ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡ‌ ಕಾರ್ಯಕರ್ತರು

ಕೊಪ್ಪಳ : ಇಡೀ‌ ದೇಶವು ಇಂದು‌ ಬಿಜೆಪಿಯ ಸೈದ್ದಾಂತಿಕ ಹಾಗೂ ಪ್ರಧಾನಿ ಮೋದಿಯವರ ಅಭಿವೃದ್ಧಿ ಯನ್ನು ಮೆಚ್ಚಿಕೊಂಡಿದ್ದರಿಂದ ಎಲ್ಲಡೆ ಅಭೂತಪೂರ್ವ ಜನ ಬೆಂಬಲ ಸಿಕ್ಕಿದೆ ಎಂದು ಕೊಪ್ಪಳ ‌ವಿಧಾನ ಸಭಾ ಕ್ಷೇತ್ರದ ಬಿಜೆಪಿ ಬೂತ್ ಕಮೀಟಿ ಅಧ್ಯಕ್ಷ, ಕೆಡಿಪಿ‌ ಸದಸ್ಯ ಅಮರೇಶ‌ ಕರಡಿ ಹೇಳಿದರು.

ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಗೆ ಸೇರ್ಪಡೆಗೊಂಡ ಕೊಪ್ಪಳ ತಾಲ್ಲೂಕಿನ ಕನಕಪುರ ತಾಂಡದ  ಮುಖಂಡರು, ಕಾರ್ಯಕರ್ತರನ್ನು ನಗರದ  ಸಂಸದರ ಗೃಹ ಕಛೇರಿಯಲ್ಲಿ ಬಿಜೆಪಿ ಪಕ್ಷಕ್ಕೆ ಸ್ವಾಗತಿಸಿ ಮಾತಮಾಡಿದ ಅವರು, ಬಿಜೆಪಿ ಮತ್ತು ಪ್ರಧಾನಿ ಮೋದಿಯವರ ವಿಚಾರಗಳು, ಹಾಗೂ ಕೈಗೊಂಡಿರುವ ಅಭಿವೃದ್ಧಿ ಕಾರ್ಯ ಗಳಿಂದ‌ ದೇಶ ಸಮಗ್ರವಾಗಿ ಅಭಿವೃದ್ಧಿ ಹೊಂದುತ್ತಿದೆ, ಜನರ ಆಶೋತ್ತರಗಳನ್ನು ಈಡೇರಿಸಲಾಗುತ್ತದೆ,  ಇದನ್ನು ಇಡೀ‌ ದೇಶದ ಜನತೆ ಮಾತ್ರವಲ್ಲ ಜಗತ್ತೆ ಮೆಚ್ಚಿಕೊಂಡಿದೆ ಎಂದು ಹೇಳಿದರು.

ಪಕ್ಷದ ಸಿದ್ದಾಂತಗಳನ್ನು ಒಪ್ಪಿಕೊಂಡು ಹಾಗೂ ಅಭಿವೃದ್ಧಿ ‌ಕೆಲಸಗಳು ಸೇರಿ ದೇಶ ಮುನ್ನಡೆ ಯಲು ಜನರು ಬಿಜೆಪಿಯನ್ನು ಎಲ್ಲ ವರ್ಗದವರು ಬೆಂಬಲಿಸುತ್ತಿದ್ದಾರೆ, ಅದೇ ರೀತಿ ಕೊಪ್ಪಳ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್, ‌ಜೆಡಿಎಸ್ ಸೇರಿ ಇತರೆ ಪಕ್ಷಗಳಿಂದ‌ ಸಾವಿರಾರೂ ಕಾರ್ಯಕರ್ತರು, ಜನರು ಬಿಜೆಪಿ ಸೇರುತ್ತಿದ್ದಾರೆ, ಪಕ್ಷದ ನೀತಿ, ತತ್ವಗಳನ್ನು ಒಪ್ಪಿಕೊಂಡು ಬರುವವರಿಗೆ ಸ್ವಾಗತವಿದೆ ಎಂದರು.

ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ  ಕನಕಪುರ ತಾಂಡದ ಮುಖಂಡರಾದ
ವಿಜಯಕುಮಾರ್ ಅಗಸಿಮನಿ ,ಹನುಮಂತಪ್ಪ ಮಡ್ಡಿ, ರತ್ನಪ್ಪ ಮಡ್ಡಿ, ಶಿವಪ್ಪ ರಾಥೋಡ, ಶಿವಪ್ಪ ಕಾರಬಾರಿ ,ಶಿವಕುಮಾರ್ ಕಾರಬಾರಿ,  ಸೇರಿದಂತೆ ಇತರರು ಅಮರೇಶ ಕರಡಿ ನೇತೃತ್ವದಲ್ಲಿ  ಬಿಜೆಪಿ ಪಕ್ಷ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ  ಬಿಜೆಪಿಯ ಹಲವು ಮುಖಂಡರು,‌ಕಾರ್ಯಕರ್ತರು  ಉಪಸ್ಥಿತರಿದ್ದರು.

Please follow and like us:
error