ಕೊಪ್ಪಳ : ಅಲ್ಪಸಂಖ್ಯಾತರ ಹಕ್ಕುಗಳ ದಿನಾಚರಣೆ , ಮುಸ್ಲಿಂ ಸಮಾವೇಶ

ಕೊಪ್ಪಳ : ಮುಸ್ಲಿಂ ಚಿಂತಕರ ಚಾವಡಿ ಕೊಪ್ಪಳ ಇವರ ವತಿಯಿಂದ ನಗರದ ಬಾಲಕರ ಸರಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ದಿ.೨೮ ರವಿವಾರದಂದು ಅಲ್ಪಸಂಖ್ಯಾತರ ಹಕ್ಕುಗಳ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ.
ಇಂದಿನ ಬಿಕ್ಕಟ್ಟಿನ ಸಾಮಾಜಿಕ ಸಂದರ್ಭದಲ್ಲಿ ಮುಸ್ಲಿಂರ ಸಾಮಾಜಿಕ, ಶೈಕ್ಷಣಿಕ , ಆರ್ಥಿಕ ಹಾಗೂ ರಾಜಕೀಯ ಸ್ಥಿತಿಗತಿಗಳ ಕುರಿತಾದ ಚಿಂತನ ಮಂಥನ ಕಾರ್ಯಕ್ರಮ ನಡೆಯಲಿದೆ. ಮುಸ್ಲಿಂ ವರ್ತಮಾನದ ಸವಾಲುಗಳು ಎನ್ನುವ ವಿಷಯದಡಿಯಲ್ಲಿ ಜಿಲ್ಲೆಯಲ್ಲಿರುವ ಮುಸ್ಲಿಂ ಸಮುದಾಯ ಅನುಭವಿಸುತ್ತಿರುವ ಸಂಕಟ,ನೋವುಗಳನ್ನು ಹಂಚಿಕೊಳ್ಳುವ ಮತ್ತು ಅದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕಾರ್ಯಕ್ರಮ ನಡೆಯಲಿದೆ. ಉನ್ನತ ಶಿಕ್ಷಣ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ್ ರಾಯರಡ್ಡಿ ಕಾರ್ಯಕ್ರಮ ಉದ್ಘಾಟಿಸಲಿದ್ಧಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ರಾಘವೇಂದ್ರ ಹಿಟ್ನಾಳ ವಹಿಸಿಕೊಳ್ಳಲಿದ್ದಾರೆ. ಮುಸ್ಲಿಂ ಸಮುದಾಯದ ಹಿರಿಯ ಮುಖಂಡ ಮಾಜಿ ಸಚಿವರು ಹಾಗೂ ಗಂಗಾವತಿಯ ಶಾಸಕ ಇಕ್ಬಾಲ್ ಅನ್ಸಾರಿಯವರು ಮುಸ್ಲಿಂ ಸಾಧಕರು ಪುಸ್ತಕವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕನಕಗಿರಿಯ ಶಾಸಕರಾದ ಶಿವರಾಜ್ ಎಸ್.ತಂಗಡಗಿ, ಕುಷ್ಟಗಿಯ ಶಾಸಕರಾದ ದೊಡ್ಡನಗೌಡ ಪಾಟೀಲ್, ಮಾಜಿ ಸಚಿವರಾದ ಅಮರೇಗೌಡ ಬಯ್ಯಾಪೂರ, ಮಾಜಿ ಶಾಸಕರಾದ ಹಸನಸಾಬ ದೋಟಿಹಾಳ ಆಗಮಿಸಲಿದ್ದಾರೆ. ಅಲ್ಲದೇ ಕೊಪ್ಪಳ ಜಿಲ್ಲೆಯ ಸಮಸ್ತ ಮುಸ್ಲಿಂ ಸಮುದಾಯದ ಜನಪ್ರತಿನಿಧಿಗಳು ಕಾರ‍್ಯಕ್ರಮದಲ್ಲಿ ಉಪಸ್ತಿತರಿರುತ್ತಾರೆ. ಹೋರಾಟಗಾರ ರಜಾಕ್ ಉಸ್ತಾದ ಉಪನ್ಯಾಸ ನೀಡಲಿದ್ದಾರೆ ಅಲ್ಲದೇ ವಿವಿಧ ಕ್ಷೇತ್ರಗಳ ಪರಿಣಿತರು ತಮ್ಮ ಅಭಿಪ್ರ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ.
ಇದೇ ಸಂದರ್ಭದಲ್ಲಿ ಉರ್ದು ಅಕಾಡೆಮಿಯ ಪುರಸ್ಕೃತ ಮಜರ್ ಮೋಹಿಯುದ್ದೀನ್, ಮಾದ್ಯಮ ಅಕಾಡೆಮಿಯ ಪ್ರಶಸ್ತಿ ಪಡೆದಿರುವ ಸಾಧಿಕ್ ಅಲಿ, ನಿಯೋಜಿತ ನ್ಯಾಯಾಧೀಶ ಮಹ್ಮದ್ ಶಾಹೀಜ್ ಚೌಥಾಯಿ, ಮಾದರಿ ಶಿಕ್ಷಕ ಅಭೀದ್ ಹುಸೇನ್, ರಾಷ್ಟ್ರ ಪ್ರಶಸ್ತಿ ಪಡೆದಿರುವ ಚಾಂದಪಾಷಾ, ರಾಜ್ಯ ಪ್ರಶಸ್ತಿ ಪಡೆದಿರುವ ಶಂಸುದ್ದೀನ್, ಅಂತರಾಷ್ಟ್ರೀಯ ಕಲಾವಿದ ಜೀವನಸಾಬ ಬಿನ್ನಾಳ ಇವರಿಗೆ ಸನ್ಮಾನಿಸಲಾಗುತ್ತಿದೆ.
ಮುಸ್ಲಿಂ ಸಮುದಾಯದ ಅಭಿವೃದ್ದಿಯ ಚಿಂತನೆಯನ್ನು ಹೊಂದಿರುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಂಘಟಕರಾದ ರಾಜಾಬಕ್ಷಿ ಎಚ್.ವಿಯವರು ಕೋರಿದ್ದಾರೆ.

Please follow and like us:
error