ಕೊಪ್ಪಳ ಪೋಲಿಸರ ಭರ್ಜರಿ ಹೊಸ ವರ್ಷಾಚರಣೆ :  ರೇಷ್ಮೆ ಡ್ರೆಸ್ ನಲ್ಲಿ ಮಿಂಚಿದ ಪೋಲಿಸ್ ಅಧಿಕಾರಿಗಳು

ಮದುವೆಗೆ ಸಿದ್ದರಾದ ಮದುಮಕ್ಕಳಂತೆ

ಪೋಲಿಸ್ ಅಧಿಕಾರಿಗಳ ಡ್ರೆಸ್ಸಿಂಗ್

ಕೊಪ್ಪಳ : ನಿನ್ನೆ ರಾತ್ರಿಯಿಡಿ ಬಂದೋಬಸ್ತಿನಿಂದ ಬಸವಳಿ

 

ದಿದ್ದರೂ ಸಹ ಬೆಳಗಾಗುತ್ತಲೇ ಕೊಪ್ಪಳ ಜಿಲ್ಲೆಯ ಪೋಲಿಸರು ಸಂಭ್ರಮದಿಂದ ಹೊಸ ವರ್ಷಾಚರಣೆಯಲ್ಲಿ ತೊಡಗಿದ್ದಾರೆ. ಬಹಳ ವರ್ಷಗಳಿಂದ ಕೊಪ್ಪಳದ ಜನತೆಯ ಬೇಡಿಕೆಯಾಗಿದ್ದ ಟ್ರಾಪಿಕ್ ಲೈಟ್, ಸಿಗ್ನಲ್ , ಕ್ಯಾಮರಾ ಅಳವಡಿಕೆ ಮತ್ತು ಪೋಲಿಸರಿಗೆ ಶೆಲ್ಟರ್ ವ್ಯವಸ್ಥೆಯನ್ನು ಇಂದು ಅಧಿಕೃತವಾಗಿ ಉದ್ಘಾಟಿಸಲಾಯಿತು. ಗವಿಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು

 

ಇಂದು ಲೋಕಾರ್ಪಣೆ ಮಾಡಿದರು. ಎಸ್ಪಿ ಟಿ.ಶ್ರೀಧರ ರಿಬ್ಬನ್ ಕಟ್ ಮಾಡಿದರು

ಈ ಸಂದರ್ಭದಲ್ಲಿ ಮದುವೆ ಮನೆ ಸಿಂಗರಿಸಿದಂತೆ ವೃತ್ತಗಳಲ್ಲಿರುವ ಟ್ರಾಪಿಕ್ ಪೊಲಿಸರ ಶೆಲ್ಟರ್ ಗಳನ್ನು ಸಿಂಗಾರ ಮಾಡಲಾಗಿತ್ತು. ಮದುವೆಗೆ ಸಿದ್ದರಾದ ಮದುಮಕ್ಕಳಂತೆ ಪೋಲಿಸ್ ಅಧಿಕಾರಿಗಳು ಡ್ರೆಸ್ಸಿಂಗ್ ಮಾಡಿಕೊಂಡಿದ್ದ ಎಲ್ಲರನ್ನು ಸೆಳಯಿತು. ರೇಷ್ಮಿಯ ಲುಂಗಿ, ರೇಷ್ಮಿ ಶರ್ಟ್ ಮೇಲೊಂದು ರೇಷ್ಮಿ ಶಲ್ಯ ಹೊದ್ದುಕೊಂಡು ಭರ್ಜರಿ ಸಂಭ್ರಮದಿಂದ ಪೋಲಿಸರು ಭಾಗವಹಿಸಿದ್ದರು.

ಕೊಪ್ಪಳ ಡಿವಿಜನ್ ನ ಎಲ್ಲ ಸಿಪಿಐಗಳು, ಪಿಎಸ್ಐ ಗಳು, ಇನ್ಸಪೆಕ್ಟರ್ ಗಳು  ಎಲ್ಲರೂ ಒಂದೇ ಡ್ರೆಸ್ ಕೊಡಿನಲ್ಲಿದ್ದದ್ದು ಕಂಡು ಬಂತು. ಇದೇ ಧಿರಿಸಿನಲ್ಲಿ  ಡಿಎಸ್ಪಿ ವೆಂಕಟಪ್ಪ ನಾಯಕರ ನೇತೃತ್ವದಲ್ಲಿ ಗಣ್ಯರ ಮನೆಗೆ ಭೇಟಿ ನೀಡಿ ಹೊಸ ವರ್ಷಕ್ಕೆ ಶುಭಕೋರಿದರು. ಸಂಸದ ಕರಡಿ ಸಂಗಣ್ಣನವರ ಮನೆಗೆ ಭೇಟಿ ನೀಡಿ ಹೂಗೂಚ್ಛ ನೀಡಿ ಕೇಕ್ ಕತ್ತರಿಸಿ ಶುಭಕೋರಿದರು.  ಬಿಜೆಪಿ ಮುಖಂಡ ಅಮರೇಶ ಕರಡಿ ಜೊತೆ ಗ್ರೂಪ್ ಫೋಟೋ ತೆಗೆಸಿಕೊಂಡು ಸಂಭ್ರಮಿಸಿದರು.  ಗಂಗಾವತಿಯ ಡಿಎಸ್ಪಿ ಆರ್.ಎಸ್.ಉಜ್ಜನಿಕೊಪ್ಪ ಟೀಂ ಸಹ  ಸಂಸದರ ಮನೆಗೆ ಭೇಟಿ ನೀಡಿ ಶುಭ ಹಾರೈಸಿದರು.

ಎಸ್ಪಿ ಟಿ.ಶ್ರೀಧರ್ ಜಿಡ್ಡುಗಟ್ಟಿದ್ದ ಇಲಾಖೆಗೆ ಜೀವ ತುಂಬಿದ್ದಾರೆ. ದುರಸ್ತಿಯಲ್ಲಿದ್ದ ಟ್ರಾಫಿಕ್ ಸಿಗ್ನಲ್‌ಗಳನ್ನು ಸರಿಪಡಿಸಿದರು. ಆನಂತರ ಸಂಚಾರಿ ಠಾಣೆಯ ಪಿಎಸ್ಐ ಅಮರೇಶ ಹುಬ್ಬಳ್ಳಿ ನೇತೃತ್ವದಲ್ಲಿ‌ ನಗರದ ವಿವಿಧ ಪ್ರಮುಖ ವೃತ್ತಗಳಲ್ಲಿ ಪೊಲೀಸ್ ಚೌಕಿ, ಮೈಕ್, ಸಂಚಾರಿ ರೇಖೆ ಹಾಕಿ ಶಿಸ್ತು ತಂದಿದ್ದಾರೆ.

Please follow and like us:
error