ಕಿಡಿಗೇಡಿಗಳು ಹೊತ್ತಿಸಿದ ಬೆಂಕಿಗೆ ಬಣವೆಗಳು ಅಗ್ನಿಗೆ ಆಹುತಿ

ಕೊಪ್ಪಳ : ಕಿಡಿಗೇಡಿಗಳು ಹೊತ್ತಿಸಿದ ಬೆಂಕಿಗೆ ಬಡವನ ಹೊಟ್ಟೆಗೆ ಬರೆ ಎಳೆದಂತಾಗಿದೆ. ಹೌದು ಜಿಲ್ಲೆಯ ಕುಕನೂರು ತಾಲೂಕಿನ ಬನ್ನಿಕೊಪ್ಪ ಗ್ರಾಮದ ಶರಣಪ್ಪ ಹಡಪದ ಎನ್ನುವವರಿಗೆ ಸೇರಿದ ಬಣವೆಗಳು ಅಗ್ನಿಗೆ ಆಹುತಿಯಾಗಿದ್ದು, ಅಗ್ನಿ ಶಾಮಕ ದಳದವರು ಬರುವಷ್ಟರಲ್ಲಿ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಯಾರು ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ ಎನ್ನುವ ಅನುಮಾನ ಗ್ರಾಮಸ್ಥರಾಗಿದ್ದು, ಭತ್ತದ ಮೇವು, ಎತ್ತಿನ ಬಂಡಿ ಸೇರಿದಂತೆ ಟ್ರ್ಯಾಕ್ಟರನ ಒಂದಿಷ್ಟು ಭಾಗ ಸುಟ್ಟು ಭಸ್ಮವಾಗಿದೆ. ಇದ್ರಿಂದ ಲಕ್ಷಾಂತರ ರೂಪಾಯಿ ಹಾನಿಯಿಂದ ರೈತ ಶರಣಪ್ಪ ಕಂಗಲಾಗಿದ್ದಾನೆ

Please follow and like us:
error