ಕೊಪ್ಪಳ ಜಿಲ್ಲಾ ಲಿಂಗಾಯತ ಸಮಾವೇಶ

: ೧೧.೧೧.೨೦೧೭ ರಂದು ಲಿಂಗಾಯತ ಸಮಾವೇಶವು ನಗರದ  ಗದಗ ರಸ್ತೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಿಗ್ಗೆ ೧೦ ಗಂಟೆಗೆ ಜರುಗಲಿದೆ. ಈ ಸಮಾವೇಶಕ್ಕಾಗಿ ನಗರದ ಸಿಟಿ ಬಸ್‌ಗಳು ಜಿಲ್ಲಾ ಕ್ರೀಡಾಂಗಣಕ್ಕೆ ಸಂಚರಿಸಲಿವೆ, ಸಮಾವೇಶದಲ್ಲಿ ಪಾಲ್ಗೊಳ್ಳುವ ಶರಣಬಂಧುಗಳಿಗೆ ಪ್ರಸಾದ (ದಾಸೋಹ) ವ್ಯವಸ್ಥೆ ಮಾಡಲಾಗಿದೆ. 

ಲಿಂಗಾಯತ ಸ್ವತಂತ್ರ ಧರ್ಮ ವೇದಿಕೆಯ ಅಧ್ಯಕ್ಷರಾದ ಹಾಗೂ ಶಾಸಕ ಬಸವರಾಜ ಹೊರಟ್ಟಿ, ರಾಷ್ಟ್ರೀಯ ಬಸವಸೇನೆ ಅಧ್ಯಕ್ಷ ವಿನಯ ಕುಲಕರ್ಣಿ, ಸಚಿವರಾದ ಎಂ.ಬಿ ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಉನ್ನತ ಶಿಕ್ಷಣ ಸಚಿವರಾದ ಬಸವರಾಜ ರಾಯರಡ್ಡಿ, ಬಸವ ಸಮಿತಿಯ ಅಧ್ಯಕ್ಷರಾದ ಅರವಿಂದ ಜತ್ತಿ, ಕಲಬುರ್ಗಿಯ ವಿಶ್ವ ಲಿಂಗಾಯತ ಮಹಾಸಭಾದ ಸಂಜಯ ಮಾಕಲ್ ಮುಂತಾದವರು ಪಾಲ್ಗೊಳ್ಳಲಿದ್ದು, ಪೂಜ್ಯರಾದ ಗದಗಿನ ಶ್ರೀಗಳಾದ ಡಾ, ತೊಂಟದ ಸಿದ್ದಲಿಂಗ ಮಹಾಸ್ವಾಮಿಗಳು, ಇಲಕಲ್‌ನ ಶ್ರೀಗಳು, ಬೆಳಗಾವಿಯ ನಾಗನೂರಿನ ಸಿದ್ಧರಾಮ ಮಹಾಸ್ವಾಮಿಗಳು, ಅಥಣಿಯ ಮೋಟಗಿ ಶ್ರೀಗಳು ಬಾಲ್ಕಿ ಶ್ರೀಗಳು, ಬಸವಯೋಗಿ ಸ್ವಾಮಿಜಿ, ಬೀದರಿನ ಅಕ್ಕ ಅನ್ನಾಪೂರ್ಣ ತಾಯಿ,  ಕೂಡಲಸಂಗಮದ ಬಸವ ಜಯ ಮೃತ್ಯುಂಜಯ ಶ್ರೀಗಳು, ಧಾರಾವಾಡದ ಮಲ್ಲಿಕಾರ್ಜುನ ಶ್ರೀಗಳು, ಕುಂಬಾರ ಗುಂಡಯ್ಯ ಶ್ರೀಗಳು, ಸಂಡೂರಿನ ಪ್ರಭು ಸ್ವಾಮಿಗಳು ಶ್ರೀಗಳು, ಸಿದ್ದರಾಮೇಶ್ವರ ಶ್ರೀಗಳು (ಭೋವಿ ಗುರುಪೀಠ), ಹಡಪದ ಅಪ್ಪಣ್ಣ ಶ್ರೀಗಳು, ಮುಂತಾದ ಪರಮ ಪೂಜ್ಯರುಗಳು, ರಾಜಕಿಯ ಮುಖಂಡರುಗಳು ಪಾಲಗೊಳ್ಳಲಿದ್ದಾರೆ ಎಂದು ಲಿಂಗಾಯತ ಸ್ವತಂತ್ರ ಧರ್ಮ ವೇದಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:
error