ಕೆಲವೇ ವರ್ಷಗಳಲ್ಲಿ ಈಗಿನ ಸ್ಥಿತಿ ಸಂಪೂರ್ಣ ಬದಲು : ವಿವೇಕಾನಂದ

ಕೊಪ್ಪಳ, ಮಾ. ೧೫: ಮುಂದಿನ ಕೆಲವೇ ವರ್ಷಗಳಲ್ಲಿ ಈಗಿನ ಸ್ಥಿತಿ ಸಂಪೂರ್ಣ ಬದಲಾಗಿ ಜನರ ಜೀವನಮಟ್ಟ ಕನಿಷ್ಠ ಮಟ್ಟಕ್ಕೆ ತಲುಪಲಿದೆ, ಅದನ್ನು ಹಾಗೆ ಮಾಡಲು ಬಿಡಬಾರದು ಎಲ್ಲರೂ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಬರಹಗಾರ, ಚಿಂತಕ ಬೆಂಗಳೂರಿನ ಹೆಚ್. ಕೆ. ವಿವೇಕಾನಂದ ಹೇಳಿದರು.
ಅವರು ನಗರದ ಸರಕಾರಿ ಬಾಲಕರ ಪದವಿಪೂರ್ವ ಕಾಲೇಜಿನಲ್ಲಿ ನಡೆಸಿದ ಪ್ರಬುದ್ಧ ಸಮಾಜ ನಿರ್ಮಾಣದ ಜ್ಞಾನ ಭಿಕ್ಞಾ ಪಾದಯಾತ್ರೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು. ಭಾರತ ರತ್ನ ತೆಗೆದುಕೊಂಡು ಸಚಿನ್ ತೆಂಡುಲ್ಕರ್ ಹಣಕ್ಕಾಗಿ ಜನರ ಜೀವನ ಹಾಳು ಮಾಡುವ ಜಾಹೀರಾತಿನಲ್ಲಿ ಕಾನಿಸಿಕೊಳ್ಳುವದು ಅತ್ಯಂತ ಕೆಟ್ಟ ಕೆಲಸ, ಸಿನೆಮಾ ನಟ ನಟಿಯರು ನಮ್ಮ ಆದರ್ಶವಾಗಬಾರದು, ನಮ್ಮ ಪೋಷಕರು ನಮ್ಮ ಸುತ್ತಲಿನ ಸಮಾಜ ಸುಧಾರಕರು ನಮ್ಮ ಆದರ್ಶವಾಗಬೇಕು ಎಂದರು.
ಮುಂದಿನ ೧೫ ವರ್ಷಗಳಲ್ಲಿ ಈಗಿನ ವಿದ್ಯಾರ್ಥಿಗಳೇ ಮುಖ್ಯವಾಹಿನಿಯಲ್ಲಿ ಇರುತ್ತಾರೆ, ಆದ್ದರಿಂದ ಮಕ್ಕಳು ಪ್ಲಾಸ್ಟಿಕ್ ಬಳಕೆಯ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡಬೇಕು, ವಿಷ ಇರುವ ತಂಪು ಪಾನೀಯ ಬದಲಿಗೆ ರೈತನ ಎಳನೀರು ಕುಡಿಯಬೇಕು ಅದರಿಂದ ಇಲ್ಲಿನ ರೈತ ಉತ್ತಮ ಬದುಕು ಕಟ್ಟಿಕೊಳ್ಳುತ್ತಾನೆ. ಜೊತೆಗೆ ಜನರ ಆರೋಗ್ಯ ಸುಧಾರಿಸುತ್ತದೆ. ನಮ್ಮ ಮ,ನೆಯನ್ನು ಮೊದಲು ದೇವಸ್ಥಾನ, ಬಸ್ ನಿಲ್ದಾಣ ಇತ್ಯಾದಿಗಳಿಂದ ಗುರುತಿಸುತ್ತಿದ್ದೆವು ಈಗ ಬಾರ್ ಡಾಬಾಗಳಿಂದ ಗುರುತಿಸುವಷ್ಟು ಕೆಳಹಂತಕ್ಕೆ ಹೋಗುತ್ತಿದ್ದೇವೆ. ಹೀಗೆ ಪ್ರತಿ ಕ್ಷೇತ್ರದ ಯಂತ್ರ ಮತ್ತು ತಂತ್ರಜ್ಞಾನ ಸುಧಾರಣೆ ಆಗುತ್ತಿದೆ ಆದರೆ ನಮ್ಮ ಮಾನವೀಯ ಗುಣ ಹಾಗೂ ನಮ್ಮ ಕರ್ತವ್ಯ ಹಗೂ ವ್ಯಕ್ತಿತ್ವ ಕೆಳಗೆ ಬರುತ್ತಿದೆ ಅದು ದೊಡ್ಡ ಆತಂಕಕಾರಿ ಎಂದರು.
ಈ ವೇಳೆ ಮಾತನಾಡಿದ ಕಾಲೇಜಿನ ಉಪಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಅವರು, ನಮ್ಮ ಈಗಿನ ಮೆಕಾಲೆ ಶಿಕ್ಷಣ ಪದ್ಧತಿ ಮನುಷ್ಯತ್ವದಿಂದ ನಮ್ಮನ್ನು ದೂರ ಸರಿಸುತ್ತಿದೆ, ಗುರುಕುಲ ಮಾದರಿಯಲ್ಲಿ ಇದ್ದ ಯಾವ ಗುಣವೂ ಇಲ್ಲ. ಶಿಕ್ಷಣದಲ್ಲಿ ಬದಲಾವಣೆ ಅಗತ್ಯವಿದೆ. ನಮ್ಮ ಮಕ್ಕಳು ವಿದ್ಯಾರ್ಥಿ ಜೀವನದಲ್ಲಿ ಕೇವಲ ಅಧ್ಯಯನದ ಕಡೆಗೆ ಜೊತೆಗೆ ಕ್ರೀಡಾ ಮನೋಭಾವ ಜೊತೆಗೆ ಪಠ್ಯೇತರ ಉತ್ತಮ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು. ಈ ವೇಳೆ ಕಾಲೇಜಿನ ಪ್ರಾಂಶುಪಾಲರಾದ ರಮಾ ಕರ್ಣಂ, ಉಪನ್ಯಾಸಕ ಬಸವರಾಜ ಸವಡಿ, ಪ್ರೌಢ ಶಾಲೆ ಉಪ ಪ್ರಾಂಶುಪಾಲ ಅಬ್ದುಲ್ ಖಯೀಂ ಇತರರು ಇದ್ದರು. ಕಜಾಪ ಜಿಲ್ಲಾ ಕಾರ್ಯದರ್ಶಿ ಉಮೇಶ್‌ಬಾಬು ಸುರ್ವೆ ವಂದಿಸಿದರು.
ಜ್ಞಾನ ಭಿಕ್ಷಾ ಪಾದ ಯಾತ್ರೆ ವಿವರ : ಹೆಚ್. ಕೆ. ವಿವೇಕಾನಂದ ಅವರು ರಾಜ್ಯ ಕಂಡ ವಿಶಿಷ್ಟ ಶೈಲಿಯ ಬರಹಗಾರ, ಚಿಂತಕ. ಬೀದರ್ ಜಿಲ್ಲೆಯಿಂದ ಆರಂಭಿಸಿ ಕಳೆದ ೧೩೪ ದಿನಗಳಿಂದ ನಿರಂತರವಾಗಿ ಕಾಲ್ನಡಿಗೆಯಲ್ಲಿ ಸುತ್ತುತ್ತಿದ್ದಾರೆ. ಹತ್ತನೆಯ ಜಿಲ್ಲೆ ಕೊಪ್ಪಳವನ್ನು ಅವರ ಮುಂಡರಗಿಯಿಂದ ಅಳವಂಡಿ ಪ್ರವೇಶ ಮಾಡುವ ಮೂಲಕ ಆರಂಭಿಸಿದರು. ಅಳವಂಡಿಯ ದೇವರಾಜ ಅರಸು ವಸತಿ ನಿಲಯದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಅಲ್ಲಿಯೇ ಮಕ್ಕಳೊಂದಿಗೆ ಊಟ ಮಾಡಿ ಕೊಪ್ಪಳ ಕಡೆಗೆ ಹೊರಟರು. ಉತ್ತಮ ಪ್ರಬುದ್ಧ ಸಮಾಜ ನಿರ್ಮಾಣ ಕಾರ್ಯಕ್ಕೆ ಜ್ಞಾನ ಭಿಕ್ಷಾ ಪಾದಯಾತ್ರೆ ಮಾಡುತ್ತಿದ್ದಾರೆ. ಅವರು ಕೊಪ್ಪಳ ತಾಲೂಕಿನ ಅಳವಂಡಿಯ ದೇವರಾಜ ಅರಸು ಹಿಂದುಳಿದ ವರ್ಗಗಳ ವಸತಿ ನಿಲಯದಲ್ಲಿ ಕನ್ನಡ ಜಾನಪದ ಪರಿಷತ್, ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಸ್ವಾಭಿಮಾನಿ ಮಹಿಳಾ ಸಂಚಲನ ಸಮಿತಿ ಆಶ್ರಯದಲ್ಲಿ ಹಮ್ಮಿಕೊಂಡ ಜ್ಞಾನ ಭಿಕ್ಷಾ ಪಾದಯಾತ್ರೆ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ವೇಳೆ ಸಂಘಟಕ ಮಂಜುನಾಥ ಜಿ. ಗೊಂಡಬಾಳ, ಗದುಗಿನ ವೀರಣ್ಣ, ವಸತಿ ನಿಲಯದ ರವಿಕುಮಾರ ಮತ್ತು ಸುರೇಶ ಇದ್ದರು.

Please follow and like us:
error