ಕೊಪ್ಪಳ ವಿಭಾಗ ಕಚೇರಿಗೆ ಜೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕರ ಭೇಟಿ

ಕೊಪ್ಪಳ,   ಜೆಸ್ಕಾಂನ ಕಲಬುರಗಿ ವಿಭಾಗದ ವ್ಯವಸ್ಥಾಪಕ ನಿರ್ದೇಶಕರಾದ ರಾಹುಲ್ ತುಕಾರಾಮರವರು ಮಂಗಳವಾರದAದು(ಮಾರ್ಚ್.09) ರಂದು ಕೊಪ್ಪಳ ವಿಭಾಗ ಕಚೇರಿಗೆ ಭೇಟಿ ನೀಡಿ, ಪರಿಶೀಲನಾ ಸಭೆಯನ್ನು ನಡೆಸಿದರು.
ಸಭೆಯಲ್ಲಿ ನೌಕರರ ಬೇಡಿಕೆ ಮತ್ತು ಕುಂದುಕೊರತೆಗಳ ಪಟ್ಟಿಯನ್ನು ಮತ್ತು ಜಿಲ್ಲಾ ಕೇಂದ್ರದಲ್ಲಿ ವೃತ್ತ ಕಚೇರಿ ಸ್ಥಳಾಂತರಿಸಿ, ಸಂಕೀರ್ಣ ಕಚೇರಿ ನಿರ್ಮಾಣ ಮಾಡಲು ಕ.ವಿ.ಪ್ರ.ನಿ.ನೌಕರರ ಸಂಘ 659 ವತಿಯಿಂದ ಮನವಿಯನ್ನು ಸಲ್ಲಿಸಲಾಯಿತು. ಈ ಕುರಿತು ಕಂಪನಿ ಆದೇಶದಂತೆ ಕ್ರಮ ವಹಿಸಲು ಬಳ್ಳಾರಿಯ ಮುಖ್ಯ ಅಭಿಯಂತರರಿಗೆ ವ್ಯವಸ್ಥಾಪಕ ನಿರ್ದೇಶಕರು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಕ.ವಿ.ಪ್ರ.ನಿ ನೌಕರರ ಸಂಘದ ಕೇಂದ್ರ ಕಾರ್ಯಕಾರಿ ಸಮಿತಿಯ ಸದಸ್ಯರಾದ ನಾಗರಾಜ್ ಗಾಯಕವಾಡ ಹಾಗೂ ಅನಾಳಪ್ಪ, ಕಾರ್ಯನಿರ್ವಾಹಕ ಇಂಜಿನಿಯರ್ ಎಂ.ಎಸ್.ಪತ್ತಾರ, ಲೆಕ್ಕಾಧಿಕಾರಿ ಕೆ.ಹನುಮಂತಪ್ಪ ಸೇರಿದಂತೆ ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

Please follow and like us:
error