ಕೊಪ್ಪಳ : ಸಾರ್ವಜನಿಕರಿಗೆ ನಿತ್ಯಬಳಕೆ ವಸ್ತುಗಳನ್ನು ಒದಗಿಸಲು ನಗರಸಭೆಯಿಂದ ಸಿಬ್ಬಂದಿಗಳ ನೇಮಕ


ಕೊಪ್ಪಳ ಮಾ.  ಕೋವಿಡ್-19 ಸಂಕ್ರಾಮಿಕ ರೋಗ ಹರಡುವಿಕೆಯನ್ನು ತಡೆಗಟ್ಟಲು ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿಯಾಗಿದ್ದು, ಸಾರ್ವಜನಿಕರಿಗೆ ದಿನನಿತ್ಯದ ಬಳಕೆ ವಸ್ತುಗಳನ್ನು ಖರೀದಿಸುವಲ್ಲಿ ತೊಂದರೆಯಾಗಿರುವುದರಿAದ, ನಿತ್ಯ ಬಳಕೆಯ ಅಗತ್ಯ ವಸ್ತುಗಳನ್ನು ಮನೆಗಳಿಗೆ ಪೂರೈಕೆ ಮಾಡಲು ಮಾರಾಟಗಾರರು ಹಾಗೂ ಸಿಬ್ಬಂದಿಯನ್ನು ನಿಯೋಜಿಸುವಂತೆ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಹೊರಡಿಸಿದ ಆದೇಶದನ್ವಯ ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ದಿನನಿತ್ಯದ ಬಳಕೆ ವಸ್ತುಗಳನ್ನು ಮನೆಮನೆಗೆ ತೆರಳಿ ಕಡ್ಡಾಯವಾಗಿ ಸರಬರಾಜು ಮಾಡಲು ಸಿಬ್ಬಂದಿ ಹಾಗೂ ಮಾರಾಟಗಾರರನ್ನು ನೇಮಕ ಮಾಡಲಾಗಿದ್ದು, ಈ ಆದೇಶವು ಮಾರ್ಚ್ 25 ರಿಂದ ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತದೆ ಎಂದು ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.
ಕೊಪ್ಪಳ ನಗರದ ವಿವಿಧ ವಾರ್ಡ್ಗಳಲ್ಲಿರುವ ಸಾರ್ವಜನಿಕರಿಗೆ ದಿನನಿತ್ಯ ಬಳಕೆಯ ಅಗತ್ಯ ವಸ್ತುಗಳನ್ನು ಅಂದರೆ, ಹಾಲು, ಮೊಸರು, ತರಕಾರಿ, ಕಿರಾಣಿ ಸಾಮಗ್ರಿ ಹಾಗೂ ದಿನ ಪತ್ರಿಕೆಗಳನ್ನು ಅದೇ ವಾರ್ಡುಗಳಲ್ಲಿ ಒದಗಿಸುವ ಕುರಿತು ಆದೇಶದಲ್ಲಿ ತಿಳಿಸಲಾಗಿದೆ.
ನಗರಸಭೆ ವ್ಯಾಪ್ತಿಯ ವಾರ್ಡುಗಳಲ್ಲಿ, ಪ್ರದೇಶ, ಕ್ಷೇತ್ರಗಳಲ್ಲಿ, ಓಣಿ ಓಣಿಗಳಲ್ಲಿ ಸಂಚರಿಸುವ ಮೂಲಕ ಮನೆ-ಮನೆಗೆ ತೆರಳಿ ಮಾರಾಟಗಾರರು ಅಗತ್ಯ ವಸ್ತುಗಳನ್ನು ಮಾರತಕ್ಕದ್ದು. ಜನ ಸಂದಣಿ ಆಗದೇ ರೀತಿಯಲ್ಲಿ ಮುಂಜಾಗ್ರತಾ ಕ್ರಮ ವಹಿಸಬೇಕು. ವ್ಯಕ್ತಿಗಳ ಮಧ್ಯೆ ಕನಿಷ್ಠ 6 ಅಡಿಯ ಅಂತರ ಕಾಯ್ದುಕೊಳ್ಳುವ ಮೂಲಕ ಸಾಮಾಜಿಕ ದೂರ ಕಾಪಾಡಬೇಕು. ಸಾರ್ವಜನಿಕರಿಗೆ ಯಾವುದೇ ತೊಂದರೆ ಉಂಟು ಮಾಡಿದ ಪ್ರಕರಣ/ಪ್ರಮೇಯ ಉಂಟಾದಲ್ಲಿ ಅಂತವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಎಫ್.ಐ.ಆರ್ ದಾಖಲಿಸಲಾಗುವುದು. ಮಾರಾಟಗಾರರು ಹೆಚ್ಚಿನ ದರದಲ್ಲಿ ಮಾರಾಟ ಮಾಡಿದ್ದಲ್ಲಿ ನಗರಸಭೆ ಸಿಬ್ಬಂದಿ ತಕ್ಷಣ ವರದಿ ಮಾಡಬೇಕು ಹಾಗೂ ತಕ್ಷಣ ಕ್ರಮ ಕೈಗೊಳ್ಳಬೇಕು. ಗೂಗಲ್ ಪೇ, ಪೇಟಿಯಂ, ಫೋನ್‌ಪೇ ಹಾಗೂ ಇನ್ನಿತರ ವಿದ್ಯುನ್ಮಾನ ವಿಧಾನಗಳ ಮುಖಾಂತರ ಹಣ ಪಾವತಿಸುವುದಕ್ಕೆ ಕ್ರಮವಹಿಸಬೇಕು. ಮಾರಾಟಗಾರರು ಕಡ್ಡಾಯವಾಗಿ ಸೂಚಿಸಿದ ಪ್ರದೇಶ, ಕ್ಷೇತ್ರ, ವಾರ್ಡ್ಗಳಲ್ಲಿ ಮಾತ್ರ ಮಾರಾಟ ಮಾಡಬೇಕು.
ಅಗತ್ಯ ವಸ್ತುಗಳ ಪೂರೈಕೆಗಾಗಿ ನಗರಸಭೆ ವ್ಯಾಪ್ತಿಯಲ್ಲಿ ಬರುವ ವಾರ್ಡ್ಗಳಿಗೆ ಉಸ್ತುವಾರಿಯಾಗಿ ನಿಯೋಜಿಸಲಾದ ಸಿಬ್ಬಂದಿ ಹೆಸರು ಮತ್ತು ಮೊಬೈಲ್ ಸಂಖ್ಯೆಗಳು:
ಹಾಲು ಮತ್ತು ಮೊಸರು ಮಾರಾಟಗಾರರ ಉಸ್ತುವಾರಿ ಸಿಬ್ಬಂದಿ ವಿವರ;
ವಾರ್ಡ್ ಸಂಖ್ಯೆ 1 ಮತ್ತು 2-ದೇವರಾಜ ಮೊ.9880816276, ವಾರ್ಡ್ ಸಂ. 3 ಮತ್ತು 4-ದೇವಪ್ಪ ಗಿಣಿಗೇರಿ ಹಾಗೂ ಮೆಹಬೂಬ್ ಹೈ ಮೊ.8861885930, ವಾರ್ಡ್ ಸಂ. 5, 6, 7 ಮತ್ತು 8-ಗಿರೀಶ್ ಬಂಗಾರ್ ಶೆಟ್ಟರ್ ಮೊ.998050445, ವಾರ್ಡ್ ಸಂ. 9 ಮತ್ತು 10-ಶಂಕರ್ ದೇಶಪಾಂಡೆ ಮೊ.8073019633, ವಾರ್ಡ್ ಸಂ. 11, 12, 13 ಮತ್ತು 14-ಅಂದಪ್ಪ ಗಿಡ್ಡರ್ ಮೊ.9980143335, ವಾರ್ಡ್ ಸಂ. 15, 16, 17 ಮತ್ತು 18- ಸೋಮಪ್ಪ ಮೊ.7411945593, ವಾರ್ಡ್ ಸಂ. 19,20,21,22 ಮತ್ತು 23-ದುರುಗಪ್ಪ ಕಂದಾರಿ ಮೊ.8722116475, ವಾರ್ಡ್ ಸಂ. 24,25 ಮತ್ತು 26 (ವಿಕಾಸ್ ನಗರ, ಸತ್ಯದಾನಪುರ) ಹಾಗೂ (ಚನ್ನಬಸವ ನಗರ, ಕಲ್ಯಾಣ ನಗರ)-ಗವಿಸಿದ್ದಪ್ಪ ಕಟ್ಟಿಮನಿ ಮೊ.9731743009, ವಾರ್ಡ್ ಸಂ. 27, 28, 29, 30 ಮತ್ತು 31- ಸಲೀಂಸಾಬ ಮೊ. 9008816495.
ತರಕಾರಿ, ಹಣ್ಣು ಮತ್ತು ಕಿರಾಣಿ(ದಿನಸಿ ಸಾಮಗ್ರಿ) ಮಾರಾಟಗಾರರ ಉಸ್ತುವಾರಿ ಸಿಬ್ಬಂದಿ ವಿವರ;
ವಾರ್ಡ್ ಸಂ. 1 ಮತ್ತು 2- ದೇವರಾಜ ಮೊ. 9880816276, ವಾರ್ಡ್ ಸಂ. 3 (ಕುವೆಂಪು ನಗರ, ಹಮಾಲರ ಕಾಲೋನಿ, ಗಡದಾರಛಾಳ್, ನಿರ್ಮಿತಿ ಕೇಂದ್ರ, ಶ್ರೀಶೈಲ್ ನಗರ), ವಾರ್ಡ್ ಸಂ. 04- ದೇವಪ್ಪ ಗಿಣಿಗೇರಿ ಹಾಗೂ ಮೆಹಬೂಬ್ ಹೈ ಮೊ.8861885930, ವಾರ್ಡ್ ಸಂ. 5, 6, 7 ಮತ್ತು 8-ಗಿರೀಶ್ ಬಂಗಾರ್ ಶೆಟ್ಟರ್ ಮೊ.998050445, ವಾರ್ಡ್ ಸಂ. 9 ಮತ್ತು 10-ಶಂಕರ್ ದೇಶಪಾಂಡೆ ಮೊ.8073019633, ವಾರ್ಡ್ ಸಂ. 11, 12, 13 ಮತ್ತು 14-ಅಂದಪ್ಪ ಗಿಡ್ಡರ್ ಮೊ.9980143335, ವಾರ್ಡ್ ಸಂ. 15, 16, 17 ಮತ್ತು 18- ಸೋಮಪ್ಪ ಮೊ.7411945593, ವಾರ್ಡ್ ಸಂ. 19,20,21,22 ಮತ್ತು 23-ದುರುಗಪ್ಪ ಕಂದಾರಿ ಮೊ.8722116475, ವಾರ್ಡ್ ಸಂ. 24,25 ಮತ್ತು 26 (ಗಣೇಶ ತೆಗ್ಗು, ವಿಕಾಸ್ ನಗರ, ಸತ್ಯದಾನಪುರ ನಗರ, ಚನ್ನಬಸವ ನಗರ, ಕಲ್ಯಾಣ ನಗರ)-ಗವಿಸಿದ್ದಪ್ಪ ಕಟ್ಟಿಮನಿ ಮೊ.9731743009, ವಾರ್ಡ್ ಸಂ. 27 (ಬಿ.ಟಿ ಪಾಟೀಲ್ ನಗರ, ಪ್ರಶಾಂತ ನಗರ), ವಾರ್ಡ್ ಸಂ.  28(ಕಾಳಿದಾಸ ನಗರ, ಬೇಲ್ದಾರ್ ಕಾಲೋನಿ, ಮರಿಶಾಂತವೀರ ನಗರ), ವಾರ್ಡ್ ಸಂ. 29( ಗವಿಶ್ರೀ ನಗರ, ಹುಡ್ಕೋ ಕಾಲೋನಿ), ವಾರ್ಡ್ ಸಂ. 30 ಮತ್ತು 31- ಸಲೀಂಸಾಬ ಹಾಗೂ ಪರಶುರಾಮ ರೋಣದ ಮೊ. 9008816495.
ಈ ಮೇಲಿನ ಮಾರಾಟಕ್ಕೆ ಸಾರ್ವಜನಿಕರ ಅನುಕೂಲಕ್ಕಾಗಿ ನಗರಸಭೆಯಿಂದ ನಿಯೋಜಿಸಿದ ಸಿಬ್ಬಂದಿಗಳ ಮೇಲುಸ್ತುವಾರಿ ಕ್ರಮಕ್ಕಾಗಿ, ವಾರ್ಡ್ ಸಂ.  1 ರಿಂದ 10 ರವರೆಗೆ- ಕಿರಿಯ ಆಹಾರ ನಿರೀಕ್ಷಕರಾದ ರಾಘವೇಂದ್ರ, ವಾರ್ಡ್ ಸಂ. 11 ರಿಂದ 20 ರವರೆಗೆ ಪ್ರ.ದ.ಸ. ಶಿವನಗೌಡ ಪಾಟೀಲ್, ವಾರ್ಡ್ ಸಂ. 21 ರಿಂದ 31 ರವರೆಗೆ ಸಮುದಾಯ ಸಂಘಟನಾಧಿಕಾರಿಯಾದ ಮಂಜುನಾಥ ಜಿ. ಬೆಲ್ಲದ್ ಅವರನ್ನು ನೇಮಕ ಮಾಡಲಾಗಿದೆ ಎಂದು ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:
error