ಕೊಪ್ಪಳ ಇಂದು 116 ಪಾಜಿಟಿವ್ : 5 ಜನರ ಸಾವು

Kannadanet NEWS ಕೊಪ್ಪಳ : ಜಿಲ್ಲೆಯಲ್ಲಿ ಕರೋನಾ ಹಾವಳಿ ಹೆಚ್ಚಾಗುತ್ತಲೇ ಇದೆ . ಇಂದೂ ಸಹ ಜಿಲ್ಲೆಯಲ್ಲಿ ಕರೋನಾ ಕಾರಣದಿಂದ 5 ಜನ ಸಾವನ್ನಪ್ಪಿದ್ದಾರೆ. ಇಂದು ಜಿಲ್ಲೆಯಲ್ಲಿ 116 ಪಾಜಿಟಿವ್ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 2439 ಪಾಜಿಟಿವ್ ಪ್ರಕರಣಗಳು ವರದಿಯಾದಂತಾಗಿದೆ. ಗಂಗಾವತಿ ತಾಲೂಕಿನಲ್ಲಿ 33. ಕೊಪ್ಪಳ ತಾಲೂಕಿನಲ್ಲಿ 49, ಕುಷ್ಟಗಿ 27 ಹಾಗೂ ಯಲಬುರ್ಗಾ ತಾಲೂಕಿನಲ್ಲಿ 7 ಪ್ರಕರಣಗಳು ವರದಿಯಾಗಿವೆ.

 

ಇಂದು 24 ಜನರನ್ನು ಡಿಸ್ಚಾರ್ಜ ಮಾಡಲಾಗಿದ್ದು  ಈತನಕ   ಜಿಲ್ಲೆಯಲ್ಲಿ ಒಟ್ಟು 1242 ಜನರನ್ನು ಡಿಸ್ಚಾರ್ಜ ಮಾಡಲಾಗಿದೆ. 750 ಜನ ಹೋಂ ಐಸೋಲೇಷನ್ ನಲ್ಲಿದ್ದಾರೆ. ಇಂದಿನ 5 ಜನ ಸಾವಿನೊಂದಿಗೆ ಜಿಲ್ಲೆಯಲ್ಲಿ ಕರೋನಾದಿಂದ ಸಾವನ್ನಪ್ಪಿದವರ ಸಂಖ್ಯೆ 53ಕ್ಕೇರಿದೆ. ಇದು ನಿಜಕ್ಕೂ ಆತಂಕಕ್ಕೆ ಕಾರಣವಾಗಿದೆ.  ಇನ್ನೂ 2360 ಜನ ಟೆಸ್ಟ್ ರಿಜಲ್ಟ್ ಬರುವುದು ಬಾಕಿ ಇದೆ ಎಂದು ಜಲ್ಲಾಧಿಕಾರಿ ಎಸ್. ವಿಕಾಸ್ ಕಿಶೋರ್ ಹೇಳಿದ್ದಾರೆ.

Please follow and like us:
error