ಕರ್ನಾಟಕ ಪೊಲೀಸ್ ಹುದ್ದೆಗಳ ನೇಮಕಾತಿಗೆ ಉಚಿತ ಪರೀಕ್ಷಾ ಪೂರ್ವ ತರಬೇತಿ : ನೋಂದಾಯಿಸಿ


ಕೊಪ್ಪಳ ಜೂ.  ಕೊಪ್ಪಳ ಜಿಲ್ಲಾ ಉದ್ಯೊಗ ವಿನಿಮಯ ಕೇಂದ್ರದ ವತಿಯಿಂದ ಸ್ಟಡಿ ಸರ್ಕಲ್ ಯೋಜನೆಯಡಿ ಕರ್ನಾಟಕ ಪೊಲೀಸ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಉಚಿತ ಪರೀಕ್ಷಾ ಪೂರ್ವ ತರಬೇತಿಯನ್ನು ಹಮ್ಮಿಕೊಳ್ಳಲಾಗಿದ್ದು, ಆಸಕ್ತರು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಿ.
ಜಿಲ್ಲಾ ಉದ್ಯೊÃಗ ವಿನಿಮಯ ಕೇಂದ್ರದಿಂದ ಸ್ಟಡಿ ಸರ್ಕಲ್ ಯೋಜನೆಯಡಿ ಕರ್ನಾಟಕ ಪೊಲೀಸ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಉಚಿತ ಪರೀಕ್ಷಾ ಪೂರ್ವ ತರಬೇತಿಯನ್ನು ಜುಲೈ. 01 ರಿಂದ 11 ರವರೆಗೆ (ಸಾರ್ವತ್ರಿಕ ರಜಾ ದಿನಗಳನ್ನು ಹೊರತು ಪಡಿಸಿ) ಆಯೋಜಿಸಲಾಗಿದೆ.  ಅರ್ಹ ನಿರುದ್ಯೊÃಗಿ ಅಭ್ಯರ್ಥಿಗಳು ಈ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಈ ಮೂಲಕ ಕೋರಲಾಗಿದೆ.
ಈ ಪರೀಕ್ಷಾ ಪೂರ್ವ ತರಬೇತಿ ಕಾರ್ಯಕ್ರಮಕ್ಕೆ ಭಾಗವಹಿಸಲು ಆಸಕ್ತಿಯುಳ್ಳ ಅರ್ಹ ಅಭ್ಯರ್ಥಿಗಳು ತಮ್ಮ  ಅಗತ್ಯ ದಾಖಲೆಗಳೊಂದಿಗೆ  ಜಿಲ್ಲಾ ಉದ್ಯೊÃಗ ವಿನಿಮಯ ಕೇಂದ್ರ, ಕೊಪ್ಪಳದಲ್ಲಿ ತಮ್ಮ ಹೆಸರನ್ನು ಜೂನ್. 30 ರೊಳಗೆ ನೊಂದಾಯಿಸಿಕೊಳ್ಳಬೇಕು.  ಹೆಚ್ಚಿನಮಾಹಿತಿಗಾಗಿ ಸಂಪರ್ಕಿಸಿ ಕಚೇರಿ ದೂರವಾಣಿ ಸಂಖ್ಯೆ 08539-220859, 9113922949, 7019769281 .

Please follow and like us:
error