ಕೊಪ್ಪಳ ಎಸ್​.ಪಿ. ಜಿ. ಸಂಗೀತಾ ಪರ ದಲಿತ,ಕರವೇ ಸಂಘಟನೆಗಳ ಪ್ರತಿಭಟನೆ

ಕೊಪ್ಪಳ ಎಸ್​.ಪಿ. ಜಿ. ಸಂಗೀತಾ ಇವರು ದಕ್ಷ ಅಧಿಕಾರಿಯಾಗಿದ್ದಾರೆ. ಆದ್ರೆ ಇವರ‌ ವಿರುದ್ದ ಕೆಲ ಸಂಘಟನೆಗಳು ಪ್ರತಿಭಟನೆ ನಡೆಸೋದು ಖಂಡನೀಯ ಎಂದು ದಲಿತ ಸಂಘಟನೆಗಳ ಒಕ್ಕೂಟ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಗಳ ಒಕ್ಕೂಟಗಳು ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿ‌ ಮುಂದೆ ಪ್ರತಿಭಟನೆ ನಡೆಸಿದವು.

ಇದೇ ವೇಳೆ ಮಾತನಾಡಿದ ಸಂಘಟನೆಯ ಪ್ರಮುಖರು, ಕೊಪ್ಪಳ ಜಿಲ್ಲೆಯನ್ನು ಸಂರಕ್ಷಣೆ ಮಾಡುವುದರಲ್ಲಿ ಎಸ್.ಪಿ. ಅವರ ಶ್ರಮ ಹಾಗೂ ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ಹರಡದಂತೆ ಜನರಲ್ಲಿ ಜಾಗೃತಿಯನ್ನು ಮೂಡಿಸುವಲ್ಲಿ ಬಹಳಷ್ಟು ಶ್ರಮವನ್ನು ವಹಿಸಿದ್ದಾರೆ. ಇಂತಹ ಸಂಧರ್ಭದಲ್ಲಿ ಕೊಪ್ಪಳ ನಗರ ಪೊಲೀಸ್ ಠಾಣೆ ಪಿಐ ಮೌನೇಶ್ ಪಾಟೀಲ್ ಅವರು ಸಾರ್ವಜನಿಕರಿಗೆ ಮೋಸ ಮಾಡಿದ ಎ -3 ಲೈಫ್ ಕೇರ್ ಕಂಪನಿಯ ಪರವಾಗಿ ಆರೋಪಿ ಮಧುಸೂಧನ್ ಅವರನ್ನು ರಕ್ಷಣೆ ಮಾಡಿರುತ್ತಾರೆ.‌ ಆರೋಪಿ‌ ಮಧುಸೂದನ್ ನಾಪತ್ತೆಯಾಗಿದ್ರೂ, ಆರೋಪಿಯನ್ನು ಪತ್ತೆ ಹಚ್ಚಿ ಮಾನ್ಯ ನ್ಯಾಯಾಲಯಕ್ಕೆ ಹಾಜರ ಪಡಿಸುವಲ್ಲಿ ವಿಫಲರಾಗಿರುತ್ತಾರೆ . ಇದ್ರಿಂದ ಕರ್ತವ್ಯ ಲೋಪದಡಿ ಎಸ್ಪಿ ಜಿ.ಸಂಗೀತಾ ಅವರು, ಪಿಐ ಮೌನೇಶ್ ಪಾಟೀಲ್ ರನ್ನು ಅಮಾನತ್ತು ಮಾಡಿದ್ರು. ಇದನ್ನೆ ನೇಪಮಾಡಿಕೊಂಡ ಪಿಐ ಮೌನೇಶ್ ಪಾಟೀಲ್ ಬೆಂಬಲಿಗರು, ಕೆಲವು ಸಂಘಟನೆಗಳು ಪ್ರತಿಭಟನೆ ಮಾಡಿದ್ದು , ಇದನ್ನು ನಾವು ಖಂಡಿಸ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗೃಹ ಸಚಿವರು ದಕ್ಷ ಅಧಿಕಾರಿಯ ಬೆಂಬಲಕ್ಕೆ ನಿಲ್ಲಬೇಕು ಎಂದು ಆಗ್ರಹಿಸಿದ್ರು.

ಈ ಸಂಧರ್ಭದಲ್ಲಿ ಅಂಬೇಡ್ಕರ್ ಸೇನೆ ಜಿಲ್ಲಾಧ್ಯಕ್ಷ ಶಿವರಾಜ ಚಲುವಾದಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಚಾಲಕ ಜಿ. ಹಂಪೇಶ ಹರಿಗೋಲ, ಭಾರತೀಯಾ ಪ್ರಜಾ ಸೇನೆ ಅಧ್ಯಕ್ಷ ಪಂಪಾಪತಿ ಸಿದ್ದಾಪುರ, ಭಾರತೀಯ ಪ್ರಜಾ ಸಂಘದ ತಾಲೂಕ‌ ಅಧ್ಯಕ್ಷ ಅಂಬೇಶ ಹಂಪಿ, ಕಲ್ಯಾಣ ಕರ್ನಾಟ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಸೈಯದ್ ಜಿಲಾನ್ ಪಾಷಾ, ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ರಾಜೇಶ ರೆಡ್ಡಿ , ಹೋರಾಟಗಾರರಾದ ಕಂಠಪ್ಪ ಹಣವಾಳ , ಹುಲಿಗೇಶ ಕೊಜ್ಜಿ , ಧೀರ ಕನ್ನಡಿಗರ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ವಿರುಪಾಕ್ಷ ಗೌಡ ಹೇರೂರು ಸೇರಿದಂತೆ ಹತ್ತಾರ ಸಂಘಟನೆಯ ಪ್ರಮುಖರು ಇದ್ದರು.

Please follow and like us:
error