ಕವಿ ಗವಿಸಿದ್ಧ ಎನ್. ಬಳ್ಳಾರಿ – ಕಾವ್ಯ ಪ್ರಶಸ್ತಿ – ೨೦೨೧ – ಹಸ್ತಪ್ರತಿ ಆಹ್ವಾನ

 

೨೦೨೧ ರ ಸಾಲಿನ ‘ಕವಿ ಗವಿಸಿದ್ಧ ಎನ್. ಬಳ್ಳಾರಿ – ಕಾವ್ಯ ಪ್ರಶಸ್ತಿ’ಗೆ ರಾಜ್ಯಮಟ್ಟದಲ್ಲಿ ಕವಿತೆಗಳ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ. ಪ್ರಶಸ್ತಿಯು ೫,೦೦೦ ರೂ. ನಗದು ಮತ್ತು ಫಲಕ ಒಳಗೊಂಡಿದೆ. ಹಸ್ತಪ್ರತಿಯು ಈ ಹಿಂದೆ ಎಲ್ಲಿಯೂ ಪುಸ್ತಕದ ರೂಪದಲ್ಲಿ ಪ್ರಕಟವಾಗಿರಬಾರದು. ಹಸ್ತಪ್ರತಿಯಲ್ಲಿ ಕನಿಷ್ಟ ೩೫ ಕವಿತೆಗಳಿರಬೇಕು. ಯಾವುದೇ ಕಾರಣಕ್ಕೂ ಹಸ್ತಪ್ರತಿಯನ್ನು ಹಿಂದಿರುಗಿಸುವುದಿಲ್ಲವಾದ ಕಾರಣ – ಮೂಲಪ್ರತಿಗಳನ್ನು ಕವಿಗಳು ತಮ್ಮಲ್ಲಿ ಇಟ್ಟುಕೊಂಡಿರಬೇಕು. ಹಸ್ತಪ್ರತಿಯು ತಲುಪಿದ ಕೂಡಲೇ ಕವಿಗಳಿಗೆ ತಿಳಿಸಲಾಗುವುದು. ಅನುವಾದ ಕೃತಿಗಳು ಬೇಡ. ಯಾವುದೇ ಪತ್ರ ವ್ಯವಹಾರಕ್ಕಾಗಲೀ ಮತ್ತು ದೂರವಾಣಿಯಲ್ಲಿ ಚರ್ಚಿಸುವುದಕ್ಕಾಗಲೀ ಅವಕಾಶವಿಲ್ಲ. ಹಸ್ತಪ್ರತಿಯು ಕೇವಲ ಪರಿವಿಡಿ ಮತ್ತು ಕವಿತೆಗಳನ್ನು ಮಾತ್ರ ಒಳಗೊಂಡಿರಬೇಕು ಮತ್ತು ಕವಿಗಳ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಪ್ರತ್ಯೇಕ ಪುಟದಲ್ಲಿರಬೇಕು. ಆಯೋಜಕರ ನಿರ್ಣಯದಂತೆ ಒಬ್ಬರು ಅಥವಾ ಇಬ್ಬರು ಕವಿಗಳಿಗೆ ಪ್ರತ್ಯೇಕವಾಗಿ ಬಹುಮಾನ ವಿತರಿಸಬಹುದಾಗಿದೆ. ಬಹುಮಾನವನ್ನು ಕೊಪ್ಪಳದಲ್ಲಿ ನಡೆಯುವ ‘ಗವಿಸಿದ್ಧ ಎನ್. ಬಳ್ಳಾರಿ – ಸಾಹಿತ್ಯೋತ್ಸವ’ದಲ್ಲಿ ವಿತರಿಸಲಾಗುವುದು.

ಹಸ್ತಪ್ರತಿ ಕಳುಹಿಸಲು ಕೊನೆಯ ದಿನಾಂಕ ೨೫-೦೪-೨೦೨೧.

ಹಸ್ತಪ್ರತಿ ಕಳುಹಿಸುವ ವಿಳಾಸ : ಮಹೇಶ ಬಳ್ಳಾರಿ, ಅತ್ತಾರ ಗಲ್ಲಿ, ಜವಾಹರ ರಸ್ತೆ,
ಕೊಪ್ಪಳ – ೫೮೩ ೨೩೧

ಮಾಹಿತಿಗಾಗಿ :
ಮಹೇಶ ಬಳ್ಳಾರಿ-೯೦೦೮೯೯೬೬೨೪ ಮತ್ತು ರಮೇಶ ಬನ್ನಿಕೊಪ್ಪ – ೯೯೦೨೭೪೬೨೩೫ ಅವರನ್ನು ಸಂಪರ್ಕಿಸಬಹುದು.

Please follow and like us:
error