ಕೊಪ್ಪಳದಲ್ಲೊಂದು ಸಾಂಸ್ಕೃತಿಕ ಹಬ್ಬ


ಕೊಪ್ಪಳ : ದಿ.ಎಕ್ಸಲೆಂಟ್ ಡ್ಯಾನ್ಸ್ ಅಕಾಡೆಮಿ, ನಟರಂಗ ಇವೆಂಟ್ಸ್ ,ದೀಕ್ಷಾ ನಾಟ್ಯ ಕಲಾಸಂಸ್ಥೆ ಇವರ ನೇತೃತ್ವದಲ್ಲಿ ಕೊಪ್ಪಳದಲ್ಲಿ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೊಪ್ಪಳ ಹಬ್ಬ 2021ರ ಹೆಸರಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕ ಮುತ್ತುಸ್ವಾಮಿ ನರೇಗಲ್ ಮಠ ಹೇಳಿದರು. ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜೀ ವಾಹಿನಿಯ ನಿರೂಪಕಿ ಅನುಶ್ರೀ ಹಾಗೂ ಸರಿಗಮಪ ಕಲಾತಂಡದವರು ಮತ್ತು ಕಾಮಿಡಿ ಕಿಲಾಡಿಗಳ ತಂಡದವರು ಕೊಪ್ಪಳದ ಪ್ರೇಕ್ಷಕರು ಹಾಗೂ ಅಭಿಮಾನಿಗಳನ್ನು ರಂಜಿಸಲು ಇದೇ ತಿಂ 27ರಂದು ಶನಿವಾರ ಸಂಜೆ 6 ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದ್ದು ಸಂಗೀತಾಸಕ್ತರು, ಅಭಿಮಾನಿಗಳು ಭಾಗೀಯಾಗಬೇಕು ಎಂದು ಕೋರಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಸೇರಿದಂತೆ ಸಂಸದರು, ಶಾಸಕರು ಮತ್ತು ಜನಪ್ರತಿನಿಧಿಗಳು ಸೇರಿದಂತೆ ನಗರದ ಗಣ್ಯರು ಭಾಗವಹಿಸಲಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮಕ್ಕೆ ಟಿಕೇಟ್ ದರ ನಿಗದಿಪಡಿಸಲಾಗಿದೆ. ಕರೋನಾ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು ಸುಸಜ್ಜಿತವಾಗಿ ವರ್ಣರಂಜೀತ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಹಾಲಕ್ಷ್ಮೀ ಕಂದಾರಿ, ಹರಿಪ್ರಸಾದ ಬಂಗಾರಿ ಸೇರಿದಂತೆ ಇತರರು ಉಪಸ್ತಿತರಿದ್ದರು.

Please follow and like us:
error