ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರ ಎಲ್ಲಾ ವರ್ಗಗಳಲ್ಲಿ ವಿಪಲ : ಶಾಸಕ ಕೆ. ರಾಘವೇಂದ್ರ ಹಿಟ್ನಾಳ 


ಕೊಪ್ಪಳ : ೨೪ : ಪ್ರಧಾನಿ ಮೋದಿಯವರು ದೇಶದ ಜನತೆಗೆ ನೀಡಿದ ಆಶ್ವಾಸನೆಗಳನ್ನು ಈಡೇರಿಸಲು ಸಂಪೂರ್ಣವಾಗಿ ವಿಫಲವಾಗಿದ್ದು ದಿನನಿತ್ಯ ಜನತೆಗೆ ಸುಳ್ಳಿನ ಭರವಸೆಗಳನ್ನು ನೀಡಿ ಬಡ ಜನತೆಗೆ ರೈತರಿಗೆ ಮದ್ಯಮ ವರ್ಗದವರು ಬೆಲೆ ಏರಿಕೆಯಿಂದ ಜೀವನ ಕೆಂಗಟ್ಟಿದ್ದು ಇದರ ಬಗ್ಗೆ ಕಿಂಚ್ಚಿತ್ತು ಯೋಚಿಸಿದ ದೇಶದ ಪ್ರಧಾನಿ ಹಾಗೂ ರಾಜ್ಯದ ಮುಖ್ಯಮಂತ್ರಿಗಳು ಯಾವುದೆ ಜನಪರ ಯೋಜನೆಗಳನ್ನು ಜನರ ಬಾಗಿಲಿಗೆ ತಲುಪಿಸಲು ಸಂಪೂರ್ಣ ವಿಫಲರಾಗಿದ್ದಾರೆ. ರೈತರು ಸ್ವಾವಲಂಭಿ ಬದುಕು ಕಟ್ಟಿಕೊಳ್ಳಲು ಆದ್ಯತೆ ನೀಡದ ಬಿಜೆಪಿ ಸರ್ಕಾರದವರು ರೈತರ ಯಾವುದೆ ಸಾಲವನ್ನು ಮನ್ನಾ ಮಾಡುತ್ತಿಲ್ಲ ೨ಲಕ್ಷ ೩೩ಕೋಟಿ ರಾಜ್ಯದ ಬಜೆಟ್ ಆಗಿದ್ದು ಇದರಲ್ಲಿ ಅಭಿವೃದ್ಧಿ ಅನುದಾನ ಕೇಳಿದಾಗ ಕೋವಿಡ್-೧೯ರ ನೆಪ ಹೇಳುತ್ತಾರೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.
ಅವರು ಇಂದು ಬಂಡಿಹರ್ಲಾಪುರ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಾದ ಅಗಳಕೇರಾ, ಬಂಡಿ ಹರ್ಲಾಪುರ, ಹಳೇಬಂಡಿಹರ್ಲಾಪುರ, ಶಿವಪುರ ಬಸಾಪುರ ನಾರಾಯಣ ಪೇಟೆ ಹಾಗೂ ಅಯೋದ್ಯ ಗ್ರಾಮಗಳಲ್ಲಿ ವಿವಿಧ ಯೋಜನೆಯಡಿಯಲ್ಲಿ ಅಂದಾಜು ಮೊತ್ತ ೨.೫೦ಕೋಟಿ ಶಾಲಾ ಕೊಠಡಿ, ಸ್ಮಾರ್ಟ್ ಕ್ಲಾಸ್, ಕ್ಷೇಮಾಭಿವೃದ್ಧಿ ಕೇಂದ್ರ (ಆರೋಗ್ಯ ಇಲಾಖೆ) ಉದ್ಘಾಟನೆ ಹಾಗೂ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗಳ ಭೂಮಿ ಪೂಜೆ ನೇರವೆರಿಸಿ ಮಾತನಾಡಿದರು.
ಈವರೆಗೂ ಕೊವಿಡ್-೧೯ಗೆ ೫ಸಾವಿರ ಕೋಟಿ ಖರ್ಚುಗಿದ್ದು ಉಳಿದ ಹಣದ ಲೆಕ್ಕ ನೀಡುತ್ತಿಲ್ಲ ಕೇಂದ್ರದ ಹಣಕಾಸು ಸಚಿವರು ೨೦ಲಕ್ಷಕೋಟಿ ಅನುದಾನ ಬಿಡುಗಡೆ ಮಾಡಿದ್ದು ಅದನ್ನು ಯಾವ ಇಲಾಖೆಗೆ ಬಳಿಕೆ ಯಾಗಿದೆ ಎಂದು ಹೇಳುತ್ತಿಲ್ಲ ಕಲ್ಯಾಣ ಕರ್ನಾಟಕದ ಶಾಸಕರ ಪ್ರದೇಶಭಿವೃದ್ಧಿಗೆ ನೀಡುತ್ತಿದ್ದ ಅನುದಾನವನ್ನು ಸಹ ಸ್ಥಗಿತಗೊಳಿಸಿದ್ದು ಅಭಿವೃದ್ಧಿಯು ಸಂಪೂರ್ಣವಾಗಿ ಕುಂಠಿತವಾಗಿದೆ. ದೇಶವನ್ನು ಖಾಸಗೀಕರಣ ಮಾಡಲು ಯತ್ನಿಸುತ್ತಿರುವ ಪ್ರಧಾನಿಯವರ ಈ ದ್ವಂದ ನೀತಿಯಿಂದ ಮೀಸಲಾತಿಗೆ ದಕ್ಕೆಯಾಗುವುದು ಶತಸಿದ್ದ. ಹೇಳುವುದಕ್ಕೆ ಮಾತ್ರ ಸಬ್ ಕಾ ಸಾತ್ ಸಬ್ ಕಾ ವಿಕಾಸ ಎನ್ನುವ ಇವರು ದೇಶವನ್ನು ಅದೋಗತಿಗೆ ಒಯುವುದು ಕಟುಸತ್ಯ ಎಂದು ಹೇಳಿ ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರದ ವಿರುದ್ದ ಹರಿಹಾಯ್ದರು. ಈ ಸಂದರ್ಭದಲ್ಲಿ ತಾ.ಪಂ. ಅಧ್ಯಕ್ಷ ಬಾಲಚಂದ್ರನ್, ಎಪಿಎಮ್‌ಸಿ ಅಧ್ಯಕ್ಷ ವಿಶ್ವನಾಥ ರಾಜು, ಬಂಡಿಹರ್ಲಾಪುರ ಗ್ರಾಪಂ ಅದ್ಯಕ್ಷ ಚನ್ನಕೃಷ್ಣ ಗೊಲ್ಲರ, ಶಿವಪು ಗ್ರಾಪಂ ಅದ್ಯಕ್ಷ ರೇಖಾ ಬಸವರಾಜ, ಮಾಜಿ ಕೆಎಮ್‌ಎಫ್ ಅದ್ಯಕ್ಷ ವೆಂಕನಗೌಡ್ರ ಹಿರೇಗೌಡ್ರ, ನಗರಸಬಾ ಸದಸ್ಯ ಅಕ್ಬರಪಾಷ ಪಲ್ಟನ್ ಮುಖಂಡರುಗಳಾದ ವೆಂಕಟೇಶ ಕಂಪಸಾಗರ, ಕೃಷ್ಣರೆಡ್ಡಿ ಗಲಿಬಿ, ವಾಣಿಜ್ಯೋದ್ಯಮಿ ಚಂದ್ರಶೇಖರ, ದೇವಣ್ಣ ಮ್ಯಾಕಳ್ಳಿ, ವೆಂಕಟೇಶ ಅಗಳಕೆರಾ, ಅಬ್ಬುಗಾಲೆಪ್ಪ, ಯಮನೂರಪ್ಪ, ರೇಣುಕಮ್ಮ ಕಟಗಿ, ಟಿಡಿಬಿ ವೆಂಕಟೇಶ, ನಾಗರಾಜ ಪಟುವಾರಿ ಮೊಹಮ್ಮದ್ ಸಾಬ ಅಗಳಕೇರಾ, ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಸೊನ್ನದ ಇನ್ನೂ ಅನೇಕ ತಾಲೂಕ ಆಧಿಕಾರಿಗಳು ಅಭಿಯಂತರರು ಹಾಗೂ ಗುತ್ತಿಗೆದಾರರು ಉಪಸ್ಥಿತರಿದ್ದರು.

Please follow and like us:
error