ಕೆರೆ ಅಭಿವೃದ್ಧಿಗೆ ಅಭೂತಪೂರ್ವ ಸಹಕಾರ

ಕೊಪ್ಪಳ: ಗವಿಮಠದ ಶ್ರೀಗಳ ಆಶಯದಂತೆ ಗಿಣಿಗೇರಿ ಕೆರೆ ಪುನಶ್ಚೇತನ ಕಾರ್ಯ ದಾನಿಗಳ ಹಾಗೂ ಸಾರ್ವಜನಿಕರ ಸಹಕಾರಿದಿಂದ ಅಭೂತಪೂರ್ವವಾಗಿ ಸಾಗಿದೆ ಎಂದು ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸುಬ್ಬಣ್ಣಾಚಾರ್ ವಿದ್ಯಾನಗರ ತಿಳಿಸಿದ್ದಾರೆ.

ಕೆರೆ ಅಭಿವೃದ್ಧಿ ಕಾರ್ಯ 18ನೇ ದಿನಕ್ಕೆ ಕಾಲಿಟ್ಟಿದ್ದು ಯಶಸ್ವಿಯಾಗಿ ಸಾಗಿದೆ. ಕೆರೆಯ ಹೂಳನ್ನು ಸಂಪೂರ್ಣ ತೆಗೆಯುವುದು, ಕೆರೆಯ ಸುತ್ತಲೂ ಬಂಡ್ ನಿರ್ಮಿಸಿ ಸಮತಟ್ಟು ಮಾಡುವುದು, ಸಾರ್ವಜನಿಕರ ವಾಯು ವಿಹಾರಕ್ಕೆ ಅನುಕೂಲ ಕಲ್ಪಿಸುವುಸದು, ಕೆರೆಯಲ್ಲಿ ಸಾಕಷ್ಟು ನೀರು ನಿಲ್ಲಿಸಿ ರೈತರ ಕೃಷಿ ಭೂಮಿಯ ಅಂತರ್ಜಲ ಹೆಚ್ಚಿಸುವ ಮೂಲಕ ರೈತರ ಬದುಕನ್ನು ಹಸನಾಗಿಸುವುದು ಶ್ರೀಗಳ ಕನಸಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಸಾಮಾಜಿಕ ಕಾರ್ಯಕ್ಕೆ ಸ್ಥಳೀಯರು, ಸುತ್ತಮುತ್ತಲಿನ ಗ್ರಾಮಸ್ಥರು, ಸ್ಥಳೀಯ ಕಾರ್ಖಾನೆಗಳು, ಕೋಳಿ ಫಾರಂಗಳು, ಇಟ್ಟಂಗಿ ಬಟ್ಟಿಗಳ ಮಾಲೀಕರು ಸೇರಿದಂತೆ ಇತರೆ ಉದ್ದಿಮೆದಾರರು, ಜನಪ್ರತಿನಿಧಿಗಳು, ನೌಕರರು ದೇಣಿಗೆ ನಡುವ ಮೂಲಕ ಈ ಮಹಾತ್ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ಕೆಲವು ಸರಕಾರಿ ನೌಕರರು ತಮ್ಮ ಒಂದು ತಿಂಗಳು ವೇತನ ನೀಡಿದ್ದಾರೆ. ಈ ಎಲ್ಲಾ ಬೆಳವಣಿಗೆಗಳು ಮತ್ತಷ್ಟು ಉತ್ಸಾಹ ಹಾಗೂ ಆಸಕ್ತಿಯನ್ನು ಹೆಚ್ಚಿಸಿವೆ ಎಂದು ಅವರು ತಿಳಿಸಿದ್ದಾರೆ.

ಈ ಒಂದು ಸಾಮಾಜಿಕ ಕಾರ್ಯಕ್ಕೆ ಇನ್ನೂ ಹೆಚ್ಚಿನ ಸಹಾಯ, ಸಹಕಾರದ ಅಗತ್ಯವಿದ್ದು ದಾನಿಗಳು ಮುಂದೆ ಬಂದು ದೇಣಿಗೆ ನೀಡಿದಲ್ಲಿ ರಾಜ್ಯದಲ್ಲಿಯೇ ಇದೊಂದು ಮಾದರಿ ಕೆರೆಯನ್ನಾಗಿ ನಿರ್ಮಾಣ ಮಾಡಲಾಗುವುದು. ದಾನಿಗಳು ನೇರವಾಗಿ ಕೆರೆ ಅಭಿವೃದ್ಧಿ ಸಮಿತಿ ಸದಸ್ಯರನ್ನು ಭೇಟಿಯಾಗಿ ದೇಣಿಗೆ ನೀಡಬಹುದು ಅಥವಾ ಈ ಕೆಳಗಿನ ಬ್ಯಾಂಕ್ ಖಾತೆಗೆ ಹಣ ಸಂದಾಯ ಮಾಡಬಹುದು.

GINIGERA KERE ABHIRUDDHI SEVA SAMITI TRUST
A/C : 10608101073146
IFSC: PKGB0010608
BANK: KARNATAKA GRAMINA BANK
BRANCH: GINIGERA
————–

Please follow and like us:
error