ಕೊಪ್ಪಳದ ಜನಪ್ರಿಯ ವೈದ್ಯ ಡಾ.ಎಸ್.ಬಿ.ದಾನರಡ್ಡಿ ಸೇವಾ ನಿವೃತ್ತಿ

ಕೊಪ್ಪಳ : ಕೊಪ್ಪಳ ಜಿಲ್ಲೆಯಾಧ್ಯಂತ ತಮ್ಮ ನಗುಮೊಗದ ಸೇವೆಯಿಂದ ಖ್ಯಾತರಾಗಿರುವ ಡಾ.ಎಸ್.ದಾನರಡ್ಡಿ ಇಂದು ಸೇವಾನಿವೃತ್ತಿ ಹೊಂದಿದರು. ಡಾ.ಸುರೇಶಬಾಬು ಬಿ.ದಾನರಡ್ಡಿ ಎಂಬಿಬಿಎಸ್ ಎಂಸ್ ( ಜನರಲ್ ಸರ್ಜರಿ) 05/09/1991 ಸೇವೆಗೆ ಸೇರಿದ್ದರು. ತಮ್ಮ ಸೇವಾವಧಿಯನ್ನು ಪೂರ್ಣವಾಗಿ ಕೊಪ್ಪಳ ಜಿಲ್ಲೆಯಲ್ಲಿಯೇ( ಕೊಪ್ಪಳ, ಯಲಬುರ್ಗಾ ) ಕಳೆದಿದ್ಧಾರೆ.  29 ವರ್ಷ 4 ತಿಂಗಳು ಸೇವೆಯಲ್ಲಿ 13 ವರ್ಷ‍ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಿದ್ದಾರೆ. 16 ವರ್ಷ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ್ದಾರೆ.

ವೈಯುಕ್ತಿಕ ಬದುಕು, ನಡವಳಿಕೆಗಳಿಂದಲೂ ಇತರರಿಗೆ  ಮಾದರಿಯಾಗಿರುವ ಡಾ.ಎಸ್.ದಾನರಡ್ಡಿಯವರು ನೂರು ಕಾಲ ಸುಖವಾಗಿ ಬಾಳಲಿ ಎಂದು ಹಿತೈಷಿಗಳು, ಸ್ನೇಹಿತರು ಹಾರೈಸಿದ್ದಾರೆ.

ಕಳೆದ ವರ್ಷ ಮತ್ತು ಈ ವರ್ಷದ ಕರೋನಾ ಸಂದರ್ಭದಲ್ಲಿ ಅವರು ನೀಡಿರುವ ಸೇವೆ ಎಲ್ಲರ ಶ್ಲಾಘನೆಗೆ ಪಾತ್ರವಾಗಿದೆ.  ನಿವೃತ್ತಿ ಅಂಚಿನಲ್ಲಿದ್ದರೂ ಬಿಡುವಿಲ್ಲದ ದಿನಚರಿ ಇವರದು. ಕೊಪ್ಪಳದ ಹಿರಿಯ ವೈದ್ಯರಲ್ಲೊಬ್ಬರಾಗಿರುವ ಡಾ.ದಾನರಡ್ಡಿಯವರ ಸೇವೆಯನ್ನು ಇಡೀ ನಗರದ, ಜಿಲ್ಲೆಯ ಜನ ಎಂದೆಂದಿಗೂ ಮರೆಯುವುದಿಲ್ಲ. ಹಿರಿಯ ಅನುಭವಿ ವೈದ್ಯ ಡಾ.ಎಸ್.ದಾನರಡ್ಡಿ ಮುಂದಿನ ತಮ್ಮ ನಿವೃತ್ತಿ ಜೀವನವನ್ನು ಸುಖಕರವಾಗಿ ಕಳೆಯಲಿ ತಮ್ಮ ಅನುಭವವನ್ನು ಯುವ ವೈದ್ಯರಿಗೆ ದಾರೆ ಎರೆಯುವಂತಾಲಿ ಎಂದು ಹಾರೈಸೋಣ.

ವೈಯುಕ್ತಿಕ ಬದುಕು, ನಡವಳಿಕೆಗಳಿಂದಲೂ ಇತರರಿಗೆ  ಮಾದರಿಯಾಗಿರುವ ಡಾ.ಎಸ್.ದಾನರಡ್ಡಿಯವರು ನೂರು ಕಾಲ ಸುಖವಾಗಿ ಬಾಳಲಿ ಎಂದು ಪತ್ರಕರ್ತರಾದ ರಾಜಾಬಕ್ಷಿ.ಎಚ್.ವಿ, ಸಿರಾಜ್ ಬಿಸರಳ್ಳಿ ಸೇರಿದಂತೆ ಹಿತೈಷಿಗಳು, ಸ್ನೇಹಿತರು ಹಾರೈಸಿದ್ದಾರೆ.

ನನ್ನ ಪೂರ್ಣಾವಧಿಯ ಸೇವೆಯನ್ನು ಸಲ್ಲಿಸಲು ಅವಕಾಶ ನೀಡಿದ, ಕಾರಣೀಕರ್ತರಾದ ಸಮಸ್ತ ಕೊಪ್ಪಳ ಜಿಲ್ಲೆಯ ಜನತೆಗೆ ಧನ್ಯವಾದಗಳು- ಡಾ ಎಸ್.ಬಿ.ದಾನರಡ್ಡಿ.         

Please follow and like us:
error