ಕೊರೊನಾ ವೈರಸ್ : ಒಂದು ವಾರ ವ್ಯಾಪಾರ ವಹಿವಾಟು ಸ್ಥಗಿತ

ಕೊಪ್ಪಳ, ಮಾ.  : ಕೊರೊನಾ ವೈರಸ್ ಸೋಂಕು ಹರಡುವಿಕೆ ಹಿನ್ನೆಲೆ ಜಿಲ್ಲೆಯಾದ್ಯಂತ ಒಂದು ವಾರದ ಮಟ್ಟಿಗೆ ವ್ಯಾಪಾರ ವಹಿವಾಟನ್ನು ಸ್ಥಗಿತಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ ತಿಳಿಸಿದ್ದಾರೆ.
ಮುಖ್ಯಮಂತ್ರಿಗಳು ಪತ್ರಿಕಾ ಗೋಷ್ಠಿಯಲ್ಲಿ ಸೂಚಿಸಿರುವಂತೆ ಕರ್ನಾಟಕ ರಾಜ್ಯಾದ್ಯಂತ ಕೊರೊನಾ (ಕೋವಿಡ್ 19) ವೈರಸ್‌ನಿಂದಾಗಿ ಸಂಭವಿಸಬಹುದಾದ ಅನಾಹುತಗಳನ್ನು ತಡೆಗಟ್ಟಲು ಒಂದು ವಾರದ ಮಟ್ಟಿಗೆ ಜನರು ಹೆಚ್ಚಾಗಿ ಸೇರುವಂತಹ ಸಂದರ್ಭಗಳನ್ನು ಮತ್ತು ಜಾತ್ರೆಗಳನ್ನು ರದ್ದುಪಡಿಸಬೇಕಾಗಿದ್ದು, ಕೊಪ್ಪಳ ಜಿಲ್ಲೆಯಾದ್ಯಂತ ಒಂದು ವಾರದವರೆಗೆ ವ್ಯಾಪಾರ ವಹಿವಾಟನ್ನು ಸ್ಥಗಿತಗೊಳಿಸಿ ಆದೇಶ ಹೊರಡಿಸಲಾಗಿದೆ.
ಕೊಪ್ಪಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಉಪಮಾರುಕಟ್ಟೆ ಪ್ರಾಂಗಣಗಳಾದ ಗಿಣಗೇರಿ, ಕೂಕನಪಳ್ಳಿ ಜಾನುವಾರು ಮಾರುಕಟ್ಟೆ ಪ್ರಾಂಗಣದಲ್ಲಿ ಜರುಗುವ ಜಾನುವಾರು ಮತ್ತು ಕುರಿ ವ್ಯಾಪಾರ ವಹಿವಾಟನ್ನು ಹಾಗೂ ತರಕಾರಿ ಮಾರುಕಟ್ಟೆಯ ವ್ಯಾಪಾರ ವಹಿವಾಟನ್ನು ಮಾರ್ಚ್. 14 ರಿಂದ ಒಂದು ವಾರದ ವರೆಗೆ ಸ್ಥಗಿತಗೊಳಿಸಲಾದೆ.  ಸಂತೆಗಳನ್ನು ಮರು ಪ್ರಾರಂಭಿಸುವ ದಿನಾಂಕವನ್ನು ಸರ್ಕಾರದ ಮುಂದಿನ ಆದೇಶದ ಅನ್ವಯ ರೈತ ಬಾಂಧವರು, ಸಾರ್ವಜನಿರು ಹಾಗೂ ಎಲ್ಲಾ ಪೇಟೆ ಕಾರ್ಯಕರ್ತರಿಗೆ ತಿಳಿಸಲಾಗುವುದು.  ಆದ್ದರಿಂದ ಎಲ್ಲರೂ ಸಹಕರಿಸಬೇಕು.  ನಾವು ವಾಸಿಸುವ ಪ್ರದೇಶದಲ್ಲಿ  ಕೊರೊನಾ ( ಕೋವಿಡ್ 19) ವೈರಸ್ ವ್ಯಾಪಕವಾಗಿ ಹರಡದಂತೆ ಎಲ್ಲರೂ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:
error