ಕೊಪ್ಪಳ, ಧಾರವಾಡ.ಗದಗ ಹಾವೇರಿ ಕಾರವಾರ ಶಿವಮೊಗ್ಗ ಚಿತ್ರದುರ್ಗ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಮೋಡ ಬಿತ್ತನೆ ಕಾರ್ಯಾಚರಣೆ : ಉತ್ತಮ ಮಳೆ

.ಸೆ.೨೫ : ಸರ್ಕಾರದ ವರ್ಷಧಾರೆ ಮೋಡಬಿತ್ತನೆ ಕಾರ್ಯಾಚರಣೆಯು ಮುಂದುವರಿದಿದ್ದು ಸೆ.೨೫ ರಂದು ಎರಡು ವಿಮಾನಗಳು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಾರ್ಯಾಚರಣೆ ನಡೆಸಿವೆ.

ಎನ್ ೨೬೭ಸಿಬಿ ವಿಮಾನವು ಮಧ್ಯಾಹ್ನ ೧.೫೦ ರಿಂದ ಸಂಜೆ ೫.೨೧ ವರೆಗೆ ಕಾರ್ಯಾಚರಣೆ ನಡೆಸಿ ೧೮ ಫ್ಲರ್ಯಸ್‌ಗಳನ್ನು ಉರಿಸಿದರೆ, ಎನ್೬೧೧೧ವಿ ವಿಮಾನವು ಮಧ್ಯಾಹ್ನ ೩.೨೮ ರಿಂದ ಸಂಜೆ ೬.೧೦ ವರೆಗೆ ಕಾರ್ಯಾಚರಣೆ ನಡೆಸಿ ೧೭ ಫ್ಲರ್ಯಸ್‌ಗಳನ್ನು ಉರಿಸಿದೆ.
ಗದಗ ಜಿಲ್ಲೆಯ ಗದಗ, ರೋಣ ತಾಲೂಕುಗಳ ತೊಂಡಿಹಾಳ,ಆಲೂರು, ಕೊಪ್ಪಳ ಜಿಲ್ಲೆಯ ಕೊಪ್ಪಳ, ಕುಷ್ಟಗಿ, ಯಲಬುರ್ಗ, ತಾಲೂಕುಗಳ ಬನ್ನಿಕೊಪ್ಪ, ಕಂದಕೂರು, ಬಲುಟುಗಿ, ಮೇಗೂರು, ರೈವಂಕಿ, ತೊಣಿಸಿಹಾಳ ಗೋಟಗಿ, ಧಾರವಾಢ ಜಿಲ್ಲೆಯ ಧಾರವಾಡ ಹುಬ್ಬಳ್ಳಿ ಕಲಘಟಗಿ ತಾಲೂಕುಗಳ ಕರಡಿಗುಡ್ಡ, ಇನಾಮಹೊಂಗಲ, ವರೂರು ಗಂಜಿಗಟ್ಟಿ ಮಿಶ್ರಿಕೋಟಿ, ಕಟ್ನೂರು, ಕಲಘಟಗಿ ಸುತ್ತಮುತ್ತ ಕಾರವಾರ ಜಿಲ್ಲೆಯ ಶಿರಸಿ, ಯಲ್ಲಾಪುರ, ಮಂಡಗೋಡ ತಾಲೂಕುಗಳ ಅಗಸಾಳ, ಮುಂಡರಜಡ್ಡಿ, ಹಿಟ್ಲಹಳ್ಳಿ, ಹಳೇಚಾವತಿ, ಇಂದೂರು, ಹುನುಗುಂದ, ಹಾವೇರಿ ಜಿಲ್ಲೆಯ ಹಾನಗಲ್ , ಹಿರೇಕೊರೂರು, ತಾಲೂಕುಗಳ ಅಕ್ಕಿಆಲೂರು, ಕಲ್ಲಾಪುರ, ಹಿರೆಕೆರೂರು, ಬಸರಿಹಳ್ಳಿ, ರಟ್ಟಿಹಳ್ಳಿ, ಕೋರಟಗಿರೆ, ತಾವರಗಿ, ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಸಂಡೆಕೋಪ್ಪ, ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಬೊಮ್ಮಗಟ್ಟ, ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ಕ್ಯಾಸಪರ, ನಾಗಸಮುದ್ರ, ಗುಡೆಕೋಟೆ ಊರುಗಳ ಸುತ್ತಮುತ್ತ ಮೋಡಬಿತ್ತನೆ ನೆಡೆಸಲಾಗಿದೆ.

Please follow and like us:
error