ಕೇಂದ್ರ , ರಾಜ್ಯ ಸರಕಾರಗಳು ಜನವಿರೋದಿ ಸರ್ಕಾರಗಳು : ಶಾಸಕ ಕೆ. ರಾಘವೇಂದ್ರ ಹಿಟ್ನಾಳ

ಕೊಪ್ಪಳ : ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತ ಮಾಡುತ್ತಿರುವ ಬಿಜೆಪಿ ಸರ್ಕಾರವು ಜನವಿರೋದಿ ಸರ್ಕಾರವಾಗಿದ್ದು ರೈತರ ಬಡವರ ಮತ್ತು ಮದ್ಯಮ ವರ್ಗದವರ ಕಷ್ಟ ಕಾ

 

ರ್ಪುಣ್ಯಗಳಿಗೆ ಸ್ಪಂದಿಸದ ಕಿವುಡು ಹಾಗೂ ಮೂಕ ಸರ್ಕಾರ

ವಾಗಿದ್ದು ದೇಶವನ್ನು ಅದೋಗತಿಯತ್ತ ಕೊಂಡೊಯ್ಯುತಿರುವ ಈ ಸರ್ಕಾರವು ಯಾವುದೆ ಜನಪರ ಯೋಜನೆಗಳನ್ನು ಕೈಗೊಳ್ಳುತ್ತಿಲ್ಲ  ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಆಕ್ರೋಶ ವ್ಯಕ್ತಪಡಿಸಿದರು.

ಅವರು ಗೊಂಡಬಾಳ ಜಿಲ್ಲಾ ಪಂಚಾಯತ್ ವ್ಯಾಪ್ತಿಯ

ಗ್ರಾಮಗಳಾದ ಚುಕ್ಕನಕಲ್ಲ್, ಮುದ್ದಾಬಳ್ಳಿ, ಹೊಸ ಗೊಂಡಬಾಳ, ಹಳೆ ಗೊಂಡಬಾಳ, ಹ್ಯಾಟಿ, ಬಹದ್ದೂರ ಬಂಡಿ ಹಾಗೂ ಮುಂಡರಗಿ ಗ್ರಾಮಗಳಲ್ಲಿ ಅಂದಾಜು ಮೊತ್ತ ರೂ ೦೧ ಕೋಟಿ ೮೦ ಲಕ್ಷದ ವಿವಿಧ ಕಾಮಗಾರಿಗಳ ಭೂಮಿ ಪೂಜೆ ಹಾಗೂ ಶಾಲಾ ಕಟ್ಟಡ ಉದ್ಘಾಟನೆ ನೇರವೆರಿಸಿ ಬಳಿಕ ಮಾತನಾಡುತ್ತಿದ್ದರು.

ಶಾಸಕ ಕೆ. ರಾಘವೇಂದ್ರ ಹಿಟ್ನಾಳರವರು ಇಡಿ ವಿಶ್ವವನ್ನೆ ತಲ್ಲಣ ಗೊಳಿಸಿದ ಕರೋನ ಮಹಾಮಾರಿಯಿಂದ ಜನರು ಉದ್ಯೋಗ ವ್ಯಾಪಾರ ಕಳೆದುಕೊಂಡು ಅನೇಕರು ಪ್ರಾಣ ತೆರಬೇಕಾಯಿತು. ೧೧ತಿಂಗಳು ಕರೋನ ವೈರಸ್ಸಿನ ನೆಪವಡ್ಡಿ ರಾಜ್ಯ ಸರ್ಕಾರವು ಯಾವುದೆ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡುತ್ತಿಲ್ಲ. ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅವಧಿಯಲ್ಲಿ ಅನೇಕ ಬೃಹತ್ ಯೋಜನೆಗಳನ್ನು ನೀಡಿದ ಕಾಂಗ್ರೆಸ್ ಸರ್ಕಾರದಲ್ಲಿ ನೀರಾವರಿ ಆರೋಗ್ಯ ಶಿಕ್ಷಣಕ್ಕೆ ಹೆಚ್ಚು ಅನುದಾನ ತಂದು ಕೊಪ್ಪಳ ನಗರದಲ್ಲಿ ಕಲಬುರಗಿ ಈಎಸ್ ಆಸ್ಪತ್ರೆ ನಂತರ ಕಲ್ಯಾಣ ಕರ್ನಾಟಕದಲ್ಲಿ ರೂ.೧೪೦ಕೋಟಿ ವೆಚ್ಚದ ಅನುದಾನದಡಿಯಲ್ಲಿ ಮಲ್ಟಿಸ್ಪೇಷಲ್ ಆಸ್ಪತ್ರೆ ನಿರ್ಮಾಣವು ಕೊಪ್ಪಳ ನಗರದಲ್ಲಿ ಕೈಗೊಳ್ಳಲಾಗಿದೆ. ೧೪೦೦೦ ಎಕರೆ ಭೂಮಿಗೆ ನೀರಾವರಿ ಕಲ್ಪಿಸುವ ರೂ.೧೮೦ ಕೋಟಿ ವೆಚ್ಚ ಬಹದ್ದೂರು ಬಂಡಿ-ನವಲ್‌ಕಲ್ ಏತ ನೀರಾವರಿ ಯೋಜನೆ ಕಾಮಗಾರಿಯು ಬರದಿಂದ ಸಾಗಿದ್ದು ಬರುವ ದಿನಗಳಲ್ಲಿ ಒಣ ಬೇಸಾಯದ ಕ್ಷೇತ್ರಕ್ಕೆ ಕಾಯ ಕಲ್ಪವಾಗಲಿದೆ ಸರ್ಕಾರ ಕೊಡುವ ಅನುದಾನದ ಸದ್ಬಳಿಕೆಗೆ ಸರ್ವರು ಕೈಜೋಡಿಸಿದಾಗ ಮಾತ್ರ ಅಬಿವೃದ್ಧಿ ಕಾರ್ಯಗಳು ಯಶಸ್ವಿಯಾಗಲು ಸಾದ್ಯ ಎಂದು ಹೇಳಿದರು.

 

ಈ ಸಂದರ್ಭದಲ್ಲಿ ಜಿ.ಪಂ ಉಪಾದ್ಯಕ್ಷ ಬೀನಾಗೌಸ, ಜಿ.ಪಂ ಸದಸ್ಯ ಗೂಳಪ್ಪ ಹಲಗೇರಿ, ತಾ.ಪಂ ಅದ್ಯಕ್ಷ ಬಾಲಚಂದ್ರನ್ ಎಪಿಎಮ್‌ಸಿ ಸದಸ್ಯ ಜಡಿಯಪ್ಪ ಬಂಗಾಳಿ ಕೆಓಫ್ ಅದ್ಯಕ್ಷ ಸುರೇಶ ರೆಡ್ಡಿ ಮಾದನೂರು ನಗರ ಸಭಾ ಸದಸ್ಯ ಅಕ್ಬರ ಪಾಷ ಪಲ್ಟನ್ ಜಿಲ್ಲಾ ಯುವ ಕಾಂಗ್ರೆಸ್ ಅದ್ಯಕ್ಷ ವಿ ಜಿ ಪಾಟೀಲ್ ಮುಖಂಡರುಗಳಾದ ಪ್ರಸನ್ನ ಗಡಾದ ಕೃಷ್ಣರೆಡ್ಡಿ ಗಲಬಿ ರಾಮಣ್ಣ ಕಲ್ಲಣನವರ್ ಶಿವಕುಮಾರ ಪೌಲಿ ಶೆಟ್ಟರ್ ಗವಿಸಿದ್ದಪ್ಪ ಚಿನ್ನೂರು ಮಹೆಬೂಬ ಅರಗಂಜಿ ಆನಂದ ಕಿನ್ನಾಳ ಚಾಂದ್ ಪಾಷ ಕಿಲ್ಲೆದಾರ ಹನುಮಂತಪ್ಪ ಕಿಡದಾಳ, ಹನುಮೇಶ ಹೊಸಳ್ಳಿ ಪಂಪಣ್ಣ ಪೂಜಾರ ದೇವಪ್ಪ ಚುಕ್ಕನಕಲ್ ತಾಲೂಕ ಅಧಿಕಾರಿಗಳು ಪೋಲಿಸ್ ಇಲಾಖೆಯ ಅಧಿಕಾರಿಗಳು ಕೆಆರ್‌ಐಡಿಎಲ್ ಸಹಾಯಕ ಅಧಿಕಾರಿ ಹಾಗೂ ನೂತನ ಗ್ರಾಮ ಪಂಚಾಯತ್ ಅದ್ಯಕ್ಷರು ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

 

Please follow and like us:
error