ಕರ್ತವ್ಯ ಲೋಪ ಕಿರಿಯ ಇಂಜಿನಿಯರ್ ಅಮಾನತು

ಕೊಪ್ಪಳ ಅ.  : ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಗ್ರಾಮ ಪಂಚಾಯತಿಗಳಲ್ಲಿ ಮಹತ್ಮಾ ಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೊÃಗ ಖಾತ್ರಿ ಯೋಜನೆಯಡಿ ಬಹು ಕಮಾನು ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಆಧಾರದ  ಮೇಲೆ ಕಿರಿಯ ಇಂಜಿನಿಯರ ಅಬ್ದುಲ್ ರಹೀಮ್ ಅವರನ್ನು ಅಧಿಕಾರ ದಿಂದ ಅಮಾನತುಗೊಳಿಸಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘುನಂದನ್ ಮೂರ್ತಿರವರು ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಶಿರಗುಂಪಿ, ಮುದೇನೂರು, ಜುಮಲಾಪುರ, ಸಂಗನಾಳ, ಹಿರೇಬನ್ನಿಗೋಳ ಗ್ರಾಮ ಪಂಚಾಯತಿಗಳಲ್ಲಿ ಮಹತ್ಮಾ ಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೊÃಗ ಖಾತ್ರಿ ಯೋಜನೆಯಡಿ ಬಹು ಕಮಾನು ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಗಳನ್ನು ಕುಷ್ಟಗಿ ಉಪ ವಿಭಾಗ  ವತಿಯಿಂದ ಅನುಷ್ಠಾನಗೊಳಿಸಲಾಗಿದ್ದು, ಈ ಗ್ರಾಮಗಳಲ್ಲಿನ ಬಹು ಕಮಾನು ಚೆಕ್‌ಡ್ಯಾಂಗಳ ನಿರ್ಮಾಣ ಕಾಮಗಾರಿಗಳ ತಾಂತ್ರಿಕ ಉಸ್ತುವಾರಿ ವಹಿಸಿರುವ ಕುಷ್ಟಗಿ ಉಪ ವಿಭಾಗ  ತಾಲ್ಲೂಕು ಪಂಚಾಯತ ಕಿರಿಯ ಇಂಜಿನಿಯರ್ ಅಬ್ದುಲ್ ರಹೀಮ್ ಇವರನ್ನು ನಿಯೋಜನೆ ಮಾಡಲಾಗಿತ್ತು.  ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಕಾಮಗಾರಿಗಳನ್ನು ನಿಯಮಾನುಸಾರ ಕೈಗೊಳ್ಳದೇ ಇರುವ ಬಗ್ಗೆ ದಾಖಲಾಗಿರುವ ದೂರುಗಳನ್ವಯ ಸ್ಥಾನಿಕ ಪರಿಶೀಲನೆ ಮಾಡಿ ವರದಿಗಳನ್ನು ಸಲ್ಲಿಸುವಂತೆ ಬೆಂಗಳೂರು ಮೂಲದ ಸೆಫಿಯನ್ಸ್ ಕನ್ಸಲ್ಟಂಟ್ ಇಂಜಿನಿಯರ್ ಸಂಸ್ಥೆಗೆ ಸ್ಪಷ್ಟಪಡಿಸಬೇಕು ಎಂದು ಹೇಳಿದ್ದರು.  ಯಾವುದೇ ರೀತಿ ಉತ್ತರ ಬಂದಿರಲಿಲ್ಲ.  ಆದ್ದರಿಂದ ಈ ಅಧಿಕಾರಿಯು ಕರ್ತವ್ಯ ಲೋಪ ದಿಂದ ಯಾವುದೇ ರೀತಿಯಲ್ಲಿ ಸಂಸ್ಥೆಗೆ ಉತ್ತರ ನೀಡದಿದ್ದಕ್ಕೆ ಸರ್ಕಾರಕ್ಕೆ ಬಹಳ ನಷ್ಟ ಉಂಟಾಗಿರುವುದರಿಂದ ಅವರ ವಿರುದ್ಧ ಇಲಾಖೆ ವಿಚಾರಣೆ ಮಟ್ಟದಲ್ಲಿ ಜರುಗಿಸುವುದು ಅವಶ್ಯವಾಗಿರುದರಿಂದ ಶಿಸ್ತು ಕ್ರಮ ಜುರುಗಿಸಲಾಗಿದೆ ಎಂದು  ಅಮಾನತು ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.

Please follow and like us:
error