ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆಯಂತಹ ಕೆಟ್ಟ ಮನುಷ್ಯನ ಬಗ್ಗೆ ಮಾತನಾಡುವುದಿಲ್ಲ: ಕಾಗಿನೆಲೆ ಸ್ವಾಮೀಜಿ

 ದಾವಣಗೆರೆ, ಎ. 5: ಆ ಕೆಟ್ಟ ಮನುಷ್ಯನ (ಅನಂತ ಕುಮಾರ್ ಹೆಗಡೆ ) ಬಗ್ಗೆ ನಾನು ಮಾತನಾಡಲು ಇಷ್ಟಪಡಲ್ಲ. ಇದೇ ರೀತಿ ಕಟ್ಟದಾಗಿ ಆತ ಮಾತನಾಡುತ್ತಾ ಹೋದರೆ ಬಿಜೆಪಿಗೆ ಹೊಡೆತ ಬಿಳಲಿದೆ ಎಂದು ಕಾಗಿನೆಲೆ ಸ್ಥಾನದ ಪೀಠಾಧ್ಯಕ್ಷರಾದ ನಿರಂಜನಾನಂದ ಪುರಿ ಸ್ವಾಮೀಜಿ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ವಿರುದ್ಧ ಕಿಡಿಕಾರಿ ಎಚ್ಚರಿಕೆ ನೀಡಿದ್ದಾರೆ.

ನಿನ್ನೆ ಕಾಗಿನೆಲೆ ಮಠದಲ್ಲಿ ಅಮಿತ್ ಶಾ ಅವರಿಗೆ ಸ್ವಾಮೀಜಿಗಳು ಸಿಗಲಿಲ್ಲ ಎಂದು ಅಪಪ್ರಚಾರಕ್ಕೆ ಹರಿಹರ ತಾಲೂಕಿನ ಬೆಳ್ಳೂಡಿಯಲ್ಲಿರುವ ಶಾಖಾ ಮಠದಲ್ಲಿ ಮಾಧ್ಯಮಗಳಿಗೆ ಸ್ಪಷ್ಡನೆ ನೀಡುವ ವೇಳೆ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ನಿಮ್ಮ ಸಮಾಜದ ಬಗ್ಗೆ ಅವಹೇಳನವಾಗಿ ಮಾತನಾಡಿದ್ದಾ ರೆಂದು ನಿಮಗೆ ಬೇಸರವೇ ಎಂದು ಸ್ವಾಮೀಜಿಯನ್ನು ಮಾಧ್ಯಮದವರು ಕೇಳಿದ ಪ್ರಶ್ನೆ ಈ ಮೇಲಿನಂತೆ ಸ್ವಾಮೀಜಿ ಉತ್ತರಿಸಿದ್ದಾರೆ.

ಕಿವಿ ಹಿಂಡಿ ಬಿಜೆಪಿಯವರು ಪಾಠ ಕಲಿಸಲಿ, ನಾನು ಅಂತ ಕೆಟ್ಟ ಮನುಷ್ಯನ ಬಗ್ಗೆ ಮಾತನಾಡುವುದಿಲ್ಲ ಎಂದು ನಿರಂಜನಾನಂದ ಪುರಿ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಬಿಜೆಪಿಯಲ್ಲಿ ಕೆ.ಎಸ್. ಈಶ್ವರಪ್ಪ ಅವರಿಗೆ ಬೇಸರವಾದ ಬಗ್ಗೆ ತಮ್ಮ ಮುಂದೆ ಹೇಳಿದ್ದರು. ಈ ವಿಚಾರವನ್ನು ನಾನು ರಾಯಚೂರಿನಲ್ಲಿ ನಡೆದ ಸಭೆಯಲ್ಲಿ ಹೇಳಿದ್ದೆ. ಅದು ಯಡಿಯೂರಪ್ಪ ಅವರಿಗೆ ಅಲ್ಲ. ಬಿಜೆಪಿಯವರು ನಮ್ಮ ಸಮಾಜದ ನಾಯಕರನ್ನು ಸರಿಯಾಗಿ ನಡೆಸಿಕೊಳ್ಳಿ ಎಂದು ಹೇಳಿರುವುದಾಗಿ ತಿಳಿಸಿ, ನಾನು ಆ ಪಕ್ಷ ಈ ಪಕ್ಷ ಅಂತಾ ಇಲ್ಲಾ. ಎಲ್ಲ ಪಕ್ಷಗಳಿಗೆ ಕನಕ ಗುರುಪೀಠದ ಬಾಗಿಲು ತೆರೆದಿರುತ್ತೆ ಎಂದು ಹೇಳಿದರು.

Varthabharati