ಕಾನೂನು ಉಲ್ಲಂಘನೆಯ ಬಗ್ಗೆ ಪೊಲೀಸರಿಗೆ ಅಥವಾ ನ್ಯಾಯಾಲಯಕ್ಕೆ ಮಾಹಿತಿ ನೀಡಿ : ಟಿ. ಶ್ರಿನಿವಾಸ್


ಕೊಪ್ಪಳ ಆ. ): ಕೊಪ್ಪಳ : ನಮ್ಮ ಸುತ್ತಲಿನ ಪರಿಸರದಲ್ಲಿ ನಡೆಯುವ ಕಾನೂನು ಉಲ್ಲಂಘನೆಯ ಬಗ್ಗೆ ಪೊಲೀಸರಿಗೆ ಅಥವಾ ನ್ಯಾಯಾಲಯಕ್ಕೆ ಮಾಹಿತಿ ನೀಡುವ ಮೂಲಕ ಮೂಲ ಕಾನೂನುಗಳ ಉಲ್ಲಂಘನೆಯನ್ನು ತಡೆಗಟ್ಟಬಹುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಟಿ. ಶ್ರಿನಿವಾಸ್ ಅವರು ಹೇಳಿದರು.
ಅಂಗವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕೊಪ್ಪಳ ಜಿಲ್ಲಾ ವಕೀಲರ ಸಂಘ ಸಹಯೋಗದಲ್ಲಿ “ಮೂಲ ಕಾನೂನುಗಳ” ಕುರಿತ ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತಿಚೆಗೆ (ಆಗಸ್ಟ್. 07) ಆಯೋಜಿಸಲಾದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮೂಲ ಕಾನೂನುಗಳ ಕುರಿತು ದೈನಂದಿನ ಜೀವನಕ್ಕೆ ಬೇಕಾದ ಅಗತ್ಯ ಕಾನೂನು ತಿಳುವಳಿಕೆ ಪ್ರತಿಯೊಬ್ಬರಿಗೂ ಅವಶ್ಯಕವಾಗಿದೆ.  ಪೋಷಕರು ಮಕ್ಕಳ ಮೇಲಿನ ಪ್ರೀತಿಗೆ ಅಪ್ರಾಪ್ತರಿಗೆ ಬೈಕ್ ಕೊಡಿಸುವುದು, ಜವಾಬ್ದಾರಿ ನಿಭಾಯಿಸುವ ಹೆಸರಿನಲ್ಲಿ ಓದುವ ಮಕ್ಕಳಿಗೆ ವಿವಾಹ ಮಾಡುವುದು ಮಕ್ಕಳನ್ನು ಕೂಲಿಗೆ ಹಚ್ಚುವುದು ಇತ್ಯಾದಿಗಳು ಸಹ ಕಾನೂನಿಗೆ ವಿರುದ್ಧವಾಗಿವೆ.  ಆದ್ದರಿಂದ ಎಲ್ಲರೂ ಜವಾಬ್ದಾರಿ ಅರಿತು ನಿರ್ಧಾರ ಕೈಗೊಳ್ಳಬೇಕು.  ನಮ್ಮ ಸುತ್ತ ಮುತ್ತಲಿನ ಪರಿಸರದಲ್ಲಿ ಬಾಲ್ಯ ವಿವಾಹ ತಡೆ ಕಾಯ್ದೆಗಳ ಉಲ್ಲಂಘನೆ ನಡೆಯುತ್ತಿರುತ್ತದೆ.  ಕಾನೂನಿನ ಅರಿವು ಇದ್ದಾಗೂ ಸಹ ಸಮಾಜದಲ್ಲಿ ನಡೆಯುವ ಕಾಯಿದೆಗಳ ಉಲ್ಲಂಘನೆಯನ್ನು ಪೊಲೀಸರಿಗೆ ಅಥವಾ ನ್ಯಾಯಾಲಯಕ್ಕೆ ಮಾಹಿತಿ ನೀಡುವ ಮೂಲಕ ಕಾನೂನು ಅನ್ನು ಕಾಪಾಡಿಕೊಳ್ಳಬಹುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಟಿ. ಶ್ರಿÃನಿವಾಸ್ ಅವರು ಹೇಳಿದರು.
ಜಿಲ್ಲಾ ವಕೀಲರ ಸಂಘದ ಜಂಟಿ ಕಾರ್ಯದರ್ಶಿ ಎಸ್.ಬಿ. ಪಾಟೀಲರವರು ಮಾತನಾಡಿ, ದೇಶದ ಕಾನೂನುನನ್ನು ಪ್ರತಿಯೊಬ್ಬ್ಬರು ತಿಳಿದುಕೊಳ್ಳುವ ಅಗತ್ಯ ಇದೆ.  ಕಾನೂನು ಪಾಲನೆ ಮಾಡಿದರೆ ಅದು ನಮ್ಮನ್ನು ರಕ್ಷಣೆ ಮಾಡುತ್ತದೆ.  ಕಾನೂನುಗಳು ನಮ್ಮ ದೇಶದ ಸಂಸ್ಕೃತಿ, ಸಂಪ್ರದಾಯ, ರೂಢಿಗಳು ಪರಂಪರೆ ಹಾಗೂ ಧರ್ಮದ ತಳಹದಿಯ ಮೇಲೆ ನಿಂತಿವೆ ಎಂದರು.
ವಕೀಲರಾದ ಎಂ.ಎನ್. ಮಂಗಳೂರು ಅವರು ಮೂಲ ಕಾನೂನುಗಳ ಕುರಿತು ಉಪನ್ಯಾಸ ನೀಡಿ, ದೇಶದಲ್ಲಿ ಹಲವಾರು ಕಾನೂನುಗಳಿವೆ.  ಮೋಟಾರು ವಾಹನ ಕಾಯ್ದೆ ಯಡಿ ವಾಹನ ನೋಂದಣಿ, ವಿಮೆ ಹಾಗೂ ಚಾಲನಾ ಪರವಾನಗಿ ಹೊಂದಿರುವ 18 ವರ್ಷ ಮೇಲ್ಪಟ್ಟವರು ಮಾತ್ರ ವಾಹನ ಚಲಾಯಿಸಬೇಕು.  ಈ ಮೂಲಕ ಅಪಘಾತ ಸಂಭವಿಸಿದಾಗ ನ್ಯಾಯಾಲಯ ಮೂಲಕ ಸೂಕ್ತವಾದ ಪರಿಹಾರವನ್ನು ಪಡೆಯಬಹುದಾಗಿದೆ ಎಂದು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಿನ್ನಾಳ ಸರಕಾರಿ ಪದವಿ ಪೂರ್ವ ಕಾಲೇಜಿನ  ಮುಖ್ಯೊÃಪಾಧ್ಯಯರಾದ ಶರಣಪ್ಪ ಕಡಿರವರು ವಹಿಸಿದ್ದರು.  ಕಿನ್ನಾಳ ಎಸ್.ಡಿ.ಎಮ್.ಸಿ. ಅಧ್ಯಕ್ಷ ವೀರಣ್ಣ ಚಿತ್ರಗಾರ  ಸೇರಿದಂತೆ ಮತ್ತಿತರರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು

Please follow and like us:
error