುರಿತು ರೈತ ಸಂಪರ್ಕ ಕೇಂದ್ರಕ್ಕೆ ಮಾಹಿತಿ ಒದಗಿಸಬೇಕು ಎಂದರು.
ಹಿಂಗಾರು-ಮುAಗಾರು ಬೆಳೆ ಬೆಳೆಯುವ ರೈತರು ತಮ್ಮ ಮೂಲ ಬೆಳೆಯ ಕುರಿತು ಬೆಳೆ ದರ್ಶಕ ಆಪ್ಯ್ ಮೂಲಕ ಸಲ್ಲಿಸಬಹುದು. ಈ ಕುರಿತು ಕೃಷಿ ಇಲಾಖೆ ರೈತರ ಸರ್ವೇ ನಂಬರ್ ಆಧಾರಿಸಿ ಬೆಳೆ ವಿಮೆ ನೀಡಲು ಸಹಾಯವಾಗುತ್ತದೆ ಎಂದು ಕೃಷಿ ಇಲಾಖೆಯ ನಿರ್ದೇಶಕಿ ಶಬಾನ್ ಶೇಖ್ ಹೇಳಿದರು.
ಎಲ್ಲಾ ಅನುದಾನಿತ ಶಾಲೆಗಳಿಗೆ ಶೌಚಾಲಯದ ವ್ಯವಸ್ಥೆ ಕಲ್ಪಿಸಿಬೇಕು. ಅನುದಾನಿತ ವಸತಿ ಶಾ¯ಗಳಲ್ಲಿ ವಿದ್ಯುತ್ ಕಂಬ, ವಿದ್ಯುತ್ ಪರಿಕರಗಳ ಸೌಲಭ್ಯವನ್ನು ಸಂಬAಧಪಟ್ಟ ಅಧಿಕಾರಿಗಳು ಪರಿಶೀಲಿಸಬೇಕು. ಎಲ್ಲಾ ಅನುದಾನಿತ ಶಾಲೆಗಳ ಕಾಮಗಾರಿಯನ್ನು 15 ದಿನಗಳಲ್ಲಿ ಪೂರ್ಣಗೊಲಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿ. ರಘುನಂದನ್ ಮೂರ್ತಿ,  ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಕೃಷ್ಣಉಕ್ಕುಂದ ಸೇರಿದಂತೆ ಇತರೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Please follow and like us:
error