ಕೊಪ್ಪಳ ನಗರಸಭೆ: ಕನ್ನಡದಲ್ಲಿ ನಾಮಫಲಕ ಅಳವಡಿಸಲು ಸೂಚನೆ


ಕೊಪ್ಪಳ,  : ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ಬರುವ ಯಾವುದೇ ಉದ್ದಿಮೆದಾರರು ತಮಗೆ ಸಂಬAಧಿಸಿದ ಯಾವುದೇ ನಾಮಫಲಕವನ್ನು ಆಂಗ್ಲ ಭಾಷೆ ಅಥವಾ ಇನ್ಯಾವುದೇ ಭಾಷೆಯಲ್ಲಿ ಬರೆಯಿಸದೆ ಕಡ್ಡಾಯವಾಗಿ ಕನ್ನಡ ಭಾಷೆಯಲ್ಲಿ ನಾಮಫಲಕವನ್ನು ಅಳವಡಿಸುವಂತೆ ನಗರಸಭೆ ಪೌರಾಯುಕ್ತರು ಸೂಚನೆ ನೀಡಿದ್ದಾರೆ.
ನಗರಸಭೆ ವ್ಯಾಪ್ತಿಯಲ್ಲಿ ಬರುವ ವಿವಿಧ ಉದ್ದಿಮೆದಾರರು ನಡೆಸುತ್ತಿರುವ ಕಲ್ಯಾಣ ಮಂಟಪ, ಸಿನಿಮಾ ಥಿಯೇಟರ್, ಬಾರ್ ಮತ್ತು ರೆಸ್ಟೋರೆಂಟ್, ವಸತಿ ಗೃಹಗಳು, ಪೆಟ್ರೋಲ್ ಬಂಕ್‌ಗಳು, ಖಾಸಗಿ ಶಿಕ್ಷಣ ಸಂಸ್ಥೆಗಳು, ಮೊಬೈಲ್ ಅಂಗಡಿಗಳು, ಆಭರಣ ಅಂಗಡಿಗಳು, ಕಿರಾಣಿ ಅಂಗಡಿ, ಹೋಟೆಲ್, ಖಾನಾವಳಿ ಉದ್ದಿಮೆ, ಬ್ಯಾಂಕ್‌ಗಳು, ಖಾಸಗಿ ಫೈನಾನ್ಸ್ಗಳು, ಸಹಕಾರಿ ಸಂಘ ಸಂಸ್ಥೆಗಳ ಬ್ಯಾಂಕುಗಳು ಹಾಗೂ ಇನ್ನಿತರ ಉದ್ದಿಮೆದಾರರು ಕರ್ನಾಟಕ ರಾಜ್ಯದಲ್ಲಿ ಕಡ್ಡಾಯವಾಗಿ ಕನ್ನಡಕ್ಕೆ ಪ್ರಥಮ ಪ್ರಾಶಸ್ತö್ಯ ನೀಡಲು ಕರ್ನಾಟಕ ಸರ್ಕಾರ ಆದೇಶವನ್ನು ಜಾರಿಮಾಡಿದೆ.
ಈ ಆದೇಶದಂತೆ ನಗರಸಭೆ ವ್ಯಾಪ್ತಿಯ ಎಲ್ಲ ಉದ್ದಿಮೆದಾರರು ಪ್ರಕಟಣೆ ಪ್ರಕಟಗೊಂಡ 7 ದಿನಗಳೊಳಗೆ ತಮಗೆ ಸಂಬAಧಪಟ್ಟAತೆ ಆಂಗ್ಲಭಾಷೆ ಹಾಗೂ ಇನ್ನಿತರೆ ಯಾವುದೇ ಭಾಷೆಯಲ್ಲಿ ನಾಮಫಲಕಗಳು ಇದ್ದಲ್ಲಿ ಅವುಗಳನ್ನು ತೆರವುಗೊಳಿಸಿ ಕನ್ನಡದ ನಾಮಫಲಕಗಳನ್ನು ಅಳವಡಿಸಿಕೊಳ್ಳತಕ್ಕದ್ದು. ತಪ್ಪಿದಲ್ಲಿ ಅಂತಹ ಉದ್ದಿಮೆದಾರರಿಗೆ ದಂಡವನ್ನು ವಿಧಿಸಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಹಾಗೂ ಉದ್ದಿಮೆ ಪರವಾನಿಗೆಯನ್ನು ರದ್ದುಗೊಳಿಸಲಾಗುವುದು ಎಂದು   ತಿಳಿಸಿದ್ದಾರೆ.

Please follow and like us:
error