ಕೊಪ್ಪಳ : ನಮ್ಮ ಪಕ್ಷದ ಚುನಾಯಿತ ಪ್ರತಿನಿಧಿಗಳಿಗೆ ಇಲ್ಲಸಲ್ಲದ ಆಮಿಷ ತೋರಿಸಿ, ಕೊನೆಗಳಿಗೆಯಲ್ಲಿ ಅವರನ್ನು ಸೋಲಿಸಿ ಬೀದಿಗೆ ತಳ್ಳೋದೆ ಬಿಜೆಪಿಯವರ ಕೆಲಸವಾಗಿದೆ ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ವಾಗ್ದಾಳಿ ನಡೆಸಿದ್ದಾರೆ.
ಗುರುವಾರ ನಡೆದ ಗಂಗಾವತಿ ತಾಲೂಕ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿಯವರ ಹಣೆಬರಹ ಗೊತ್ತಾಗಿದ್ದು, ನಮ್ಮ ಪಕ್ಷದವರನ್ನು ಆಮಿಷವೊಡ್ಡಿ ತಮ್ಮ ಕಡೆ ಸೆಳೆದು ಅವರನ್ನು ಸೋಲಿಸಿ ಬೀದಿಗೆ ತಳ್ಳಿದ್ದಾರೆ. ಇದ್ರಿಂದ ಅನ್ಯಾಯಕ್ಕೆ ಒಳಗಾದ ನಮ್ಮ ಪಕ್ಷದ ಚುನಾಯಿತ ಪ್ರತಿನಿಧಿಗಳಿಗೆ ಇದೀಗ ತಪ್ಪಿನ ಅರಿವಾಗಿದ್ದು, ಮರಳಿ ನಮ್ಮ ಪಕ್ಷಕ್ಕೆ ಬರುತ್ತಿದ್ದಾರೆ ಎಂದ್ರು. ಇನ್ನು ತಾಲೂಕ ಪಂಚಾಯತ್ ಚುನಾವಣೆಯಲ್ಲಿ ಬಹುಮತ ಇಲ್ಲದಿದ್ರೂ ನಮ್ಮ ಅಭ್ಯರ್ಥಿಯ ವಿರುದ್ದ ನಮ್ಮ ಪಕ್ಷದ ಸದಸ್ಯರಾದ ಫಕೀರಪ್ಪ ಅವರನ್ನು ಬಿಜೆಪಿ ಶಾಲು ಹಾಕಿಸಿ ಸ್ಪರ್ಧಿಸುವಂತೆ ಮಾಡಿದ್ರು. ಅಲ್ಲದೇ ಫಕೀರಪ್ಪರವರೇ ನಿಮ್ಮನ್ನೆ ಗೆಲ್ಲುಸುತ್ತೇವೆ ಎಂದು ತಮ್ಮ ಕಡೆ ಸೆಳೆದಿದ್ರು. ಆದ್ರೆ ಇದೀಗ ಫಕೀರಪ್ಪನವರು ಚುನಾವಣೆಯಲ್ಲಿ ಸೋತಿದ್ದಾರೆ. ಫಕೀರಪ್ಪ ರನ್ನು ಬಿಜೆಪಿ ಸೋಲಿಸಿ ಅವರನ್ನು ಅಕ್ಷರಶಃ ಬೀದಿಗೆ ತಳ್ಳಿದ್ದಾರೆ. ಆದ್ರೂ ತಪ್ಪಿನ ಅರಿವಾಗಿ ಫಕೀರಪ್ಪ ಅವರು ಪಕ್ಷದಲ್ಲಿ ಮುಂದುವರೆದ್ರೆ ಸ್ವಾಗತ ಎಂದ್ರು.. ಅದೇ ರೀತಿ ಸದ್ಯ ನಮ್ಮ ಪಕ್ಷದ ಜಿಲ್ಲಾ ಪಂಚಾಯತ ಅಧ್ಯಕ್ಷರಾಗಿರೋ ವಿಶ್ವನಾಥ್ ರೆಡ್ಡಿಯವರನ್ನು ಬಿಜೆಪಿ ಸೆಳೆದಿದೆ.. ಯಾವುದೇ ಕಾರಣಕ್ಕೂ ನಿಮ್ಮನ್ನು ಜಿಲ್ಲಾಪಂಚಾಯತ್ ಅಧ್ಯಕ್ಷ ಸ್ಥಾನದಿಂದ ಇಳಿಯಲು ಬಿಡೋದಿಲ್ಲ ಎಂದು ಜಂಬ ಕೊಚ್ಚಿಕೊಂಡಿತ್ತು. ಮುಂದೆ ಸಹ ತಾಲೂಕ ಪಂಚಾಯತ್ ನಲ್ಲಿ ಆದ ಸ್ಥಿತಿ ವಿಶ್ವನಾಥರಡ್ಡಿಗೂ ಆಗಲಿದೆ..ಈ ಬಗ್ಗೆ ವಿಶ್ವನಾಥರೆಡ್ಡಿಗೂ ಅರಿವಿದೆ ಎಂದು ಟಾಂಗ್ ನೀಡಿದ್ರು