ಕೆ.ಪಿ.ಎಮ್.ಇ ನೋಂದಣಿ ಇಲ್ಲದೇ ಚಿಕಿತ್ಸೆ ನೀಡುವಂತಿಲ್ಲ : ವಿಕಾಸ್ ಕಿಶೋರ್ ಸುರಳ್ಕರ್

ಕೊಪ್ಪಳ, : ಕೆ.ಪಿ.ಎಮ್.ಇ ಯಲ್ಲಿ ನೋಂದಣಿ ಮಾಡಿಕೊಳ್ಳದ ಖಾಸಗಿ ವೈದ್ಯಕೀಯ ಸಂಸ್ಥೆಗಳು ಚಿಕಿತ್ಸೆ ನೀಡುವಂತಿಲ್ಲ. ಅಲ್ಲದೇ ಖಾಸಗಿ ವೈದ್ಯಕೀಯ ಸಂಸ್ಥೆಗಳನ್ನು ಕಾರ್ಯಾಚರಣೆ ಮಾಡುವ ಅಧಿಕಾರವನ್ನು ತಾಲ್ಲೂಕು ಆರೋಗ್ಯಾಧಿಕಾರಿಗಳಿಗೂ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಹೇಳಿದರು. ಅವರು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಸೋಮವಾರ (ಮಾ. 29) ಆಯೋಜಿಸಲಾಗಿದ್ದ ಕೆ.ಪಿ.ಎಮ್.ಇ ನೋಂದಣಿ ಪ್ರಾಧಿಕಾರದ ಸಭೆ ಹಾಗೂ ಪಿ.ಸಿ ಮತ್ತು ಪಿ.ಎನ್.ಡಿ.ಟಿ ಕಾಯ್ದೆ ಅಡಿಯಲ್ಲಿ ಬರುವ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಜ್ಯಮಟ್ಟದ ನಿರ್ದೇಶನದಂತೆ ನೋಂದಣಿ ಮರುನೋಂದಣಿ ಅರ್ಜಿಗಳನ್ನು ನೇರವಾಗಿ ಟಿ.ಎಚ್.ಓ ಅವರಿಗೆ ಸಲ್ಲಿಸಬೇಕು.  ಈ ಹಿಂದೆ ನೋಂದಣಿಯಾದ ಖಾಸಗಿ ವೈದ್ಯಕೀಯ ಸಂಸ್ಥೆಗಳು ಮರುನೋಂದಣಿ ಮಾಡಿರುವುದಿಲ್ಲ. ಈ ಕುರಿತು ಕ್ರಮ ವಹಿಸಬೇಕು.  ಜಿಲ್ಲೆಯಲ್ಲಿ 148 ಖಾಸಗಿ ವೈದ್ಯಕೀಯ ಸಂಸ್ಥೆಗಳು ಇದ್ದು, ಈ ಪೈಕಿ 138 ಸಂಸ್ಥೆಗಳು ಮರುನೋಂದಣಿ ಮಾಡಿಕೊಂಡಿವೆ.  ಖಾಸಗಿ ವೈದ್ಯಕೀಯ ಸಂಸ್ಥೆಗಳು ಕೆ.ಪಿ.ಎಮ್.ಇ ಅಡಿ ನೋಂದಣಿ  ಮಾಡದವರು 15 ದಿನಗಳ ಒಳಗೆ ಕಡ್ಡಾಯವಾಗಿ ನೋಂದಣಿ ಮಾಡಬೇಕು.  ಇಲ್ಲದಿದ್ದಲ್ಲಿ ಅಂತಹ ಸಂಸ್ಥೆಗಳು ಚಿಕಿತ್ಸೆ ನೀಡುವಂತಿಲ್ಲ ಎಂದು ಪ್ರಕಟಣೆ ನೀಡಿ, ಬಳಿಕವು ನೋಂದಣಿ ಆಗದೇ ಸಂಸ್ಥೆಗಳು ಕಾರ್ಯಪ್ರವೃತ್ತವಾಗಿದ್ದರೆ ಅವುಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

 

Advrtisment : AM Traders Koppal

 

ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾರ್ಯಾಚರಣೆ ಹಾಗೂ ದಾಖಲಾತಿ ಪರಿಶೀಲನೆ ಮಾಡುವ ಅಧಿಕಾರವನ್ನು ಜಿಲ್ಲಾ ಮಟ್ಟದ ಆರೋಗ್ಯ ಅಧಿಕಾರಿಗಳ ಜೊತೆಗೆ ತಾಲ್ಲೂಕು ಆರೋಗ್ಯಾಧಿಕಾರಿಗಳು ಸಹ ಹೊಂದಿದ್ದಾರೆ.  ಕೆ.ಪಿ.ಎಮ್.ಇ ನೋಂದಣಿ ಪ್ರಾಧಿಕಾರದಿಂದ ಕೆ.ಪಿ.ಎಮ್.ಇ ಕಾಯ್ದೆ ಅಡಿಯಲ್ಲಿ ನೋಂದಣಿಯಾದ ಸಂಸ್ಥೆಗಳಿಗೆ ಪ್ರಮಾಣ ಪತ್ರವನ್ನು ಡಿಜಿಟಲ್ ಮುಖಾಂತರ ನೀಡಲಾಗುತ್ತಿದೆ.  ಈಗಾಗಲೇ ಆನ್ ಲೈನ್ ನೋಂದಣಿ ಪ್ರಕ್ರಿಯೆ ಆರಂಭಿಸಲಾಗಿದ್ದು, ಈ ಕುರಿತು ಸಂಬAಧಿಸಿದವರಿಗೆ ತರಬೇತಿಯನ್ನು ನೀಡಬೇಕು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಲಕನಂದ ಮಳಗಿ ಮಾತನಾಡಿ, ಪಿ.ಸಿ ಮತ್ತು ಪಿ.ಎನ್.ಡಿ.ಟಿ ಕಾಯ್ದೆ ಅಡಿಯಲ್ಲಿ ಕೊಪ್ಪಳದ ಶ್ರೀ ಮಂಗಳ ಮೆಟರ್ನಿಟಿ ಮತ್ತು ಸರ್ಜಿಕಲ್ ಸೆಂಟರ್ ಆಸ್ಪತ್ರೆಯಲ್ಲಿ ಕಂಡುಬAದ ನ್ಯೂನ್ಯತೆಗಳ ಕಾರಣ ಕೇಳಿ ನೋಟಿಸ್ ನೀಡಲಾಗಿದ್ದು, ಇದ್ದಕ್ಕೆ ಆಸ್ಪತ್ರೆಯವರು ಸೋಕಾಸ್ ನೋಟಿಸ್‌ನಲ್ಲಿ ಆಸ್ಪತ್ರೆಯ ವಿವಿಧ ಕಾರಣಗಳನ್ನು ನೀಡಿ, ಪ್ರತಿಕ್ರಿಯಿಸಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಿದರು.
ಎಂಟಿಪಿ(ವೈದ್ಯಕೀಯ ಗರ್ಭಪಾತ) ಯು ಸೂಕ್ಷö್ಮ ಹಾಗೂ ಭಾವನಾತ್ಮಕ ವಿಷಯವಾಗಿದ್ದು, ಈ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಗಮನ ಹರಿಸಬೇಕು.  ಮೊದಲ ಹೆಣ್ಣುಮಗುವಿಗೆ ಯಾವುದೇ ರೀತಿಯ ಎಂಟಿಪಿ ಸಮಸ್ಯೆ ಎದುರಾಗುವುದಿಲ್ಲ.  ಇದು ಎರಡನೇ ಹೆಣ್ಣು ಮಗುವಿಗೆ ಮಾತ್ರ ಎದುರಾಗುತ್ತದೆ.  ಹಾಗಾಗಿ ತಾಲ್ಲೂಕು ಆರೋಗ್ಯಾಧಿಕಾರಿಗಳು ಆಸ್ಪತ್ರೆಗಳಿಗೆ ಭೇಟಿ ನೀಡಿ, ಸೂಕ್ತ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ತಾಲ್ಲೂಕಾ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ರವೀಂದ್ರ ಮಾತನಾಡಿ, ಗಂಗಾವತಿಯ ಸ್ಪೂರ್ತಿ ಕ್ಲಿನಿಕ್ ಆಸ್ಪತ್ರೆಯನ್ನು ಮರುನೋಂದಣಿ ಮಾಡಲಾಗಿದೆ.  ಕಿಮ್ಸ್ನ ಅನಸ್ತೇಶಿಯಾ ವಿಭಾಗದಲ್ಲಿ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಷಿನ್ ಖರೀದಿಸಲು ಇಲಾಖೆಯಿಂದ ಪರವಾನಿಗೆ ನೀಡಲಾಗಿದೆ.  ಗಂಗಾವತಿಯ ವರಸಿದ್ಧಿ ಹಾಸ್ಪಿಟಲ್ ಮತ್ತು ಎಂ.ಆರ್.ಸಿಯವರು ಯುಸಿಜಿ 2ಡಿ ಎಕೋ ಮಷಿನ್ ಖರೀದಿಸಲು ಆರೋಗ್ಯ ಇಲಾಖೆಯಿಂದ ಪರವಾನಿಗೆ ನೀಡಲಾಗಿದ್ದು, ಅದನ್ನು ಖರೀದಿಸಿ ಆ ನಂತರ ಮಷಿನ್ ಆರಂಭಿಸಲಾಗುತ್ತದೆ.  ಜಿಲ್ಲೆಯಲ್ಲಿ 51 ಸ್ಕಾö್ಯನಿಂಗ್ ಸೆಂಟರ್‌ಗಳಿದ್ದು, ಇದರಲ್ಲಿ 43 ಸೆಂಟರ್‌ಗಳು ಚಾಲ್ತಿಯಲ್ಲಿವೆ.  8 ಕೇಂದ್ರಗಳು ಸ್ಥಗಿತಗೊಂಡಿವೆ ಎಂದು ಮಾಹಿತಿ ನೀಡಿದರು.
ಸ್ಕಾö್ಯನಿಂಗ್ ಸೆಂಟರ್‌ಗಳನ್ನು ಸರಿಯಾದ ರೀತಿಯಲ್ಲಿ ಪರೀಕ್ಷೆ ಮಾಡಬೇಕು. ಎಲ್ಲ ಸ್ಕಾö್ಯನಿಂಗ್ ಸೆಂಟರ್‌ಗಳಲ್ಲಿ ಕ್ಯಾಮರಾ ಕಡ್ಡಾಯಗೊಳಿಸಿ, ಎಷ್ಟು ಸ್ಕಾö್ಯನಿಂಗ್ ಮಾಡುತ್ತಾರೆ ಎಂದು ಕಚೇರಿಯಲ್ಲಿದ್ದೇ ನಿಗಾವಹಿಸಬೇಕು.  ರಾಜ್ಯಮಟ್ಟದ ನಿರ್ದೇಶನದಂತೆ ತಾಲ್ಲೂಕು ಮಟ್ಟದಲ್ಲಿ ಉಪ ಸಮಿತಿ ರಚಿಸಲಾಗಿದ್ದು, ಸಮಿತಿಯವರು ಸ್ಕಾö್ಯನಿಂಗ್ ಸೆಂಟರ್‌ಗಳಿಗೆ ಭೇಟಿ ನೀಡಿ, ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ತಾಕೀತು ಮಾಡಿದರು.
ಪಿ.ಸಿ ಮತ್ತು ಪಿ.ಎನ್.ಡಿ.ಟಿ ಕಾಯ್ದೆ ಹಾಗೂ ಕೆ.ಪಿ.ಎಮ್.ಇ ಕಾಯ್ದೆ ಕುರಿತು ಜಿಲ್ಲಾಮಟ್ಟದ ಕಾರ್ಯಾಗಾರವನ್ನು ನಡೆಸಿ ಖರ್ಚು ವೆಚ್ಚಗಳನ್ನು ಭರಿಸುವ ಕುರಿತು ಡಿಎಚ್‌ಓ ಚರ್ಚಿಸಿದರು.  ಇದ್ದಕ್ಕೆ ಪ್ರತಿಕ್ರಿಯಿಸಿ ಡಿಸಿ, ಬೇರೆಯವರಿಗೆ ಯಾವುದೇ ಸಭೆ ಹಾಗೂ ಸಮಾರಂಭಗಳಿಗೆ ಅನುಮತಿ ನೀಡುತ್ತಿಲ್ಲ. ಹಾಗಾಗಿ ನಾವೂ ಯಾವುದೇ ಕಾರ್ಯಾಗಾರ ಮಾಡುವುದು ಬೇಡ.  ಕೋವಿಡ್ ಕಡಿಮೆಯಾದ ಬಳಿಕ ಕಾರ್ಯಾಗಾರ ಮಾಡಿ ಎಂದು ಸಲಹೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಆಯುಷ್ ಅಧಿಕಾರಿ ಡಾ. ಬಸವರಾಜ ಕುಂಬಾರ, ಯುನಿಸೆಫ್‌ನ ಹರೀಶ್ ಜೋಗಿ, ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಸದಸ್ಯೆ ಸರೋಜಾ ಬಾಕಳೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Please follow and like us:
error