ಕೊಪ್ಪಳ ಜಿಲ್ಲೆಯ ಡಾ. ಪ್ರಮೋದ ಕಟ್ಟಿ ಅವರಿಗೆ “ಜೀವಮಾನ ಸಾಧನೆ ಪ್ರಶಸ್ತಿ”

ಕೊಪ್ಪಳ ಅ.  ಕೃಷಿ ವಿಶ್ವವಿದ್ಯಾಲಯ ರಾಯಚೂರಿನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಗುನ್ನಾಳ ಗ್ರಾಮದ ಡಾ. ಪ್ರಮೋದ ಕಟ್ಟಿ ಅವರಿಗೆ “ಜೀವಮಾನ ಸಾಧನೆ ಪ್ರಶಸಿ” ಲಭಿಸಿದೆ.
ಅಂತರಾಷ್ಟ್ರೀಯ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳ ಸಂಘದ ವತಿಯಿಂದ ಗೋವಾದ ಪಣಜಿಯ ಅಂತರಾಷ್ಟ್ರೀಯ ಕೇಂದ್ರದಲ್ಲಿ ಕಳೆದ ಅ. ೨೮ ರಂದು ನಡೆದ ಸಮಾರಂಭದಲ್ಲಿ ಅವರಿಗೆ “ಜೀವಮಾನ ಸಾಧನೆ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಡಾ. ಪ್ರಮೋದ ಕಟ್ಟಿ ಅವರು ಕಳೆದ ೨೩ ವರ್ಷಗಳಿಂದ ಕೃಷಿ ವಿಶ್ವವಿದ್ಯಾಲಯ ರಾಯಚೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಶಿಕ್ಷಣ, ಸಂಶೋಧನೆ, ವಿಸ್ತರಣೆ ಮತ್ತು ಆಡಳಿತಗಳಲ್ಲಿ ಅವರು ಸಲ್ಲಿಸಿದ ಸೇವೆಯನ್ನು ಗೌರವಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಪ್ರಸ್ತುತ ಇವರು ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರಕಟಣಾ ಕೇಂದ್ರದ ಮುಖ್ಯಸ್ಥರಾಗಿ ಮತ್ತು ವಿಶ್ವವಿದ್ಯಾಲಯದ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಡಾ. ಪ್ರಮೋದ ಕಟ್ಟಿ – ೯೪೮೩೦೬೬೯೨೦.
ಸಮಾರಂಭದಲ್ಲಿ ಅಂತರಾಷ್ಟ್ರೀಯ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರದ ಅಧ್ಯಕ್ಷರಾದ ಡಾ. ಎ.ಕೆ. ಶರ್ಮ, ಜಿ.ಐ.ಇ.ಟಿ ನಿರ್ದೇಶಕ ಡಾ. ಆಶಿಷ ದತ್ತ, ಗುಜರಾತ ರಾಜ್ಯ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ.ಕೆ. ಪಡಾಲಿಯಾ, ನವದೆಹಲಿಯ ಇಂದ್ರಪ್ರಸ್ಥ ವಿಶ್ವವಿದ್ಯಾಲಯದ ಜಂಟಿ ಕುಲಸಚಿವ ಡಾ. ನಿತಿನ್ ಮಲ್ಲಿಕ್, ಗೋವಾದ ಹಿರಿಯ ಪೋಲಿಸ್ ಅಧಿಕಾರಿ ಜಾರ್ಜ, ಅಂತರಾಷ್ಟ್ರೀಯ ಶಿಕ್ಷಣ ಸಲಹೆಗಾರರಾದ ಡಾ. ಜಿಡಾಪೆ ಟಾವರೆ ಮತ್ತು ಇತರರು ಹಾಜರಿದ್ದರು. ವಿಜ್ಞಾನದ ಇನ್ನಿತರ ಕ್ಷೇತ್ರಗಳಾದ ರಕ್ಷಣಾ ಸಂಶೋಧನೆ, ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಕ್ಷೇತ್ರಗಳಲ್ಲಿನ ಗಣನೀಯ ಸೇವೆಯನ್ನು ಗೌರವಿಸಿ, ಇತರ ನಾಲ್ಕು ಸಾಧಕರನ್ನು ಸಹ ಜೀವಮಾನ ಸಾಧನೆಗಾಗಿ ಇದೇ ಸಂದರ್ಭದಲ್ಲಿ ಗೌರವಿಸಲಾಯಿತು ಎಂದು ಕೊಪ್ಪಳ ಕೃಷಿ ವಿಸ್ತರಣ ಶಿಕ್ಷಣ ಕೇಂದ್ರದ ವಿಸ್ತರಣ ಮುಂದಾಳು ಡಾ. ಎಂ.ಬಿ ಪಾಟೀಲ್  ತಿಳಿಸಿದ್ದಾರೆ.

Please follow and like us:
error