ಕೊಪ್ಪಳ ಜಿಲ್ಲೆ 10335 ಜನರಿಗೆ ಮೊದಲ ಹಂತದಲ್ಲಿ ಕೊವಿಡ್ ವಾಕ್ಸಿನ್

ಕೊಪ್ಪಳ : ಕೊವಿಡ್ ವಾಕ್ಸಿನ್ ವಿತರಣೆಗೆ ಎಲ್ಲ ರೀತಿಯ ಸಿದ್ದತೆಗಳನ್ನು ಕೈಗೊಳ್ಳಲಾಗುತ್ತಿದ್ದು  ಮೊದಲ ಹಂತದಲ್ಲಿ ಯಾರಿಗೆ ನೀಡಬೇಕು ಎನ್ನುವ ಪಟ್ಟಿಯನ್ನು ಸಿದ್ದ ಮಾಡಿಕೊಳ್ಳಲಾಗಿದೆ. ಪ್ರಂಟಲೈನ್ ವರ್ಕರ್ಸ ,ಕೊವಿಡ್ ವಾರಿಯರ್ಸಗಳಿಗೆ ಮೊದಲ ಹಂತದಲ್ಲಿ ಲಸಿಕೆ ನೀಡಲಾಗುವುದು. ಇವರ   ಸಂಖ್ಯೆ ೧೦೩೩೫ ಇದೆ ಎಂದು  ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಹೇಳಿದ್ದಾರೆ.

 

 

ಮೊದಲ ಹಂತದಲ್ಲಿ  ವಾರಿಯರ್ಸ್ ಮತ್ತು ಪ್ರಂಟಲೈನ್ ವರ್ಕರ್ಸ್ ಗಳಿಗೆ ಲಸಿಕೆ ನೀಡಲಾಗುವುದು ಜಿಲ್ಲೆಯಾದ್ಯಂತ ಮೊದಲು 20 .ಲಸಿಕಾ  ಕೇಂದ್ರಗಳನ್ನು ಆರಂಭಿಸಲಾಗುತ್ತಿದ್ದು ಅವಶ್ಯಕತೆಗನು ಗುಣವಾಗಿ ೨೫ ಕೇಂದ್ರಗಳನ್ನು ತೆರೆದು  ಲಸಿಕೆ ನೀಡಲಾಗುವುದು .ಪ್ರತಿದಿನ ಒಂದು ಸೆಂಟರ್ ನಲ್ಲಿ ೧೦೦ ಜನರಿಗೆ ವಾಕ್ಣಿನ್ ನೀಡಲಾಗುವುದು ಒಂದು ವಾರದಲ್ಲಿ ೧೦೩೩೫ ಜನರಿಗೆ ವಾಕ್ಸಿನ್ ನೀಡುವ ಗುರಿ ಹೊಂದಿದ್ದೇವೆ ಎಂದು ಜಿಲ್ಲಾಧಿಕಾರಿ ಹೇಳಿದ್ಧಾರೆ.

Please follow and like us:
error