ಕೊಪ್ಪಳದಲ್ಲಿ ವಿಶ್ವ ಪ್ರಾಣಿಗಳ ದಿನಾಚಾರಣೆ

ಕೊಪ್ಪಳ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಮತ್ತು ಜಿಲ್ಲಾ ಪ್ರಾಣಿ ದಯಾ ಸಂಘದ ವತಿಯಿಂದ ವಿಶ್ವ ಪ್ರಾಣಿ ದಿನಾಚರಣೆ ಯನ್ನು ಕೊಪ್ಪಳ ಪಶು ಆಸ್ಪತ್ರೆ ಆವರಣದಲ್ಲಿ ಬುಧವಾರದಂದು ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ. ಶಿವಣ್ಣ ಅವರು ವಿಶ್ವ ಪ್ರಾಣಿ ದಿನದ ಪ್ರಾಮುಖ್ಯತೆ ಕುರಿತು ಮಾತನಾಡಿ, ಪ್ರಾಣಿ ಕಲ್ಯಾಣದ ಹಿತದೃಷ್ಟಿಯಿಂದ ಈ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದ್ದು, ಪ್ರಾಣಿಗಳ ಸಂರಕ್ಷಣೆ, ಪ್ರಾಣಿಗಳ ಆರೋಗ್ಯ ರಕ್ಷಣೆ, ಪ್ರಾಣಿಗಳ ಹಿಂಸಾ ಕೃತ್ಯಗಳನ್ನು ತಡೆಯುವ ಮತ್ತು ಇತರೆ ಪ್ರಾಣಿ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸದುದ್ದೇಶದಿಂದ ಈ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಜಾನುವಾರುಗಳ ಆರೋಗ್ಯ ರಕ್ಷಣೆಯು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದ್ದು, ಕೊಪ್ಪಳ ಜಿಲ್ಲೆಯಲ್ಲಿ ರೋಗೋದ್ರೇಕಗಳಾಗದಂತೆ ಎಚ್ಚರವಹಿಸಿ, ನಿಗದಿತ ಅವಧಿಗಳಲ್ಲಿ ಲಸಿಕಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸುವಂತೆ ಮತ್ತು ಸೂಕ್ತ ಸಮಯದಲ್ಲಿಯೇ ಜಾನುವಾರುಗಳಿಗೆ ಚಿಕಿತ್ಸೆ ನೀಡುವಂತೆ ಸಭೆಯಲ್ಲಿ ಹಾಜರಿದ್ದ ಜಿಲ್ಲೆಯ ಪಶುವೈದ್ಯರನ್ನು ಉದ್ದೇಶಿಸಿ ಹೇಳಿದರು.
ಪಶುವ್ಯದ್ಯರಾದ ಡಾ. ವಿನಯಕುಮಾರ್ ಅಂಗಡಿ ಅವರು ರೆಬೀಸ್ ರೋಗ, ರೋಗದ ನಿಯಂತ್ರಣ ಮತ್ತು ಕೈಗೊಳ್ಳಬೇಕಾದ ಮುಂಜಾಗೃತ ಕ್ರಮಗಳ ಕುರಿತು ಉಪನ್ಯಾಸವನ್ನು ನೀಡಿದರು. ಕೊಪ್ಪಳದ ಮಹಾವೀರ್ ಜೈನ್ ಗೋಶಾಲೆಯ ಕಾರ್ಯದರ್ಶಿ ಗೌತಮ್ ಮೆಹ್ತಾ, ಜಿಲ್ಲೆಯ ಪಶುವೈದ್ಯರ ಸಂಘದ ಅದ್ಯಕ್ಷ ಡಾ. ತಿಪ್ಪಣ್ಣ ತಳಕಲ್, ಸಹಾಯಕ ನಿರ್ದೇಶಕ ಡಾ. ಶಿವರಾಜ್ ಶೆಟ್ಟರ್ ಸೇರಿದಂತೆ ಜಿಲ್ಲೆಯ ಎಲ್ಲಾ ಸಹಾಯಕ ನಿರ್ದೇಶಕರುಗಳು ಮತ್ತು ಪಶುವೈದ್ಯರು ಉಪಸ್ಥಿತರಿದ್ದರು

Please follow and like us:
error

Related posts