ಕಾನೂನು ಪಾಲನೆ ಹಾಗೂ ಸಹನೆ ಯುವಜನತೆಗಳ ಆಧ್ಯತೆಗಳಾಗಲಿ – ಡಾ.ಅನುಪ್ ಎ.ಶೆಟ್ಟಿ


ಕೊಪ್ಪಳ : ನಗರದ ಶ್ರೀ ಗವಿಸಿದ್ಧೇಶ್ವರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಕೊಪ್ಪಳದಲ್ಲಿ ೨೦೧೭-೧೮ನೇ ಸಾಲಿನ ವಿದ್ಯಾರ್ಥಿ ಒಕ್ಕೂಟದ ಉದ್ಘಾಟನೆ ಇಂದು ಜರುಗಿತು. ಕೊಪ್ಪಳದ ಜಿಲ್ಲಾ ವರಿಷ್ಠ ಪೋಲಿಸ್ ಅಧಿಕಾರಿಗಳಾದ ಡಾ|| ಅನೂಪ್ .ಎ ಶೆಟ್ಟಿಯವರು ದೀಪ ಬೆಳಗಿಸುವುದರ ಮೂಲಕ ಒಕ್ಕೂಟ ಉದ್ಘಾಟಿಸಿ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಯ ಆಕರ್ಷಣೆಗೆ ಒಳಗಾಗದೇ ಉತ್ತಮ ದೇಶಿಯ ಸಂಸ್ಕೃತಿ ರೂಪಿಸಿಕೊಳ್ಳಬೇಕು. ಜೀವನದಲ್ಲಿ ಶಾಂತಿ, ಸಹನೆ, ಐಕ್ಯತೆ ಇವುಗಳನ್ನು ಬೆಳೆಸಿಕೊಂಡು ಜೀವನವನ್ನು ಸಮೃದ್ಧಿಗೊಳಿಸಕೊಳ್ಳಬೇಕು. ವಿದ್ಯಾರ್ಥಿಗಳ ಜೀವನ ವಿದ್ಯಾರ್ಥಿಗಳಿಂದಲೇ ರೂಪಿಸವಾಗುತ್ತದೆ ಹೊರತು ಬೇರೆ ಯಾರಿಂದಲೂ ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ಕಾನೂನು ಪಾಲನೆಯನ್ನು ತಮ್ಮ ಕರ್ತವ್ಯವೆಂದು ಭಾವಿಸಬೇಕು. ಕಾನೂನಿಗಿಂದ ಮಿಗಿಲಾದ ವ್ಯಕ್ತಿ ಯಾರು ಇಲ್ಲ. ಈ ಕಾರಣದಿಂದ ವಿದ್ಯಾರ್ಥಿಗಳು ಕಡ್ಡಾಯವಾಗಿ ತಮ್ಮ ಹಿತತೃಷ್ಟಿಯಿಂದ ಕಾನೂನುಗಳನ್ನು ಪಾಲಿಸಬೇಕು ಎಂದು ಹೇಳಿದರು.
ಇನ್ನೋರ್ವ ಮುಖ್ಯ ಅತಿಥಿಗಳಾಗಿ ಕೊಪ್ಪಳದ ಸ್ನಾತಕೋತ್ತರ ಕೇಂದ್ರದ ಸಂಯೋಜಕರಾದ ಡಾ.ಮನೋಜ ಡೊಳ್ಳಿಯವರು ಮಾತನಾಡುತ್ತ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಕೃತಜ್ಞತಾ ಭಾವ, ಶಿಸ್ತು, ಅಧ್ಯಯನ ಶೀಲತೆಗಳನ್ನು ಬೆಳೆಸಿಕೊಳ್ಳಬೇಕು. ವಿದ್ಯಾಭ್ಯಾಸಕ್ಕೆ ಕಾರಣೀಭೂತರಾಗಿರುವ ತಂದೆ-ತಾಯಿ, ಗುರುಗಳನ್ನು ಸದಾ ಸ್ಮರಿಸುತ್ತಾ ಅವರ ಆಸೆಗಳನ್ನು ಈಡೇರಿಸಬೇಕು. ಅಧ್ಯಾಯನಕ್ಕೆ ಸಂಬಂಧಿಸಿದಂತೆ ಆಧುನಿಕ ತಂತ್ರಜ್ಞಾನಗಳಾದ ಇಂಟರನೆಟ್, ವಾಟ್ಸಪಗಳಂತಹ ಸೌಲಭ್ಯಗಳನ್ನು ವಿದ್ಯಾರ್ಥಿಗಳು, ಸ್ನೇಹಿತರು, ಪರಸ್ಪರ ವಿನಿಮಯ ಮಾಡಿಕೊಂಡು ಜ್ಞಾನಾರ್ಜನೆಯನ್ನು ಹೆಚ್ಚಿಸಿಕೊಳ್ಳವುದರ ಕಡೆಗೆ ಗಮನ ಹರಿಸಬೇಕೆಂದು ಕರೆ ನೀಡಿದರು. ಕಲಿಕೆಯ ಮಾಧ್ಯಮಗಳು ಹೆಚ್ಚಿಸುವುದರಿಂದ ಮಾಧ್ಯಮಗಳನ್ನು ದುಪಯೋಗ ಪಡಿಸಿಕೊಳ್ಳದೇ ಜ್ಞಾನಾರ್ಜನೆಗಾಗಿ ಸದುಪಯೋಗ ಪಡಿಸಿಕೊಳ್ಳುವುದರ ಮೂಲಕ ಯಶಸ್ಸು ಹೊಂದಲು ಕರೆ ನೀಡಿದರು.
ಅಧ್ಯಕ್ಷತೆಯನ್ನು ಪ್ರೊ.ಮನೋಹರ ದಾದ್ಮಿಯವರು ವಹಿಸಿ ಮಾತನಾಡುತ್ತ ವಿದ್ಯಾರ್ಥಿ ವರ್ಗಗಳ ಪ್ರತಿನಿಧಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಆಧುನಿಕ ತಂತ್ರಜ್ಞಾನಗಳಲ್ಲಿ ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಹೆಚ್ಚು ಬಳಕೆಮಾಡಿಕೊಂಡು ಸ್ಪರ್ಧಾತ್ಮಕ ಯುಗದಲ್ಲಿ ಸಿದ್ಧರಾಗುವಂತೆ ಕರೆ ನೀಡಿದರು.
ಪ್ರಾರ್ಥನೆ ಕು. ಗೌರಮ್ಮ ಕುಂಬಾರ, ಪ್ರಸ್ತಾವಿಕ ಡಾ. ಜೆ.ಎಸ್.ಪಾಟೀಲ, ನಿರೂಪಣೆ ಶರಣಬಸಪ್ಪ ಬಿಳೆಎಲಿ ನಡೆಸಿಕೊಟ್ಟರು. ವಂದನಾರ್ಪಣೆ ಡಾ.ದಯಾನಂದ ಸಾಳುಂಕೆ ನೆರವೇರಿಸಿದರು. ಪದವಿ ವಿದ್ಯಾರ್ಥಿಗಳು ಭಾಗವಹಿಸಿದ್ದರು

Please follow and like us:
error