ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾಗಿ ಇ.ತುಕಾರಾಂ

ಕೊಪ್ಪಳ : ಸಮ್ಮಿಶ್ರ ಸರಕಾರ ಬಂದ ನಂತರ ಕೊಪ್ಪಳ ಜಿಲ್ಲೆಗೆ ಉಸ್ತುವಾರಿ ಸಚಿವರ ನೇಮಕ ಮಾಡುವುದರಲ್ಲಿ ವಿಳಂಭ ಮಾಡುತ್ತಲೇ ಬಂದಿದ್ದರು. ಈ ಹಿಂದೆ ಅರಣ್ಯ ಸಚಿವ ಶಂಕರ್ ರನ್ನು ಉಸ್ತುವಾರಿ ಸಚಿವರಾಗಿ ನೇಮಕ ಮಾಡಲಾಗಿತ್ತು. ಆದರೆ ಬದಲಾದ ರಾಜಕೀಯ ಸಂದರ್ಭದಲ್ಲಿ ಶಂಕರ್ ಸಚಿವ ಸ್ಥಾನ ಕಳೆದುಕೊಂಡಿದ್ದರು. ಅಂದಿನಿಂದ ಇಂದಿನವರೆಗೆ ಕೊಪ್ಪಳ ಜಿಲ್ಲೆಗೆ ಉಸ್ತುವಾರಿ ಸಚಿವರೇ ಇರಲಿಲ್ಲ. ಇತ್ತೀಚಿಗೆ ಜನವೇರಿ 26ರಂದು ಧ್ವಜಾರೋಹಣಕ್ಕಾಗಿ ಸಚಿವ ರಹೀಂ ಖಾನ್ ಬಂದು ಹೋಗಿದ್ದರು. ಆದರೆ ಉಸ್ತುವಾರಿ ಸಚಿವರ ನೇಮಕವಾಗಿರಲಿಲ್ಲ. ಈಗ ಕೊನೆಗೆ ವೈದ್ಯಕೀಯ ಶಿಕ್ಷಣ ಸಚಿವ ಇ.ತುಕಾರಾಂರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಸರಕಾರ ನೇಮಿಸಿದೆ.

ಸತೀಶ್ ಜಾರಕಿಹೊಳಿಯವರನ್ನು ಬೆಳಗಾವಿ ಜಿಲ್ಲೆಗೆ, ಪಿ.ಟಿ,ಪರಮೇಶ್ವರ ನಾಯಕರನ್ನು ಗದಗ ಹಾಗೂ ಎಂ.ಟಿ.ಬಿ.ನಾಗರಾಜ್ ರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಲಾಗಿದೆ.

Please follow and like us:
error