ಕೊಪ್ಪಳ ಜಿಲ್ಲೆಯಲ್ಲಿ ಮತ್ತೆ ಕೊರೊನಾ ರಣಕೇಕೆ. : 6 ಪಾಜಿಟಿವ್ ಪ್ರಕರಣಗಳು ಪತ್ತೆ

ಕೊಪ್ಪಳ: ಕೊಪ್ಪಳ ಜಿಲ್ಲೆಯಲ್ಲಿ ಮತ್ತೆ ಕೊರೊನಾ ರಣಕೇಕೆ ಹಾಕಿದ್ದು  ಇಂದು ಮತ್ತೇ 6 ಕೊರೊನಾ ಪಾಜಿಟಿವ್ ಕೇಸಗಳು ದೃಢವಾಗಿವೆ. ಕೊಪ್ಪಳ ತಾಲೂಕಿನ ಹುಲಿಗಿಯ 65 ವರ್ಷದ ಪುರುಷ , ಬಳ್ಳಾರಿಒ ಜಿಲ್ಲೆಯ ಮಲಪನಗುಡಿಯಿಂದ ಬಂದಂತವರು , ಹೊಸಲಿಂಗಾಪೂರದ 38 ವರ್ಷದ ಪುರುಷನಿಗೆ ಜಿಂದಾಲ್ ಸೋಂಕು ಲಿಂಕಾಗಿದೆ. ಯಲಬುರ್ಗಾ ತಾಲೂಕಿನ ಕಕ್ಕಿಹಳ್ಳಿಯಲ್ಲಿ 14 ವರ್ಷದ ಬಾಲಕ ಬೆಂಗಳೂರಿನಿಂದ ಬಂದ ಟ್ರಾವೆಲ್ ಹಿಸ್ಟರಿ,  ಗಂಗಾವತಿ ತಾಲೂಕಿನ ಶ್ರೀರಾಮನಗದಲ್ಲಿ ಮೂರು ಪ್ರಕರಣಗಳು 45 ವರ್ಷದ ಪುರುಷ, 17 ವರ್ಷದ ಬಾಲಕಿ ಹಾಗೂ 45 ವರ್ಷದ ಮಹಿಳೆಗೆ ಸೋಂಕು ಪತ್ತೆಯಾಗಿದ್ದು ಇವರೆಲ್ಲರೂ ಆಂದ್ರಪ್ರದೇಶದಿಂದ ಬಂದಂತವರು.

 

ಒಟ್ಟು ಆರು ಪ್ರಕರಣಗಳು ಪತ್ತೆಯಾಗುವುದರೊಂದಿಗೆ ಜಿಲ್ಲೆಯಲ್ಲಿ  28  ಪಾಜಿಟಿವ್ ಪ್ರಕರಣಗಳು ಪತ್ತೆಯಾದಂತಾಗಿದೆ. ಇಲ್ಲಿಯೂ ಸಹ ಜಿಂದಾಲ್ ತನ್ನ ಸೋಂಕು ಹರಡಿದೆ. ದಿನೇ ದಿನೇ ಹೆಚ್ಚಾಗುತ್ತಿರುವ ಪ್ರಕರಣಗಳಿಂದಾಗಿ ಜಿಲ್ಲೆಯ ಜನತೆಯಲ್ಲಿ ಆತಂಕ ಹೆಚ್ಚಾಗಿದೆ. ಒಂದೇ ದಿನ 6 ಪ್ರಕರಣಗಳಿಂದ ಜನತೆ ಭಯಪಡುವಂತಾಗಿದೆ. ಮೊನ್ನೆಯಷ್ಟೇ ಪಾಜಿಟಿವ್ ಬಂದಿದ್ದ ಮಹಿಳೆ ಸಾವನ್ನಪ್ಪಿದ್ದು ಜನತೆಯ ಆತಂಕ ಹೆಚ್ಚಾಗಲು ಕಾರಣವಾಗಿದೆ. ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಪಾಜಿಟಿವ್ ಪ್ರಕರಗಣಗಳ ಕುರಿತು ಅಧಿಕೃತ ಮಾಹಿತಿ ನೀಡಿದ್ದಾರೆ.

Please follow and like us:
error