ಕೊಪ್ಪಳ ಜಿಲ್ಲೆಗೆ ಮತ್ತೊಂದು ಕರಾಳ ದಿನ : 15 ಸಾವು,560 ಪಾಜಿಟಿವ್

 

ಜನರೇ ಎಚ್ಚರಗೊಳ‍್ಳಿ –ಅನಾವಶ್ಯಕ ಹೊರಗಡೆ ತಿರುಗಾಡಬೇಡಿ

ಕನ್ನಡನೆಟ್ ನ್ಯೂಸ್ : ದಿನದಿಂದ ದಿನಕ್ಕೆ ಕೊಪ್ಪಳ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ ಏರುತ್ತಲೇ ಇದೆ. ಇಂದು ಒಂದೇ ದಿನದಲ್ಲಿ 15 ಜನ ಸಾವನ್ನಪ್ಪಿದ್ದಾರೆ.  ಇದರೊಂದಿಗೆ ಜಿಲ್ಲೆಯಲ್ಲಿ ಇದುವರೆಗೆ ಸಾವನ್ನಪ್ಪಿದವರ ಸಂಖ್ಯೆ 406 ತಲುಪಿದೆ. ಜಿಲ್ಲೆಯಲ್ಲಿಂದು 560 ಪಾಜಿಟಿವ್  ಪ್ರಕರಣಗಳು ವರದಿಯಾಗಿವೆ.  ಗಂಗಾವತಿ 322, ಕೊಪ್ಪಳ 154 ಯಲಬುರ್ಗಾ 33 ಕುಷ್ಟಗಿ 51 ಪ್ರಕರಣಗಳು ವರದಿಯಾಗಿವೆ.  ಈತನಕ 23892 ಪಾಜಿಟಿವ್ ಪ್ರಕರಣಗಳು ಪತ್ತೆಯಾಗಿದ್ದು 18481  ಜನ ಗುಣಮುಖರಾಗಿದ್ದಾರೆ. 4425 ಜನ ಹೋಮ ಐಸೋಲೇಷನ್ ನಲ್ಲಿದ್ದಾರೆ. ಇಂದು 618 ಜನ ಡಿಸ್ಚಾರ್ಜ ಆಗಿದ್ದಾರೆ.  ಜಿಲ್ಲೆಯ ಜನತೆ ಎಚ್ಚೆತ್ತುಕೊಳ್ಳದಿದ್ದರೆ ಸಾವಿನ ಸಂಖ್ಯೆ ಹೆಚ್ಚಾಗುತ್ತಲೇ ಹೋಗುತ್ತದೆ. ದಯವಿಟ್ಟು ಜಿಲ್ಲೆಯ ಜನತೆ ಎಚ್ಚರಗೊಳ್ಳಿ ಮುನ್ನೆಚ್ಚರಿಕೆ ವಹಿಸಿ

Please follow and like us:
error