ಕಾಂಗ್ರೆಸ್ ಗೆಲುವಿಗೆ ಆಂಜನೇಯಸ್ವಾಮಿ ಮೊರೆ ಹೋದ ಆರ್.ಧ್ರವನಾರಾಯಣ್

ಗಂಗಾವತಿ: ಬೆಳಗಾವಿ ಲೋಕಸಭಾ ಮತ್ತು ಮಸ್ಕಿ ಬಸವಕಲ್ಯಾಣ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷ ಮಾಜಿ ಸಂಸದ ಆರ್. ಧ್ರುವನಾರಾಯಣ್ ಕಿಷ್ಕಿಂದಾ ಅಂಜನಾದ್ರಿಯ ಶ್ರೀ ಆಂಜನೇಯಸ್ವಾಮಿ ಮೊರೆ ಹೋಗಿದ್ದಾರೆ.

ಶನಿವಾರ ಬೆಳ್ಳಿಗ್ಗೆ ಸ್ಥಳೀಯ ಕಾಂಗ್ರೆಸ್ ಪಕ್ಷದ ಮುಖಂಡರ ಜೊತೆ ಅಂಜನಾದ್ರಿ ಬೆಟ್ಟ ಹತ್ತಿ ಪೂಜೆ ಸಲ್ಲಿಸಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವಂತೆ ಪ್ರಾರ್ಥನೆ ಸಲ್ಲಿಸಿದ್ದಾರೆ.

ನಂತರ ಅವರು ಪತ್ರಕರ್ತರ ಜತೆ ಮಾತನಾಡಿ, ಬಿಜೆಪಿಯ ಜನವಿರೋಧಿ ಆಡಳಿತದಿಂದ ರಾಜ್ಯ ಅಭಿವೃದ್ಧಿ ಶೂನ್ಯವಾಗಿದೆ. ಉಪಚುನಾವಣೆಯಲ್ಲಿ ಜಾತಿ ಲಾಭಿ ಮತ್ತು ಹಣ ಹಂಚುವುದರಿಂದ ಬಿಜೆಪಿ ಗೆಲುವು ಪಡೆಯುತ್ತಿದೆ. ಎಪಿಎಂಸಿ ಖಾಸಗೀಕರಣ, ಭೂಸುಧಾರಣಾ ಕಾಯ್ದೆ, ತಿದ್ದುಪಡಿ ಕೃಷಿಕಾಯ್ದೆಗಳ ತಿದ್ದುಪಡಿ ,ಬ್ಯಾಂಕ್,ರೈಲ್ವೆ ಸಾರಿಗೆ, ವಿಮಾನಯಾನ ಖಾಸಗೀಕರಣದಿಂದ ದೇಶ ಸಂಪತ್ತನ್ನು ಕೆಲ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಿದೆ ಎಂದರು.

ಕೋವಿಡ್ ರೋಗ ಹರಡುವುದನ್ನು ತಡೆಯುವಲ್ಲಿ ವಿಫಲ ಅವೈಜ್ಞಾನಿಕ ಲಾಕ್ ಡೌನ್ ಮಾಡಿದ್ದರಿಂದ ಸಾವಿರಾರು ಕೂಲಿ ಕೃಷಿ ಕಾರ್ಮಿಕರು ಭವಿಷ್ಯ ಕಳೆದುಕೊಂಡಿದ್ದಾರೆ. ಕೆಎಸಾರ್ಟಿಸಿ ನೌಕರರ ಮುಷ್ಕರವನ್ನು ಸರಕಾರ ನಿರ್ಲಕ್ಷ್ಯ ಮಾಡಿದ್ದು ಗ್ರಾಮೀಣ ಜನರು ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ನೌಕರರ ಮನವೊಲಿಸಿ‌ ಮಾತುಕತೆಗೆ ಕರೆಯಬೇಕು. ಸಂಪೂರ್ಣವಾಗಿ ವಿಫಲವಾಗಿದೆ. ಇದರ ವಿರುದ್ಧ ಉಪಚುನಾವಣೆಯಲ್ಲಿ ಮತದಾರರು ತಮ್ಮ ಅಭಿಪ್ರಾಯ ತಿಳಿಸಲಿದ್ದು ಬಿಜೆಪಿಯನ್ನು ಖಂಡಿತವಾಗಿ ಸೋಲಿಸಲಿದ್ದಾರೆಂದರು

Please follow and like us:
error