ಕೊಪ್ಪಳಕ್ಕೆ ಸಮಾಧಾನದ ದಿನ : 12 ಹೊಸ ಪಾಜಿಟಿವ್ ಕೇಸ್ ಗಳು, 41 ಜನ ಡಿಸ್ಚಾರ್ಜ್

ಕನ್ನಡನೆಟ್ ನ್ಯೂಸ್ ಕೊಪ್ಪಳ :  ನಿರಂತರವಾಗಿ ಏರಿಕೆಯಲ್ಲಿದ್ದ ಕೊಪ್ಪಳ ಜಿಲ್ಲೆಯ ಕರೋನಾ ಸಂಖ್ಯೆಯಲ್ಲಿ ಇಂದು ಸ್ವಲ್ಪ ಮಟ್ಟಿಗೆ ಇಳಿಕೆ ಕಂಡಿದೆ. ಇಂದು ಹೊಸದಾಗಿ 12 ಪಾಜಿಟಿವ್ ಪ್ರಕರಣಗಳು ವರದಿಯಾಗಿವೆ.  ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು 368 ಪಾಜಿಟಿವ್ ಪ್ರಕರಣಗಳು ಪತ್ತೆಯಾದಂತಾಗಿವೆ, ಅಲ್ಲದೇ 41 ಜನ ಗುಣಮುಖರಾದವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ ಮಾಡಲಾಗಿದೆ . 41 ಜನರನ್ನು ಡಿಸ್ಚಾರ್ಜ ಮಾಡಿದ್ದರಿಂದ  ಈವರೆಗೆ ಜಿಲ್ಲೆಯಲ್ಲಿ  182 ಜನರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ ಮಾಡಿದಂತಾಗಿದೆ.  ಇನ್ನೂ 1362 ಜನರ ರಿಜಲ್ಟ್ ಬಾಕಿ ಇದೆ. ಇಂದು ಹೊಸದಾಗಿ ಕೊಪ್ಪಳ ಮಹಿಳಾ ಠಾಣೆಯ ಪೋಲಿಸರೊಬ್ಬರಿಗೆ ಸೇರಿದಂತೆ ಭಾಗ್ಯನಗರದ ಇಬ್ಬರಿಗೆ ಸೇರಿದಂತೆ ಒಟ್ಟು 12 ಹೊಸ ಪ್ರಕರಣಗಳು ಪತ್ತೆಯಾಗಿವೆ. ಭಾಗ್ಯನಗರದಲ್ಲಿ ಹೊಸ ಪ್ರಕರಣಗಳು ಪತ್ತೆಯಾಗುತ್ತಿರುವುದು ಆತಂಕ ಮೂಡಿಸಿದೆ.

Please follow and like us:
error