ಕಾಂಗ್ರೆಸ್ ಬಿಜೆಪಿ ಇಲ್ಲಿ ಒಂದಾಗಿದ್ದು ಯಾಕೆ ಗೊತ್ತಾ ?

ಕೊಪ್ಪಳ :  ಜಿಲ್ಲೆಯಲ್ಲಿರುವ ಟೋಲ್ಗೇಟ್ನಲ್ಲಿ ಸಾರ್ವಜನಿಕರು ಜೊತೆಗೆ ಜನಪ್ರತಿನಿಧೀಗಳಿಗೆ ಆನಗತ್ಯ ಕಿರಿಕಿರಿ ಮಾಡುವ ಹಾಗೂ ಅಲ್ಲಿನ ಸಿಬ್ಬಂದಿಯನ್ನ ತೆಗೆದು ಹಾಕಿ, ಹೊರರಾಜ್ಯದವರನ್ನು ನೇಮಕ ಮಾಡಿಕೊಂಡಿರುವ ಟೋಲ್ಗೇಟ್ ನಡೆಸುವ ಸಂಸ್ಥೆಯ ವಿರುದ್ಧ ಮಂಗಳವಾರ ಚುನಾಯಿತ ಜನಪ್ರತಿನಿಧಿಗಳ ಜೊತೆಗೆ ಸಾರ್ವಜನಿಕರು ಟೋಲ್ ಗೇಟ್ ಬಂದ್ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು. ಈ ಟೋಲ್ಗೇಟ್ನಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ಥೇಟ್ ಗೂಂಡಾಗಳಂತೆ ವರ್ತಿಸ್ತಾರೆ. ಸಾರ್ವಜನಿಕರಿಗೆ ಆನಗತ್ಯ ಕಿರಿಕಿರಿ ಮಾಡ್ತಾರೆ ಅಂತ ಆರೋಪಿಸುವುದು ಬೇರಾರೂ ಅಲ್ಲ, ಕುಷ್ಟಗಿಯ ಶಾಸಕ ಅಮರೇಗೌಡ ಬಯ್ಯಾಪುರ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಹಾಗೂ ಕೊಪ್ಪಳದ ಶಾಸಕ ರಾಘವೇಂದ್ರ ಹಿಟ್ನಾಳ. ಕೊಪ್ಪಳ ಜಿಲ್ಲೆಯಲ್ಲಿ ನಿಯಮಬಾಹೀರವಾಗಿ ಟೋಲ್ಗಳನ್ನ ಸ್ಥಾಪಿಸಲಾಗಿದೆ. 3 ಕಿಮೀಗಳಿಗೆ ಒಂದರಂತೆ ಟೋಲ್ ನಿರ್ಮಿಸಿ ಸಾರ್ವನಿಜಕರನ್ನು ಸುಲಿಗೆ ಮಾಡಲಾಗುತ್ತಿದೆ. ಈ ಬಗ್ಗೆ ಹಲವು ಬಾರಿ ದೂರಿದರೂ ಟೋಲ್ಗೇಟ್ ನಿರ್ವಹಿಸುವ ಜಿಎಂಆರ್ ಸಂಸ್ಥೆ ಬುದ್ಧಿ ಕಲಿತಿಲ್ಲ. ಹಾಗಾಗಿ ಪ್ರತಿಭಟನೆ ನಡೆಸಲಾಗುತ್ತಿದೆ. ಬರೀ ಸಾರ್ವಜನಿಕರಿಗೆ ಮಾತ್ರವಲ್ಲ, ಜನಪ್ರತಿನಿಧಿಗಳಿಗೆ ಜಿಎಂಆರ್ ಸಂಸ್ಥೆಯ ಸಿಬ್ಬಂದಿ ಅನಗತ್ಯವಾಗಿ ದಬ್ಬಾಳಿಕೆ ನಡೆಸುತ್ತಿದ್ದಾರೆ. ಶಾಸಕರ ಪಾಸ್ ತೋರಿಸಿದರೂ ಬಿಡುತ್ತಿಲ್ಲ. ಈ ಹಿಂದೆ ಶಾಸಕರಾಗಿದ್ದ ಕಾಶಪ್ಪನವರ್ ಮೇಲೆ ಹಲ್ಲೆಗೆ ಮುಂದಾಗಿದ್ದ ಕುಷ್ಟಗಿ ರಸ್ತೆಯ ಟೋಲ್ ಸಿಬ್ಬಂದಿ, ಇಂದೂ ಸಹ ನನ್ನ ಮೇಲೆ ಅದೇ ವರ್ತನೆ ಮುಂದುವರಿಸಿದ್ದಾರೆ. ಜಿಲ್ಲೆಯಲ್ಲಿರುವ ಎಲ್ಲ ಟೋಲ್ಗಳಲ್ಲಿ ವಿಐಪಿ ಗೇಟ್ ನಿರ್ಮಿಸಬೇಕು. ಜೊತೆಗೆ ಸ್ಥಳೀಯರ ಉದ್ಯೋಗ ಕಸಿದುಕೊಂಡು ಹೊರರಾಜ್ಯದವರಿಗೆ ನೀಡಿರುವ ಕೆಲಸವನ್ನ ಮತ್ತೇ ಸ್ಥಳೀಯರಿಗೆ ಕೊಡಬೇಕು ಅನ್ನೋದು ಪ್ರತಿಭಟನಾನಿರತರ ಆಗ್ರಹ ಇದು ಪಕ್ಷಾತೀತ ಹೋರಾಟ. ಈ ಹೋರಾಟ ಯಾವುದೇ ಪಕ್ಷಕ್ಕೆ ಸೀಮಿತವಾಗಿಲ್ಲ. ಜಿಎಂಆರ್ ಸಂಸ್ಥೆ ರಸ್ತೆ ನಿರ್ಮಿಸಲು ಸ್ಥಳೀಯರ ಭೂಮಿ ಪಡೆದಿದೆ. ಉದ್ಯೋಗ ನೀಡುವ ಭರವಸೆ ನೀಡಿ ರಸ್ತೆ, ಟೋಲ್ಗೇಟ್ ನಿರ್ಮಾಣ ಮಾಡಿ, ಈಗ ಸ್ಥಳೀಯರನ್ನು ಕೆಲಸದಿಂದ ತೆಗೆದು ಹಾಕಿ ಹೊರರಾಜ್ಯದವರನ್ನ ನೇಮಿಸಿಕೊಂಡಿರುವುದು ಸರಿಯಲ್ಲ. ಈ ಬಗ್ಗೆ ಈಗಾಗಲೇ ಕೇಂದ್ರ ಸರಕಾರದ ಗಮನಕ್ಕೂ ತರಲಾಗಿದೆ. ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಲಿ ಅನ್ನೋದು ಹೋರಾಟಗಾರರ ಒತ್ತಾಯ. ಒಟ್ಟಾರೆ ಇಂದಿನ ಟೋಲ್ಗೇಟ್ ಬಂದ್ನಿಂದ ವಾಹನ ಸವಾರರು ಫುಲ್ ಖುಷಿಯಾಗಿದ್ದರು. ಪ್ರತಿ ನಿತ್ಯ ಟೋಲ್ ಹಣಕ್ಕಾಗಿ ತಗಾದೆ ತೆಗೆಯುತ್ತಿದ್ದ ಟೋಲ್ ಸಿಬ್ಬಂದಿಯಿಂದ ತಪ್ಪಿದ ಕಿರಿ ಕಿರಿಯಿಂದ ಯಾವುದೇ ಟೋಲ್ ಕಟ್ಟದೇ ಫ್ರಿಯಾಗಿ ಓಡಾಡಿದರು. ಕೆಲವರಂತೂ ಟೋಲ್ ಕಟ್ಟಲು ನಿಂತು ನಿಂತು, ಬಳಿಕ ಟೋಲ್ ಇಲ್ಲ ಅನ್ನೋದನ್ನ ಕೇಳಿ ಪ್ರಾಣ ಹಿಂಡುತ್ತಿದ್ದ ನಿಮಗೆ ಪುಣ್ಯ ಬರಲಿ ಅಂತ ಮುಂದೆ ಸಾಗಿದರು. ಜಿಲ್ಲಾಡಳಿತ ಹಾಗೂ ಹೆದ್ದಾರಿ ಪ್ರಾಧಿಕಾರ ಜಿಲ್ಲೆಯ ಟೋಲ್ ಸಮಸ್ಯೆ ಬಗೆಹರಿಸಲಿ ಅನ್ನೋದು ಸ್ಥಳೀಯರ ಆಗ್ರಹ.

Please follow and like us:
error