ಕೈಗಾರಿಕಾ ಕಂಪನಿಗಳು ಆಕ್ಸಿಜನ್ ಆಸ್ಪತ್ರೆಗಳನ್ನು ಆರಂಭಿಸಲು ಮುಂದಾಗಲಿ : ಅಮರೇಶ ಕರಡಿ

ಜಿಲ್ಲೆಯಲ್ಲಿರುವ ಕೈಗಾರಿಕೆಗಳು  ಜನರ ಆರೋಗ್ಯ ಸೇವೆಗೆ ಮುಂದಾಗದಿರುವದು ವಿಷಾದನೀಯ

ಕೊಪ್ಪಳ : ಕೋವಿಡ್-19 ತಡೆಗಟ್ಟಲು, ಸೋಂಕಿತರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸಲು ಸರ್ಕಾರ ಶ್ರಮಿಸುತ್ತಿದ್ದು, ಇಂತಹ ಸಂದರ್ಭದಲ್ಲಿ ಜಿಲ್ಲೆಯಲ್ಲಿರುವ ಬೃಹತ್ ಕೈಗಾರಿಕಾ ಕಂಪನಿಗಳು ಜನರ ಆರೋಗ್ಯ ರಕ್ಷಣೆಗೆ ಸಹಕರಿಸದಿರುವದು ವಿಷಾದನೀಯ ಎಂದು ಕೆಡಿಪಿ ಸದಸ್ಯ ಅಮರೇಶ ಕರಡಿ ಹೇಳಿದ್ದಾರೆ.

ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಇದರ ನಿಯಂತ್ರಣಕ್ಕೆ ಜನರು, ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳು ಸಹಕರಿಸುತ್ತಿವೆ, ಇನ್ನು ಇಡೀ ರಾಜ್ಯಕ್ಕೆ ಮಾದರಿಯಾಗಿ ಶ್ರೀ ಗವಿಮಠದ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಶ್ರೀ ಮಠದಿಂದ 100 ಹಾಸಿಗೆ ಯ ಆಕ್ಸಿಜನ್ ಆಸ್ಪತ್ರೆಯನ್ನು ಆರಂಭಿಸಿ ಜನರ ಜೀವ ರಕ್ಷಣೆಗೆ ಮುಂದಾಗಿದ್ದಾರೆ.

ಆದರೆ ಜಿಲ್ಲೆಯ ನೆಲ, ಜಲ, ಇತರ ಸಂಪತ್ತನ್ನು ಬಳಸಿಕೊಳ್ಳುವ ಇಲ್ಲಿನ ಕೈಗಾರಿಕೆಗಳು ಕೋವಿಡ್-19 ನಂತಹ ಸಂಕಷ್ಟ ಸಮಯದಲ್ಲಿ ಜನರ ಆರೋಗ್ಯ ರಕ್ಷಣೆಗಾಗಿ ಸರ್ಕಾರದೊಂದಿಗೆ ಕೈಜೋಡಿಸಬೇಕು, ಜಿಂದಾಲ್ ಮಾದರಿಯಲ್ಲಿ ತಮ್ಮ ಕೈಗಾರಿಕೆ ಪ್ರದೇಶಗಳಲ್ಲಿ ಕೋವಿಡ್ ಸೋಂಕಿತರಿಗೆ ಸೂಕ್ತ ಚಿಕಿತ್ಸೆಗಾಗಿ ಆಕ್ಸಿಜನ್ ಸಹಿತ ಕೋವಿಡ್ ಬೆಡ್ ಆಸ್ಪತ್ರೆಗಳನ್ನು ಪ್ರಾರಂಭಿಸಬೇಕು ಎಂದು ಒತ್ತಾಯಿಸಿದ್ದಾರೆ.
ಜಿಲ್ಲೆಗೆ ಬೃಹತ್ ಕೈಗಾರಿಕಾ ಸಚಿವರಾದ ಜಗದೀಶ್ ಶೆಟ್ಟರ್ ಅವರು ಆಗಮಿಸಿದ ಸಂದರ್ಭದಲ್ಲಿ ಕಲ್ಯಾಣಿ ಇಂಡಸ್ಟ್ರೀಯಲ್ ಕಂಪನಿಯವರು 100 ಹಾಸಿಗೆಯ ಆಕ್ಸಿಜನ್ ಆಸ್ಪತ್ರೆಯನ್ನು ತಾತ್ಕಾಲಿಕ ವಾಗಿ ಆರಂಭಿಸುವದಾಗಿ ಹೇಳಿ, ಇದುವರೆಗೂ ಯಾವುದೇ ನಿರ್ಧಾರ ಕೈಗೊಳ್ಳದಿರುವದು ಸರಿ ಅಲ್ಲ,  ಇತರ ಬೃಹತ್ ಕೈಗಾರಿಕೆಗಳು ಸಹ ಜನರ ಆರೋಗ್ಯ ರಕ್ಷಣೆಗೆ ಬರದಿರುವದು ಬೇಸರದ ಸಂಗತಿಯಾಗಿದ್ದು,  ಜನರ ನೆರವಿಗೆ ಬರದ ಹಾಗೂ ಕೋವಿಡ್ ನಿಯಂತ್ರಣಕ್ಕೆ ಸಹಕರಿಸದ ಕೈಗಾರಿಕೆಗಳ ವಿರುದ್ಧ ಸರ್ಕಾರ, ಹಾಗೂ ಜಿಲ್ಲಾಡಳಿತವು ಕಾನೂನು ರೀತ್ಯ ಕ್ರಮ ಕೈಗೊಳ್ಳಬೇಕೆಂದಿದ್ದಾರೆ.
==
ಕೈಗಾರಿಕಾ ಕಂಪನಿಗಳು ಜನವಿರೋಧಿ ಧೋರಣೆಗಳನ್ನು ಕೈಬಿಟ್ಟು, ಕೋವಿಡ್-19 ತಡೆಗಟ್ಟಲು ಹಾಗೂ ಸೋಂಕಿತರಿಗೆ ಸೂಕ್ತ ಆರೋಗ್ಯ ದೃಷ್ಠಿಯಿಂದ ಸರ್ಕಾರದ ಮಾರ್ಗಸೂಚಿಗಳನ್ವಯ ಜನರ ಸುರಕ್ಷಿತ ಆರೋಗ್ಯಕ್ಕಾಗಿ ಕೈಗಾರಿಕಾ ಪ್ರದೇಶಗಳಲ್ಲಿ ಆಕ್ಸಿಜನ್ ಸಹಿತ ಬೆಡ್ ಗಳ ತಾತ್ಕಾಲಿಕ ಆಸ್ಪತ್ರೆಗಳನ್ನು ಆರಂಭಿಸಬೇಕು : ಅಮರೇಶ ಕರಡಿ, ಕೆಡಿಪಿ ಸದ್ಯರು.

Please follow and like us:
error