ಕೃತಿಗಳ ರಚನೆಗಿಂತ ಮುದ್ರಣ ಕಷ್ಟದ ಕೆಲಸ-ಡಾ.ಬಸವರಾಜ್ ಪೂಜಾರ್

 

ಕೊಪ್ಪಳ : ಕೃತಿಗಳನ್ನು ರಚನೆ ಮಾಡುವುದು ಬಹಳ ಸುಲಭದ ಕೆಲಸ. ಆದ

 

ರೆ ಅದನ್ನು ಮುದ್ರಣ ಮಾಡುವುದು ಬಹಳ ಕಷ್ಟದ ಕೆಲಸವಾಗಿದೆ. ಆರ್ಥಿ

ಕವಾಗಿ ಹೆಚ್ಚು ಹೊರೆಯಾಗುತ್ತದೆ. ಪುಸ್ತಕಗಳು ಪ್ರಕಟವಾದ ನಂತರ ಅದು ಜನರಿಗೆ ತಲುಪಿದಾಗ ಲೇಖಕರಿಗೆ ಖುಷಿಯಾಗುತ್ತದೆ. ಕವಿಗೆ ಓದುಗರು ಇರಬೇಕು. ಕವಿ ಎಷ್ಟು ಕಷ್ಟ ಪಡುತ್ತಾನೋ ಓದುಗರು ಕೂಡ ಅಷ್ಟೇ ಇಷ್ಟ ಪಡೆಯಬೇಕು. ಸಾಹಿತಿಗಳನ್ನು ಅತ್ಮೀಯವಾಗಿಕಾಣಬೇಕು ಎಂದು ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾದ ಡಾ. ಬಸವರಾಜ ಪೂಜಾರ್ ಅವರು ಹೇಳಿದರು.

ನಗರದ ಸರಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನಲ್ಲಿ ಬುಧುವಾರದಂದು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ಹಮ್ಮಿಕೊಂಡ ಕನ್ನಡ ವಿಭಾಗದ ಉಪನ್ಯಾಸಕ ಶಿವಪ್ರಸಾದ್ ಹಾದಿಮನಿಯವರು ಬರೆದಿರುವ ಮಾತು ಹೂವಾದ ಹೊತ್ತು ಪುಸ್ತಕ ಬಿಡುಗಡೆ ಮಾಡಿಅವರು ಮಾತನಾಡಿದರು.

ವಿದ್ಯಾರ್ಥಿಗಳು ಬಹಳ ಚಟುವಟಿಕೆಯಿಂದರಬೇಕು. ನಾವು ಜೀವನದಲ್ಲಿ ಬಹಳ ಸರಳವಾಗಿರಬೇಕು. ನಾವು ವ್ಯಕ್ತಿತ್ವದಲ್ಲಿ ಬಹಳ ಉನ್ನತ ಸ್ಥಾನವನ್ನು ಹೊಂದಿರಬೇಕು. ನಾವು ಯಾರನ್ನು ನಿರ್ಲಕ್ಷ ಮಾಡಬಾರದು. ನಾವು ನಮ್ಮ ಬರಹಗಳನ್ನು ಸಾಮಜಿಕ ಜಾಲತಾಣಗಳಲ್ಲಿ ಪ್ರಕಟಿಸಬೇಕು. ಕೃತಿಗಳು ಜನರ ಮಧ್ಯಚರ್ಚೆಯಾಗಬೇಕುಎಂದುಅವರು ಹೇಳಿದರು.

ಕೃತಿಯಕುರಿತು ನಿವೃತ್ತಉಪನ್ಯಾಸಕರಾದ ಡಿ.ಎಂ. ಬಡಿಗೇರಿಯವರು ಶಿವಪ್ರಸಾದ್ ಹಾದಿಮನಿಯವರು ಬರೆದಿರುವಮಾತು ಹೂವಾದ ಹೊತ್ತು  ಪುಸ್ತಕದಲ್ಲಿ ಹಾಯ್ಕ್, ಹನಿಗವನ, ಕವನಗಳ ಸಂಕಲವನ್ನು ಒಳಗೊಂಡಿದೆ. ಲೇಖಕಕರುತಮ್ಮ ಪುಸ್ತಕವು ಭ್ರಷ್ಟಚಾರ, ರೈತರ ಆತ್ಮ ಹತ್ಯೆ, ಕೃಷಿ ಬಿಕ್ಕಟ್ಟುಗಳು, ಪ್ರೀತಿ ಪ್ರೇಮ, ಮಿಸಲಾತಿ, ಆರೋಗ್ಯ, ಮಹಿಳೆಯರ ಸಮಸ್ಯೆಗಳು, ಮೂಡನಂಬಿಕೆಗಳು, ಪ್ರಸ್ತುತ ಸಮಾಜದ ತಲ್ಲಣಗಳು, ವಿಡಂಬನೆ,ತಮಾಸೆ, ವೀಚಾರಿಕತೆ, ರಾಜಕೀಯ, ಪರಿಸರ,ಮ ನಿರುದ್ಯೋಗ, ವ್ಯಾಮೋಹ, ಬದುಕಿನ ಹೊರಾಟಇತ್ಯಾದಿ ವಿಷಯಗಳನ್ನು ಒಳಗೊಂಡಿದೆ ಎಂದುಅಭಿಪ್ರಾಯ

ವ್ಯಕ್ತಪಡಿಸಿದರು.

ಕವಿಗಳು ಭಾವನ ಜೀವಿಗಳಾಗಿರಬೇಕು. ಕಾವ್ಯಆಕಾಶದಷ್ಟು ವಿಸ್ತರವಾದದ್ದು. ಸಾಗರದಷ್ಟು ಆಳವಾದದ್ದು. ಕಾವ್ಯವು ಕೇವಲ ಕವಿಗಳಲ್ಲಿ ಮಾತ್ರಇರುವುದಿಲ್ಲ. ಪ್ರತಿಯೊಬ್ಬರಲ್ಲಿಕಾವ್ಯವುಇರುತ್ತದೆ

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಗಣಪತಿ ಕೆ. ಲಮಾಣಿಯವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ  ಪತ್ರಕರ್ತ ಜಿ.ಎಸ್. ಗೋನಾಳ, ಸಹಾಯಕ ಪ್ರಾಧ್ಯಾಪಕಿ ಡಾ. ಭಾಗ್ಯಜ್ಯೊತಿ, ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಹುಲಿಗೆಮ್ಮ ವೇದಿಕೆಯಲ್ಲಿ ಸಹಾಯಕ ಪ್ರಾಧ್ಯಾಪಕ ಡಾ.ನರಸಿಂಹ ಗುಂಜಹಳ್ಳಿ, ಉಪನ್ಯಾಸಕ ಶಿ.ಕಾ. ಬಡಿಗೇರ, ಉಮೇಶ ಕಾತರಿಕೆ, ಬಸವರಾಜ ಹುಳಕಣ್ಣವರು, ಮುಂತಾದವರು ಇದ್ದರು. ಲೇಖಕ ಶಿವಪ್ರಸಾದ್ ಹಾದಿಮನಿಯರಿಗೆ ಕಾಲೇಜಿನವತಿಯಿಂದ ಸನ್ಮಾನ ಮಾಡಲಾಯಿತು.  ನಿಂಗಜ್ಜ ಸೋಂಪುರಅವರು ನಿರೂಪಣೆ ಮಾಡಿದರು. ಪ್ರಸ್ತವಿಕವಾಗಿ ಲೇಖಕ ಶಿವಪ್ರಸಾದ್ ಹಾದಿಮನಿಯವರು ಮಾತನಾಡಿದರು. ವಂದನಾರ್ಪಣೆಯನ್ನುದ್ಯಾಮಣ್ಣವರು ಮಾಡಿದರು.

Please follow and like us:
error