ಕವಿ ಗವಿಸಿದ್ದ ಎನ್ ಬಳ್ಳಾರಿ – ಸಾಹಿತ್ಯೋತ್ಸವ :ಡಿಸೆಂಬರ್ ೨೦ ರಂದು

ಕೊಪ್ಪಳ: ತಳಮಳ ಪ್ರಕಾಶನ, ಗವಿಸಿದ್ಧ ಎನ್. ಬಳ್ಳಾರಿ ವೇದಿಕೆ ಹಾಗೂ ತಿರುಳ್ಗನ್ನಡ ಸಾಹಿತಿಗಳ ಸಹಕಾರ ಸಂಘ ಇವುಗಳ ಸಹಯೋಗದಲ್ಲಿಕೊಪ್ಪಳದ ಹಿರಿಯ ಕವಿ ಗವಿಸಿದ್ದ ಎನ್. ಬಳ್ಳಾರಿ ಇವರ ಸ್ಮರಣೆ ನಿಮಿತ್ಯ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವಕಾರ್ಯಕ್ರಮವನ್ನು ದಿನಾಂಕ ೨೦-೧೨-೨೦೨೦ ರಂದುರವಿವಾರಇಲ್ಲಿನ ಸ್ವಾಮಿ ವಿವೇಕಾನಂದ ಶಾಲೆಯ ಸಭಾ ಭವನದಲ್ಲಿ ಮುಂಜಾನೆ ೧೦.೧೫ ಕ್ಕೆ ಹಮ್ಮಿಕೊಳ್ಳಲಾಗಿದೆ.
ಪ್ರತಿ ವರ್ಷತಳಮಳ ಪ್ರಕಾಶನವುರಾಜ್ಯಾದ್ಯಾಂತಕಾವ್ಯದ ಹಸ್ತಪ್ರತಿಗಳನ್ನು ಆಹ್ವಾನಿಸಿ ವಿಜೇತರಿಗೆ೫ ಸಾವಿರರೂಪಾಯಿ ನಗದು ಒಳಗೊಂಡ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ನೀಡುತ್ತಲಿದೆ.ಈ ವರ್ಷ ಬೆಳಗಾವಿಯ ಡಾ.ಶೋಭಾ ನಾಯಕ್ ಮತ್ತುತುಮಕೂರಿನ ಬಿದಲೋಟಿರಂಗನಾಥಆಯ್ಕೆಯಾಗಿದ್ದುಉಭಯರಿಗೆಇದೇಕಾರ್ಯಕ್ರಮದಲ್ಲಿ ಕವಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪ್ರದಾನ ನಡೆಯಲಿದೆ.
ಇದೇ ಸಂದಭದಲ್ಲಿತಳಮಳ ಪ್ರಕಾಶನದ ವತಿಯಿಂದರವಿಕುಮಾರ್‌ಎನ್. ಟೆಲೆಕ್ಸ್‌ಇವರ’ನೆರ್ಕೆಗೋಡೆಯರತ್ನಪಕಿ’, ಮಹೇಶ ಬಳ್ಳಾರಿ ಇವರ’ಐ ಕಾಂಟ್ ಬ್ರೀದ್’, ರಮೇಶ ಬನ್ನಿಕೊಪ್ಪಇವರ’ಕಾಣೆಯಾದ ನಗುವಚಂದಿರ’ ಮೂರುಕವನ ಸಂಕಲನಗಳು ಬಿಡುಗಡೆಗೊಳ್ಳಲಿವೆ. ಈ ಕಾರ್ಯಕ್ರಮದಲ್ಲಿವಿಶೇಷವಾಗಿ ರೈತರು ಮತ್ತು ನಿವೃತ್ತಯೋಧರಿಗೆ ಸನ್ಮಾನವುಸಹ ಜರುಗಲಿದೆ.
ಮುಖ್ಯ ಅತಿಥಿಗಳಾಗಿ ಖ್ಯಾತಕಥೆಗಾರರಾದಡಾ.ಅಮರೇಶ ನುಗಡೋಣಿಮತ್ತುವಿಮರ್ಶಕರು, ಸಂಶೋಧಕರಾದಡಾ.ಜಾಜಿದೇವೇಂದ್ರಪ್ಪಆಗಮಿಸಲಿದ್ದಾರೆ. ಬಸವ ಸಮಿತಿಯಅಧ್ಯಕ್ಷರಾದ ಬಸವರಾಜ ಬಳ್ಳೊಳ್ಳಿ ಮತ್ತು ಲಯನ್ಸ ಸದಸ್ಯರಾದ ಶ್ರೀನಿವಾಸ್ ಗುಪ್ತಾ ಗೌರವ ಉಪಸ್ಥಿತಿ ವಹಿಸಲಿದ್ದು, ಕಾರ್ಯಕ್ರಮದಅಧ್ಯಕ್ಷತೆಯನ್ನುಹಿರಿಯ ಬಂಡಾಯ ಸಾಹಿತಿಗಳಾದ ಅಲ್ಲಮಪ್ರಭು ಬೆಟ್ಟದೂರ ವಹಿಸುವರು.ಸಾಹಿತ್ಯಾಸಕ್ತರು ಈ ಕಾರ್ಯಕ್ರಮಕ್ಕೆಆಗಮಿಸಬೇಕೆಂದು ‘ಸಾಹಿತ್ಯೋತ್ಸವ’ದ ಸಂಚಾಲಕ ಮಹೇಶ ಬಳ್ಳಾರಿ ಪತ್ರಿಕಾ ಪ್ರಕಟಣೆ ಮೂಲಕ ಕೋರಿದ್ದಾರೆ.

Please follow and like us:
error