ಕಳೆದ ವರ್ಷದ ಕೋವಿಡ್ ರಿಸ್ಕ್ ಭತ್ಯೆ ಮಂಜೂರುಗೊಳಿಸಲು ಶುಶ್ರೂಷಕರ ಮನವಿ

ಕೋವಿಡ್ ರಿಸ್ಕ್ ಭತ್ಯೆ ಮಂಜೂರುಗೊಳಿಸಲು ಶುಶ್ರೂಷಕರ ಮನವಿ

Kannadanet  ಕೊಪ್ಪಳ: ಕಳೆದ ವರ್ಷ ಪಿಪಿಇ ಕಿಟ್ ಧರಿಸಿ ಕೊರೊನಾ ರೋಗಿಗಳಿಗೆ ಆರೈಕೆ ಮಾಡಲಾಗಿದ್ದು, ಕೋವಿಡ್ ರಿಸ್ಕ್ ಭತ್ಯೆ ಇನ್ನೂ ಬಂದಿಲ್ಲ. ಸರಕಾರ ಕೂಡಲೇ ರಿಸ್ಕ್ ಭತ್ಯೆ ಬಿಡುಗಡೆಗೊಳಿಸಲು ಕೊಪ್ಪಳ ಕಿಮ್ಸ್‌ನ ಗುತ್ತಿಗೆ ಶುಶ್ರೂಷಕ ಸಿಬ್ಬಂದಿ ನೌಕರರ ಸಂಘದವರು ಸಚಿವ ಬಿ.ಸಿ.ಪಾಟೀಲಗೆ ಮನವಿ ಸಲ್ಲಿಸಿದರು.

ಸಚಿವರಿಗೆ ಮನವಿ ಸಲ್ಲಿಸಿ ಮಾತನಾಡಿದ ಸಂಘದ ಮುಖಂಡ ಶ್ರೀನಿವಾಸ ರಾಠೋಡ್ ಅವರು, ಕಳೆದ ವರ್ಷ ಪಿಪಿಇ ಕಿಟ್ ಧರಿಸಿ ಕರ್ತವ್ಯ ನಿರ್ವಹಿಸಿದ ಸಿಬ್ಬಂದಿಗೆ 5 ಸಾವಿರ ರಿಸ್ಕ್ ಭತ್ಯೆ ನೀಡುವುದಾಗಿ ಹೇಳಿದ್ದ ಸರಕಾರ ಈವರೆಗೂ ಭತ್ಯೆ ಬಿಡುಗಡೆಗೊಳಿಸಿಲ್ಲ. ಈಗಲೂ ನಾವು ರಿಸ್ಕ್ ತೆಗೆದುಕೊಂಡು ಪಿಪಿಇ ಕಿಟ್ ಧರಿಸಲು ಸಿದ್ಧರಿದ್ದೇವೆ. ಸರಕಾರ ಕಖೆದ ವರ್ಷದ ಭತ್ಯೆ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು.

ಈ ವರ್ಷ ಕೋವಿಡ್ ರಿಸ್ಕ್ ಭತ್ಯೆಯ ಜೊತೆಗೆ 50 ಲಕ್ಷ ರೂಪಾಯಿ ಜೀವ ವಿಮೆ ನೀಡಬೇಕು. ಹಾಗೂ ಗುತ್ತಿಗೆ ಆಧಾರದಡಿ ಕಾರ್ಯ ನಿರ್ವಹಿಸುತ್ತಿರುವ ನಮ್ಮನ್ನು ಖಾಯಂಗೊಳಿಸಬೇಕು ಎಂದು ಮನವಿ ಸಲ್ಲಿಸಿದರು.ಈ ವೇಳೆ ಶುಶ್ರೂಷಕ ಸಂಘದ ಲಿಂಗರಾಜ ಎಂ.ಆರ್., ಮಂಜುನಾಥ.ಜಿ., ಅಂಬಿಕಾ ಬಂಡಿ, ಯಮನೂರಪ್ಪ ಡಿ.ಎಚ್. ಇತರರು ಇದ್ದರು.

Please follow and like us:
error