ಕುಷ್ಟಗಿ ಫ್ಲೈ ಓವರ್ ಕಾಮಗಾರಿ ನವೆಂಬರ್. ೦೧ ರೊಳಗಾಗಿ ಪೂರ್ಣಗೊಳಿಸಿ : ಕರಡಿ ಸಂಗಣ್ಣ


ಕೊಪ್ಪಳ ಆ. ೩೦  ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ-೫೦ ರಲ್ಲಿ ನಿರ್ಮಾಣವಾಗುತ್ತಿರುವ “ಕುಷ್ಟಗಿ ಫ್ಲೈ ಓವರ್” ಕಾಮಗಾರಿಯನ್ನು ನವೆಂಬರ್. ೦೧ ರೊಳಗಾಗಿ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಿ ಎಂದು ಸಂಸದ ಕರಡಿ ಸಂಗಣ್ಣ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಷ್ಟ್ರೀಯ ಹೆದ್ದಾರಿ, ಮೇಲ್ಸೆತುವ ಕಾಮಗಾರಿಗಳ ಹಾಗೂ ರೈಲ್ವೆ ಎ.ಆರ್.ಡಿ.ಬಿ ಪ್ರಗತಿ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರದಂದು ಹಮ್ಮಿಕೊಳ್ಳಲಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹುನಗುಂದ-ಹೊಸಪೇಟೆ ರಸ್ತೆಯ ಎನ್‌ಎಚ್-೫೦ (ಹಳೆಯ ಎನ್‌ಎಚ್-೧೩) ರಲ್ಲಿ ಡಿ.ಬಿ.ಎಫ್.ಒ.ಟಿ ಟೋಲ್ ಆಧಾರದ ಮೇಲೆ ಎಂ/ಎಸ್ ಜಿ.ಎಂ.ಆರ್ ಒ.ಎಸ್.ಇ ಎಚ್.ಎಚ್.ಎಚ್ ಪ್ರೈ.ಲಿ. ಗೆ ನೀಡಲಾಗಿರುವ ಕುಷ್ಟಗಿ ಪಟ್ಟಣದಲ್ಲಿ ಫ್ಲೈ ಓವರ್ ನಿರ್ಮಾಣ ಕಾಮಗಾರಿಯ ಕಾರ್ಯಾಚರಣೆ ಪೂರ್ಣಗೊಂಡಲ್ಲಿ ಹುನಗುಂದ, ಇಳಕಲ್, ಕುಷ್ಟಗಿ, ಹೊಸಪೇಟೆ, ಸೇರಿದಂತೆ ಪ್ರಮುಖ ಪಟ್ಟಣಗಳ ಸಂಚಾರಕ್ಕೆ ಅನುಕೂಲವಾಗಲಿದೆ. ಸಿಒಎಸ್ ಅಡಿಯಲ್ಲಿ ೬೬.೫೮ ಕೋಟಿ ವೆಚ್ಚದಲ್ಲಿ ಫ್ಲೈ ಓವರ್ ಮತ್ತು ವಿಯುಪಿ ನಿರ್ಮಾಣ ಹಂತದಲ್ಲಿರುವ ಈ ಪ್ರಗತಿಯುವ ತ್ವರಿತಗೊಂಡು ೨೦೧೯ರ ನವೆಂಬರ್. ೧ ರಂದು ಲೋಕಾರ್ಪರ್ಣೆಗೊಳ್ಳಬೇಕು. ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಸೂಕ್ತ ಕ್ರಮ ಕೈಗೊಳ್ಳಬೇಕು. ಅಲ್ಲದೇ ರಸ್ತೆಯಲ್ಲಿ ಇರುವ ಪ್ಯಾಚ್ ವರ್ಕ್‌ಗಳನ್ನು ಸರಿಪಡಿಸಬೇಕು. ಯಾವುದೇ ಅಡೆತಡೆಯಿಲ್ಲದೆ ಸಂಚಾರ ಸುಗಮವಾಗಿ ಸಾಗಲು ಅನುವು ಮಾಡಿಕೊಡಬೇಕು. ಅಪಘಾತ ಸ್ಥಳಗಳಲ್ಲಿ ಅಥವಾ ಸಾರ್ವಜನಿಕರ ಓಡಾಟದ ಸ್ಥಳಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸಿ. ಕೊಪ್ಪಳದ ಹೊರ ವಲೆಯದಲ್ಲಿ ಹಾದು ಹೋಗಿರುವ ಹೊಸಪೇಟೆ-ಹುಬ್ಬಳ್ಳಿ ಬೈಪಾಸ್ ಕಾಮಗಾರಿಯನ್ನು ತ್ವರಿತಾವಾಗಿ ಪೂರ್ಣಗೊಳಿಸಿ. ಈ ಬೈಪಾಸ್ ನಡುವೆ ಬರುವ ಮೇಲ್ಸೆತುವೆ ಕಾಮಗಾರಿಗಳನ್ನು ಸಹ ವೇಗವಾಗಿ ಪೂರ್ಣಗೊಳಿಸಿ. ಕೊಪ್ಪಳದಲ್ಲಿ ನಗರದಲ್ಲಿ ಹಾದು ಹೋಗಿರುವ ಎನ್.ಎಚ್-೬೩ ರಲ್ಲಿ ಹಾಗೂ ಜಿಲ್ಲೆಯ ಪ್ರಮುಖ ರಸ್ತೆಗಳಲ್ಲಿ ಬ್ಲಾಕ್ ಸ್ಪಾಟ್‌ಗಳನ್ನು ಗುರಿತಿಸಿ ಗುತ್ತಿಗೆದಾರರಿಗೆ ಸಲ್ಲಿಸುವಂತೆ ಜಿಲ್ಲಾ ಪೊಲೀಸ್ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು.
ಮುನಿರಾಬಾದ್-ಹೊಸಪೇಟೆ ಎಲ್.ಸಿ. ಸಂಖ್ಯೆ ೭೯ ರಲ್ಲಿ ರಸ್ತೆ ಮೇಲ್ಸೆತುವೆ ನಿರ್ಮಾಣ ಮಾಡುವ ಕುರಿತಂತೆ ಅಗತ್ಯವಿರುವ ಒಟ್ಟು ೩೦೦೦ ಚ.ಮೀ ಜಮೀನನ್ನು ಭೂಸ್ವಾಧೀನಪಡಿಸಿಕೊಳ್ಳಲು ಉಪ ಮುಖ್ಯ ಇಂಜೀನಿಯರ್, ಕನ್ಸ್‌ಟ್ರಕ್ಷನ್/ ಪಿಪಿ, ಹುಬ್ಬಳ್ಳಿ ರವರು ಕೋರಿದ್ದು, ಜಂಟಿ ಸ್ಥಳ ತನಿಖೆ ಕೈಗೊಂಡು ಅಳತೆ ಕಾರ್ಯ ನಿರ್ವಹಿಸಿ ನಿಖರವಾದ ವಿವರಗಳನ್ನು ಸಲ್ಲಿಸುವಂತೆ ತಹಶೀಲ್ದಾರ, ರೈಲ್ವೆ ಇಲಾಖೆ ಅಧಿಕಾರಿಗಳು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಗಿಣಗೇರಾ ಗ್ರಾಮ-ಕೊಪ್ಪಳ ತಾಲ್ಲೂಕು ರಸ್ತೆ ಮೇಲ್ಸೆತುವೆ ಎಲ್.ಸಿ ಸಖ್ಯೆ ೭೨ ರಲ್ಲಿ ರಸ್ತೆ ಮೇಲಸೆತುವೆ ನಿರ್ಮಾಣ ಯೋಜನೆಗೆ ಹಾಗೂ ಕೊಪ್ಪಳ ನಗರ – ಕುಷ್ಟಗಿ ರಸ್ತೆಯ ಎಲ್.ಸಿ. ಸಂಖ್ಯೆ ೬೬ ರಲ್ಲಿ ರಸ್ತೆ ಮೇಲ್ಸೆತುವೆ ನಿರ್ಮಾಣ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರದಿಂದ ಪ್ರಾಥಮಿಕವಾಗಿ ಅನುಮೋದನೆಯಾಗಿದೆ. ಈ ಹಿಂದೆ ಸಂಬಂಧಿಸಿದ ಅಧಿಕಾರಿಗಳ ಸಭೆಯನ್ನು ಜರುಗಿಸಿದಾಗ ರೈಲ್ವೆ ಇಲಾಖೆ ಅಧಿಕಾರಿಗಳು ಹಾಗೂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಲೋಕೋಪಯೋಗಿ ಇಲಾಖೆ ಇವರು ಈ ಯೋಜನೆಗಾಗಿ ಜಮೀನುಗಳ ಅವಶ್ಯಕತೆ ಇರುವುದಿಲ್ಲ ಎಂದು ತಿಳಿಸಿದ್ದಾರೆ. ರಸ್ತೆ ಕೆಳ ಸೇತುವೆ ನಿರ್ಮಾಣ ಯೋಜನೆಗೆ ಸಂಬಂಧಿಸಿದಂತೆ ರೈಲ್ವೆ ಇಲಾಖೆಯಿಂದ ನಕ್ಷೆಯೊಂದಿಗೆ ವರದಿ ಸಲ್ಲಿಸಬೇಕು. ಈ ಕುರಿತು ಸ್ವಾಧೀನಕ್ಕೆ ಒಳಪಡುವ ಖಾಸಗಿ ಜಮೀನಿನ ಸ್ಥಳ ತನಿಖೆ ಮಾಡಬೇಕು ಎಂದು ಎಂದು ಸಂಸದ ಕರಡಿ ಸಂಗಣ್ಣ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೇಣುಕಾ ಸುಕುಮಾರ್, ಉಪವಿಭಾಧಿಕಾರಿ ಸಿ.ಡಿ. ಗೀತಾ ಸೇರಿದಂತೆ ರೈಲ್ವೆ ಇಲಾಖೆಯ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ತಹಶೀಲ್ದಾರರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Please follow and like us:
error