ಕೊಟ್ಟೂರಿನಲ್ಲಿ ಬಂಗ್ಲೆ ಮಲ್ಲಿಕಾರ್ಜುನರಿಗೆ ಗೌರವ ಸನ್ಮಾನ

ಬಳ್ಳಾರಿ,ಜೂ.೩೦-ಜೂನ್ ೨ ರಂದು ಹಾಸನದಲ್ಲಿ ನಡೆದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ೮೬ನೇ ಸರ್ವ ಸದಸ್ಯರ ಸಭೆಯಲ್ಲಿ ಸಂಘದ ರಾಜ್ಯ ಕಾರ್ಯದರ್ಶಿಯಾಗಿ ಆಯ್ಕೆಯಾದ ಬಂಗ್ಲೆ ಮಲ್ಲಿಕಾರ್ಜುನ ಅವರನ್ನು ಕೊಟ್ಟೂರು ತಾಲೂಕು ಪತ್ರಕರ್ತರು ಗೌರವ ಪೂರ್ವಕವಾಗಿ ಸನ್ಮಾನಿಸಿದರು.
ಕಳೆದ ಹಲವು ವರ್ಷಗಳಿಮದ ಸಂಘದ ಧ್ಯೇಯೋದ್ದೇಶಗಳಿಗೆ ಬದ್ಧರಾಗಿ ಸತತ ಹೋರಾಟ ಮಾಡಿಕೊಂಡು ಬಂದಿರುವ ಬಂಗ್ಲೆ ಮಲ್ಲಿಕಾರ್ಜುನ ಅವರು ಪತ್ರಕರ್ತರ ಹಿತ ಕಾಪಾಡುವಲ್ಲಿ ಸಾಕಷ್ಟು ಶ್ರಮಿಸುತ್ತಿದ್ದಾರೆ. ಪತ್ರಕರ್ತರಾಗಿ, ಸಂಘಟಕರಾಗಿ, ಸಮಾಜ ಸೇವಕರಾಗಿ, ನಾಡು-ನುಡಿಯ ಕುರಿತು ಅನೇಕ ಹೋರಾಟಗಳನ್ನು ನಡೆಸಿದ್ದ ಅವರನ್ನು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಬಂಗ್ಲೆ ಮಲ್ಲಿಕಾರ್ಜುನ ಅವರನ್ನು ರಾಜ್ಯ ಕಾರ್ಯದರ್ಶಿಯನ್ನಾಗಿ ನೇಮಿಸಿದ್ದು ಸಂತಸ ತಂದಿದೆ ಎಂದು ಕೊಟ್ಟೂರಿನ ಪತ್ರಕರ್ತರು ಹೇಳಿದ್ದಾರೆ.
ಇಂದು ಅಮಾವಾಸ್ಯೆಯಾದ್ದರಿಂದ ಕೊಟ್ಟೂರು ಶ್ರೀ ಬಸವೇಶ್ವರ ದರ್ಶನ ಪಡೆದು ಬಳಿಕ ಪತ್ರಕರ್ತರಿಂದ ಸನ್ಮಾನಿತರಾದ ಬಂಗ್ಲೆ ಮಲ್ಲಿಕಾರ್ಜುನ ಅವರು, ನಾನು ಯಾವುದೇ ಪದವಿಗೆ ಆಸೆ ಪಟ್ಟವನಲ್ಲ. ಪತ್ರಕರ್ತರಿಗೆ ಅದರಲ್ಲೂ ಗ್ರಾಮಾಂತರ ವಲಯದ ಪತ್ರಕರ್ತರ ಹಿತಕ್ಕಾಗಿ ಎಲ್ಲ ರೀತಿಯ ಹೋರಾಟ ಮಾಡಲು ಸಿದ್ಧನಿದ್ದೇನೆ. ಪದವಿ, ಪುರಸ್ಕಾರಗಳು ಕ್ಷಣಿಕ. ನಾವು ಮಾನವೀಯ ದೃಷ್ಟಿಯಿಂದ ಕಳಕಳಿಪೂರ್ವಕವಾಗಿ ಮಾಡುವ ಕೆಲಸಗಳು ಶಾಶ್ವತ. ನನ್ನನ್ನು ಗುರುತಿಸಿದ್ದಕ್ಕೆ ರಾಜ್ಯ ಸಂಘಟನೆಯ ಪದಾಧಿಕಾರಿಗಳಾದ ಜಿಸಿ ಲೋಕೇಶ್, ಮತ್ತಿಕೆರೆ ಜಯರಾಮ್, ಪುಂಡಲೀಕ ಬಾಳೋಜಿ, ಸಂಜೀವರಾವ್ ಕುಲಕರ್ಣಿ ಸೇರಿದಂತೆ ಎಲ್ಲ ಪತ್ರಕರ್ತರಿಗೂ ನಾನು ಋಣಿಯಾಗಿದ್ದೇನೆ ಎಂದೂ ಅಭಿಮಾನ ವ್ಯಕ್ತಪಡಿಸಿದ್ದಾರೆ.

Please follow and like us:
error