ಕೆಲಸದ ಒತ್ತಡದ ನಿವಾರಣೆಗೆ ಕ್ರೀಡಾಕೂಟಗಳು ಸಹಕಾರಿ-ರಘುನಂದನ್ ಮೂರ್ತಿ

ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಜಿ.ಪಂ.ಸಿಇಓ ರಘುನಂದನ್ ಮೂರ್ತಿ ಚಾಲನೆ

ಕೊಪ್ಪಳ :  ಸರಕಾರಿ ಕೆಲಸದಲ್ಲಿ ಮಾಡುವ ಸರಕಾರಿ ಅಧಿಕಾರಿಗಳಿಗೆ ಒತ್ತಡಗಳು ಬಹಳ ಇರುತ್ತದೆ. ಅದರಲ್ಲಿ ಪೊಲೀಸರಿಗೆ ಮಾನಸಿಕ ಜೊತೆಗೆ ದೈಹಿಕವಾಗಿ ಒತ್ತಡಗಳು ಹೆಚ್ಚುತ್ತಿವೆ.  ಆದರೆ ಅದರ ನಿವಾರಣೆಗೆ ಪ್ರತಿ ವರ್ಷ ಇಂತಹ ಕ್ರೀಡಾಕೂಟವನ್ನು ಆಯೋಜಿಸಿರುವುದು ಅವಶ್ಯಕವಾಗಿದೆ.  ಕೆಲಸದ ಒತ್ತಡ ನಿವಾರಣೆಗೆ ಕ್ರೀಡಾಕೂಟಗಳು ಸಹಕಾರಿಯಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರಘುನಂದನ್ ಮೂರ್ತಿ ಹೇಳಿದರು.

ಶುಕ್ರವಾರ  ಬೆಳಿಗ್ಗೆ ಕೊಪ್ಪಳ ಜಿಲ್ಲಾ  ಪೊಲೀಸ್  ವತಿಯಿಂದ  ಜಿಲ್ಲಾ ಪೊಲೀಸ್ ಮೈಧಾನದಲ್ಲಿ ಆಯೋಜಿಸಿದ್ದ 2021ನೇ ಸಾಲಿನ ಜಿಲ್ಲಾ  ಪೊಲೀಸ್ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು

ಬೇರೆ ಬೇರೆ ಹಂತದಲ್ಲೂ ಕೂಡ ಒಂದು ತಂಡವಾಗಿ ಕೆಲಸ ಮಾಡಿದರೂ ಇಡಿ ಶ್ರೇಯಸ್ಸು ಆ ತಂಡಕ್ಕೆ ಹೋಗುತ್ತದೆ. ಆದರೆ, ಆಟದಲ್ಲೂ ಸೋಲು ಗೇಲವು ಮುಖ್ಯವಲ್ಲ ಕ್ರೀಡಾಕೂಟದಲ್ಲಿ ಭಾಗವಹಿಸುವುದು ಬಹಳ ಮುಖ್ಯವಾಗಿದೆ. ಕ್ರೀಡೆಯಲ್ಲಿ ಒಂದು ಟೀಮ್ ಗೆದ್ದರೆ ಇನ್ನೋಂದು ಟೀಪ್ ಸೋಲಬೇಕಾಗುತ್ತದೆ. ಆದರೆ ಸೋಲಿಗೆ ಕುಂದದೆ ಮುಂದಿನ ಗೆಲವಿಗೆ ಪ್ರಯತ್ನಶೀಲರಾಗಬೇಕು ಎಂದು ಕರೆ ನೀಡಿದರು.

ಡಿಆರ್ ಘಟಕದಲ್ಲಿ ಕೆಲಸ ಮಾಡುವ  ಪ್ರಸನ್ನ ಕ್ರೀಡಾ ಜ್ಯೋತಿಯನ್ನು ತಂದು ಕ್ರೀಡಾ ಜ್ಯೋತಿಯನ್ನು ಬೆಳಗಿಸಿದರು. ನಂತರ ವಿವಿಧ ಕ್ರೀಡೆಗಳು ನಡೆದವು. ಪೊಲೀಸ್ ಕ್ರೀಡಾ ಪಟುಗಳಿಗೆ ಪ್ರತಿಜ್ಞಾ ವಿಧಿಯನ್ನು ಭೋದಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್ ಎಲ್ಲರನ್ನು ಸ್ವಾಗತಿಸಿದರು.  ಡಿವೈಎಸ್ಪಿಗಳಾದ ವೆಂಕಟಪ್ಪ ನಾಯಕ, ಆರ್.ಎಸ್.ಉಜ್ಜನಕೊಪ್ಪ, ಸಿಪಿಐಗಳಾದ ಮಾರುತಿ  ಗುಳ್ಳಾರಿ, ವಿಶ್ವನಾಥ ಹಿರೇಗೌಡ್ರ,  ಉದಯ ರವಿ, ರವಿ ಉಕ್ಕುಂದ , ನಾಗರಡ್ಡಿ, ಶಿವರಾಜ, ನಿಂಗಪ್ಪ ಕುಷ್ಟಗಿ, ಚಂದ್ರಶೇಖರ, ಪಿಐಗಳಾದ ವೇಂಕಟಸ್ವಾಮಿ,ಚಂದ್ರಪ್ಪ, ಸಂಪ್ರೀತ್ ಸೇರಿದಂತೆ ಅನೇಕ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದರು.

Please follow and like us:
error