ಕೊಪ್ಪಳ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆ ಯಶಸ್ವಿ

ನಗರದ  ಜಿಲ್ಲಾ ಕ್ರಿಡಾಂಗಣದ ಹಾಲನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾ ಕರಾಟೆ ಶಿಕ್ಷಕರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಕೊಪ್ಪಳ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೇ ಯಶಸ್ವಿಯಾಗಿ ನೆರವೇರಿತು. ಜಿ.ಪಂ ಅಧ್ಯಕ್ಷ ರಾಜಶೇಖರ ಹಿಟ್ನಾಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕರಾಟೆ ಕಲೆಯನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಕಾರಣ ದಿನನಿತ್ಯದಲ್ಲಿ ಅನೇಕ ಕಡೇ ದೌರ್ಜನ್ಯ, ದರೋಡೆ, ಅತ್ಯಾಚಾರ ಮುಂದಾದ ಪ್ರಕರಣಗಳು ಹೆಚಾಗಿದ್ದು ಪ್ರತಿಯೊಂದು ಮನೆಯ ವಿಶೇಷವಾಗಿ ಹೆಣ್ಣುಮಕ್ಕಳು ಕಲಿಯಬೇಕಾಗಿದೆ ಮತ್ತು ಸದೃಢವಾದ ದೇಹವನ್ನು ಸಧೃಢವಾದ ಮನಸ್ಸುನ್ನು ಹೊಂದುತ್ತಾರೆ ಮತ್ತು ಆರೋಗ್ಯವನ್ನು ಸಹಿತ ಕಾಪಾಡಿಕೊಳ್ಳುವಂತಹ ಕಲೆಯಾಗಿದೆ ಎಂದು ಕ್ರೀಡಾಪಟುಗಳಿಗೆ ಸೋಲು ಗೆಲುವು ಮುಖ್ಯವಲ್ಲ ಸ್ಪರ್ಧೇಯಲ್ಲಿ ಭಾಗವಹಿಸುವುದು ಮುಖ್ಯ ಮುಂಬರುವ ದಿನಗಳಲ್ಲಿ ಎಲ್ಲಾ ಕರಾಟೆ ಪಟುಗಳು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಸ್ಫರ್ಧಿಸಿ ವಿಜೇತಾರಾಗಲಿ ಎಂದು ಶುಭ ಹಾರೈಸಿದರು.

ಕೆ.ಎಂ ಸೈಯದ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಇತ್ತೀಚಿನ ದಿನಗಳಲ್ಲಿ ಕ್ರೀಡೆಗೆ ಹೆಚ್ಚುಒತ್ತನ್ನು ನೀಡಲು ಪಾಲಕರು ತಮ್ಮ ಮಕ್ಕಳಿಗೆ ಇಂತಹ ಅದ್ಭುತ ಕಲೆಯಾದ ಕರಾಟೆಯನ್ನು ಕಲಿಯಲಿಕ್ಕೆ ಅನುಕೂಲ ಮಾಡಿ ಪ್ರೋತ್ಸಾಹಿಸಬೇಕು ಮತ್ತು ಮಕ್ಕಳು ದುಶ್ಛಟದಿಂದ ದೂರ ಇರಲಿಕ್ಕೆ ಕರಾಟೆ ಕಲೆ ಅವಶ್ಯಕತೆ ಇದ್ದು ಕರಾಟೆ ಕಲೆಗೆ ಎಲ್ಲರೂ ಪ್ರೋತ್ಸಾಹಿಸಬೇಕೆಂದು ಹೇಳಿದ ಅವರು ಕ್ರೀಡಾ ಪಟುಗಳಿಗೆ ಶುಭ ಹಾರೈಸಿದರು. ನಂತರ ಕೊಪ್ಪಳ ಜಿಲ್ಲಾ ಕರಾಟೆ ಸಂಘದ ಜಿಲ್ಲಾ ಅಧ್ಯಕ್ಷ ಮೌನೇಶ ವಡ್ಡಟ್ಟಿ ಮಾತನಾಡಿ ಕೊಪ್ಪಳ ಜಿಲ್ಲೆಯ ನಾಲ್ಕು ತಾಲೂಕಿನ ೧೦೪ ಕರಾಟೆ ಪಟುಗಳು ಭಾಗವಹಿಸಿದ್ದು ಸ್ಪರ್ಧೇಯಲ್ಲಿ ಜಿಲ್ಲೆಯಿಂದ ೨೬ ಕರಾಟೆ ಪಟುಗಳು  ಅಕೋಬರ್ ೧೨, ೧೩ ಹಾಗೂ ೧೪ ರಂದು ಬೆಂಗಳೂರಿನಲ್ಲಿ ನಡೆಯುವ ರಾಜ್ಯಮಟ್ಟದ ಕರಾಟೆ ಸ್ಪರ್ಧೇಯಲ್ಲಿ ಭಾಗವಹಿಸುವರು ಜಿಲ್ಲೆಯ ಎಲ್ಲಾ ಕರಾಟೆ ಪಟುಗಳು ಸ್ಪರ್ಧೇಯಲ್ಲಿ ಸೋಲು ಗೆಲವು ಸಾಮಾನ್ಯ ಗೆದ್ದಂತವರಿಗೆ ಸೋತವರೆ ಮುಂದೆ ರಾಜ್ಯ ಮಟ್ಟಕ್ಕೆ ಕಳುಹಿಸಿ ರಾಜ್ಯ ಮಟ್ಟದಲ್ಲೂ ಸಹ ವಿಜೇತರಾಗಿ ನಮ್ಮ ಕೊಪ್ಪಳ ಜಿಲ್ಲೆಯ ಹೆಸರನ್ನು ತರಲು ಎಲ್ಲಾ ಕರಾಟೆ ಪಟುಗಳು ಪ್ರೋತ್ಸಾಹಿಸಬೇಕೆಂದು ಹೇಳಿದರು.ಈ ಸಂದರ್ಭದಲ್ಲಿ ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿಯಾದ ಎಂ.ಜಿ ದಾಸರ, ಕೊಪ್ಪಳ ಜಿಲ್ಲಾ ಕರಾಟೆ ಸಂಘದ ಜಿಲ್ಲಾ ಅಧ್ಯಕ್ಷ ಮೌನೇಶ ವಡ್ಡಟ್ಟಿ, ದೈಹಿಕ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ವಿಠಲ್, ದೈಹಿಕ ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷ ವೀರಭದ್ರಪ್ಪ ಪೂಜಾರ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಅಧಿಕಾರಿ ಶರಣಪ್ಪ ಬಂಡಿಹಾಳ, ಅಶೋಕ ನರಗುಂದ, ನಿರ್ಣಾಯಕರಾದ ಡಾವಣಗೇರಿಯ ಸೈಯದ್ ಬಾಷಾ, ನಜೀರ ಬಾಷಾ, ರೀಯಾಝ್, ದೇವಪ್ಪ ಕಲ್ಲನ್ನವರ, ಸೋಮಲಿಂಗ ಕವಲೂರ, ವಿಠ್ಠಲ್ ಹೆಚ್, ಸೈಯದ್ ಹೂಗಾರ, ಷಣ್ಮುಖಪ್ಪ, ರಾಘವೇಂದ್ರ ಅರಕೇರಿ, ಸೈಯದ್ ಬಿಲಾಲ, ಅನ್ವರ, ಜಬಿಉಲ್ಲಾ, ರಾಜು ಬಾಕಳೆ, ಶಾಂತವೀರಯ್ಯ, ಸಂತೋಷ ಹೊಂಬಾಳೆಮಠ, ಶ್ರೀಕಾಂತ ಕಲಾಲ, ಗವಿಸಿದ್ದಪ್ಪ ಹಂಡಿ, ಪ್ರಭು ಗಾಳಿ ಇತರರು ಉಪಸ್ಥಿತರಿದ್ದರು.

Please follow and like us:
error