ಕುಡಿ ಯುವ ನೀರಿಗಾಗಿ ಯುದ್ದ ನಡೆ ದರು ಆಶ್ಚರ್ಯ ಪಡದಂತಹ ಪರಿಸ್ಥಿತಿ ನಿರ್ಮಾಣ-ಪ್ರಾಣೇಶ ಪೂಜಾರ

ಕೊಪ್ಪಳ, ೧೫- ಮುಂದಿನ ಪಿಳಿಗೆಗಾಗಿ ನಾವೇಲ್ಲರೂ ಪರಿ ಸರ ಹಾಗೂ ನೀರಿನ ಬಗ್ಗೆ ಗಂ ಭಿರ ಚಿಂತನೆಯ ಅಗತ್ಯವಿದೆ ಎಂದು ಶಿಕ್ಷಕ ಹಾಗೂ ರಂಗ ಕಲಾವಿದ ಪ್ರಾಣೇಶ ಪೂಜಾರ ಹೇಳಿದರು.
ಅವರು ಇಂದ್ರಕೀಲ ನಗರ ದಲ್ಲಿ ರವಿವಾರ ಸಂಜೆ ಅನು ರಾಮ ಸಾಮಾಜಿಕ ಮತ್ತು ಶೈಕ್ಷ ಣಿಕ ಟ್ರಸ್ಟ್ ನಿಂದ ಆಯೋಜಿ ಸಲಾಗಿದ್ದ ಏಪ್ರಿಲ್ ಫೂಲ್ ಅಲ್ಲಿ ಏಪ್ರಿಲ್ ಕೂಲ್ ಎಂಬ ಕಾ ರ್ಯಕ್ರಮದಲ್ಲಿ ಪಕ್ಷಿಗಳಗೆ ನೀರು ಒದಗಿಸುವ ಕಿಟ್ ನೀಡುವ ಮೂಲಕ ಕಾರ್ಯಕ್ರಮ ಉ ದ್ಘಾಟಿಸಿ ಮಾತನಾಡುತ್ತಿದ್ದರು.
ವಿಶ್ವ ಅದರಲ್ಲಿ ಭಾರತ ಪ ರಿಸರ ಸಂರಕ್ಷಣೆಯಲ್ಲಿ ವಿಶೇಷ ಕಾಳಜಿವಹಿಸ ಬೇಕಿದೆ. ಕನಿಷ್ಟ ಶೇ.೩೩ರಷ್ಟು ಅರಣ್ಯ ಪ್ರದೇಶ ವಿರಬೇಕು ಕೊಪ್ಪಳ ಜಿಲ್ಲೆಯಲ್ಲಿ ಶೇ.೩ರಷ್ಟು ಅರಣ್ಯವಿದ್ದು ಉಳಿ ದೆಲ್ಲ ಅರಣ್ಯ ಪ್ರದೇಶವನ್ನು ನೂ ತನ ನಾಗರಿಕತೆ ಹಾಳು ಮಾಡಿ ದೆ ಎಂದರು.
ಅರಣ್ಯ ಸಂರಕ್ಷಣೆ ಮತ್ತು ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದ್ದು ಪ್ರತಿಯೊಬ್ಬರು ಪರಿ ಸರ ಜಾಗೃತಿ ಅಗತ್ಯ. ಪರಿಸರ ಹಾನಿಯಿಂದಾಗಿ ಮಳೆ-ಬೆಳೆ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿ ದರು.
ಬರುವ ದಿನಗಳಲ್ಲಿ ಕುಡಿ ಯುವ ನೀರಿಗಾಗಿ ಯುದ್ದ ನಡೆ ದರು ಆಶ್ಚರ್ಯ ಪಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಾವಿರ ಫೀಟ್ ಕೊರೆದರು ಭೂ ಮಿಯಲ್ಲಿ ಹನಿ ನೀರು ಸಿಗ ದಂತಹ ಸ್ಥಿತಿ ಒದಗಿದೆ ಎಂ ದರು.
ಪ್ರಾಣಿ-ಪಕ್ಷಿ ಸಂಕುಲನ ಕಾಪಾಡಲು ಪ್ರತಿಯೊಬ್ಬರು ತಮ್ಮ ಮನೆ ಮುಂದೇ ಪಕ್ಷಿ ಮತ್ತು ಪ್ರಾಣಿಗಳಿಗೆ ನೀರನ್ನು ಮಿಸಲಿರಿಸಿ ಅಲ್ಪ ಕೊಡುಗೆ ನೀಡಿ. ಕಡು ಬೇಸಿಗೆಯಲ್ಲಿ ನೀರಿ ಲ್ಲದೇ ಯಾವ ಪ್ರಾಣ ಸಾಯ ದಿರಲಿ ಎಂದು ಮನವಿ ಮಾಡಿ ದರು.ಈ ಸಂದರ್ಭದಲ್ಲಿ ಅನು ರಾಮ ಸಾಮಾಜಿಕ ಮತ್ತು ಶೈಕ್ಷ ಣಿಕ ಟ್ರಸ್ಟನ ಅಧ್ಯಕ್ಷ ಗುರುರಾಜ, ಪತ್ರಕರ್ತ ಸಂತೋಷ ದೇಶ ಪಾಂಡೆ, ಕಸಾಪ ತಾಲೂಕಾಧ್ಯಕ್ಷ ಗಿರೀಶ ಪಾನಘಂಟಿ, ಕಾರ್ಯ ದರ್ಶಿ ನಾಗರಾಜ ಡೊಳ್ಳಿನ, ಅಪ್ಪಣ್ಣ ಬೊಂದಾಡೆ ಇದ್ದರು.

Please follow and like us:
error