ಕಾಂಗ್ರೇಸ್ ಸರ್ಕಾರದ ಯೋಜನೆಗಳೆ ಮುಂದಿನ ಚುನಾವಣೆಗೆ  ದಿಕ್ಸೂಚಿ – ಇಂಧಿರಾ ಭಾವಿಕಟ್ಟಿ

ಕಾಂಗ್ರೇಸ್ ಸರ್ಕಾರದ ಯೋಜನೆಗಳೆ ಮುಂದಿನ ಚುನಾವಣೆಗೆ  ದಿಕ್ಸೂಚಿ –  ಕೊಪ್ಪಳ : ಇತ್ತೀಚಿಗೆ ನಗರದ ಜಿಲ್ಲಾ ಕಾಂಗ್ರೇಸ್ ಕಾರ್ಯಾಲಯದಲ್ಲಿ ಕಾರ್ಯಕಾರಣಿ ಸಭೆಯು ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಜಿಲ್ಲಾ ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಶ್ರೀಮತಿ ಇಂದಿರಾ ಬಾವಿಕಟ್ಟಿಯವರು ಮಾತನಾಡುತ್ತಾ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಸರ್ಕಾರ ರಚನೆಯಾದ ೫ ವರ್ಷದೊಳಗೆ ತಂದ ಯೋಜನೆಗಳೇ ಮುಂದಿನ ಚುನಾವಣೆಗೆ ದಿಕ್ಸೂಚಿಯಾಗಲಿವೆ ಎಂದರು. ದಿ|| ಇಂದಿರಾ ಗಾಂದಿಯವರು ರೂಪಿಸಿದ ವಿಧವಾ ವೇತನ, ವೃದ್ಧಾಪ್ಯವೇತನಗಳು ಮಹಿಳೆಯರ ಪರವಾಗಿದ್ದು ಸರ್ಕಾರದಲ್ಲಿ ಈಗ ಜಾರಿಗೊಂಡಿರುವ ಮನಸ್ವಿನಿ ಯೋಜನೆ, ಮೈತ್ರಿ ಯೋಜನೆ, ಶಾದಿ ಭಾಗ್ಯ ಯೋಜನೆ ರಾಜ್ಯದಲ್ಲಿ ಗೃಹ ಇಲಾಖೆ ಸ್ಥಾಪಿಸಿದ ೨ ಮಹಿಳಾ ಪೋಲಿಸ್ ಕಂಪನಿಗಳು ಈ ಎಲ್ಲಾ ಯೋಜನೆಗಳು ಮಹಿಳಾ ಪರ ಯೋಜನೆಗಳಾಗಿದ್ದು ಮಹಿಳಾ ಪ್ರಗತಿಗೆ ಸಾಹಯಕವಾಗಿವೆ ಎಂದು ಮೆಚ್ಚಿಗೆ ವ್ಯಕ್ತಪಡಿಸಿದರು. ಅಲ್ಲದೇ ಸ್ತ್ರೀ ಶಕ್ತಿ, ಸ್ವಶಕ್ತಿ ಗುಂಪುಗಳು ರೂಪಗೊಂಡಿದ್ದು ಕಾಂಗ್ರೇಸ್ ಸರ್ಕಾರ ಇದ್ದಾಗ ಎಂದು ನೆನಪಿಸಿದರು. ಈ ಸಭೆಗೆ ರಾಜ್ಯ ಮಹಿಳಾ ಕಾಂಗ್ರೇಸ್ ಕಾರ್ಯದರ್ಶಿಯಾದ ಶ್ರೀಮತಿ ಈರಮ್ಮ ಬಾಬುರವರು ವಿಕ್ಷಕರಾಗಿ ಆಗಮಿಸಿ ಕೊಪ್ಪಳ ಜಿಲ್ಲಾ ಮಹಿಳಾ ಕಾಂಗ್ರೇಸ್ ಉತ್ತಮ ಸಂಘಟನೆಯಲ್ಲಿದ್ದು ಮಹಿಳಾ ಸಂಘಟನೆಯಲ್ಲಿ ಮುಂಚೂಣಿಯಲ್ಲಿದೆ ಪಕ್ಷದ ಸಂಘಟನೆಯ ಬಗ್ಗೆ ತಿಳಿಸಿದರು. ಮೋದಿಯವರ ಅಚ್ಛದಿನ್ ಬರುವುದಿಲ್ಲ ಇಲ್ಲಿ ಕಾಂಗ್ರೇಸ್ ಪಕ್ಷದಿಂದ ಅಚ್ಛದಿನ್ ಬರುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಕೊಪ್ಪಳ  ತಾಲೂಕ ಅಧ್ಯಕ್ಷೆ ಹುಲಿಗೆಮ್ಮ ತಟ್ಟಿ, ನಗರ ಘಟಕ ಅಧ್ಯೆಕ್ಷೆ ಪರವೀನ್ ಮನಿಯಾರ್, ಯಲಬುರ್ಗಾ ತಾಲೂಕ ಅಧ್ಯಕ್ಷೆ ಜಯಶ್ರೀ ಕಂದಕೂರ, ನಗರ ಘಟಕ ಅಧ್ಯಕ್ಷೆ ಶರಣಮ್ಮ ಪೂಜಾರ, ಕುಷ್ಟಗಿ ತಾಲೂಕ ಅಧ್ಯಕ್ಷೆ ಶಕುಂತಲಾ ಹಿರೇಮಠ, ಗಂಗಾವತಿ ನಗರ ಘಟಕ ಅಧ್ಯಕ್ಷೆ ರತ್ನಾಪ್ರಭಾ ಉಪಸ್ಥಿತರಿದ್ದರು. ಅಲ್ಲದೇ ಜಿಲ್ಲಾ ಪದಾಧಿಕಾರಿಗಳು, ತಾಲೂಕ ಪದಾಧಿಕಾರಿಗಳು, ಬ್ಲಾಕ ಸಮೀತಿ ಪದಾಧಿಕಾರಿಗಳು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.ಉಮಾ ಜನಾದ್ರಿ ಸ್ವಾಗತಿಸಿದರು, ಮಂಜುಳಾ ಹುಲ್ಲೂರು ವಂದಿಸಿದರು.

Please follow and like us:
error