ಕರೋನಾ ಮುಕ್ತಕ್ಕಾಗಿ ರಂಜಾನ್ ಪ್ರಾರ್ಥನೆ – ಲಾಯಕ್ ಅಲಿ

ವಿಶ್ವದಾದ್ಯಂತ ಕೋರೊನಾ ವೈರಸ್ ಮಹಾಮಾರಿ ತನ್ನ ಕದಂಬಬಾಹುಗಳನ್ನು ಹರಡಿ ಮನುಕುಲವನ್ನು ಅತ್ಯಂತ ಸಂಕಷ್ಟ ತಳ್ಳಿದೆ. ರಾಜರು  ಸಾಮಾನ್ಯ ಜನರು ಎಂದು ತಾರತಮ್ಯ ಮಾಡದೆ ಎಲ್ಲರಲ್ಲಿಯೂ ಭಯ ಹುಟ್ಟಿಸಿದ ವೈರಸ ಕೋವಿಡ್ – 19. ಪವಿತ್ರ ರಂಜಾನ ತಿಂಗಳ ಉಪವಾಸ ಇಸ್ಲಾಂ ಧರ್ಮಿಯರಿಗೆ ಸೌಹಾರ್ದವನ್ನು ಸಂರಕ್ಷಿಸುವ ಮಹತ್ತರವಾದ ತಿಂಗಳು. ಇಂತಹ ಸಂದರ್ಬದಲ್ಲಿ ಪ್ರಾರ್ಥನೆ ಸಲ್ಲಿಸುವ ಪ್ರತಿಯೊಬ್ಬರು ಕೋರೋನಾ ಮಹಾಮಾರಿ ಭೂಲೋಕದಿಂದ ಮುಕ್ತವಾಗಿ ಎಲ್ಲರೂ ಸಹಜವಾಗಿ ಬದುಕು ಸಾಗಿಸಲಿ ಎಂದು ದೇವರಲ್ಲಿ ಪ್ರಾರ್ಥೊಸೋಣ ಎಂದು ಮುಸ್ಲಿಂ ಬಾಂಧವರಲ್ಲಿ ನಿವೃತ್ತ ತಹಶೀಲ್ದಾರರಾದ ಎಂ. ಲಾಯಕ್ ಅಲಿಯವರು ವಿನಂತಿಸಿದರು.
ಅವರು ದಿ:21/05/2020 ರಂದು ಕೊಪ್ಪಳ ನಗರದ ವಿಜಯನಗರ ಬಡಾವಣೆ, ಗಣೇಶ ನಗರ,ಚೆನ್ನಬಸವ ನಗರ ಹಾಗೂ ಕಲ್ಯಾಣನಗರಗಳಲ್ಲಿ ನಗರಸಭೆ ಸದಸ್ಯರಾದ ದೇವಕ್ಕ ಲಕ್ಷ್ಮಣ ಕಂದಾರಿಯವರಿಂದ ಮುಸ್ಲಿಂ ಬಾಂಧವರಿಗೆ ಮನೆ ಮನೆಗೆ ತೆರಳಿ‌ಕಿ ಇಪ್ತಿಯಾರ್ ಕಿಟ್ (ಹಣ್ಣುಗಳ ಕಿಟ್) ವಿತರಿಸಿ ಮಾತನಾಡಿದರು.
ಪ್ರೀತಿ, ವಿಶ್ವಾಸ, ಮಾನವ ಘನತೆ ಮತ್ತು ದೇವರಲ್ಲಿ ವಿಶ್ವಾಸ ಹೆಚ್ಚಿಸುವದೇ ರಂಜಾನ್ ಹಬ್ಬದ ಉದ್ದೇಶ.ಮಾನವನ ಕಲ್ಯಾಣಕ್ಕಾಗಿ ನಾವು ಪ್ರಾರ್ಥನೆ ಸಲ್ಲಿಸೋಣ ಎಂದು ಕರೆ ನೀಡಿದರು.
ಹಿರಿಯ ವಕೀಲರಾದ ಪೀರಾಹುಸೇನ್ ಹೊಸಳ್ಳಿ ಮಾತನಾಡಿ, ಧಾರ್ಮಿಕ ಹಬ್ಬಗಳ ಆಚರಣೆಯಲ್ಲಿ ವೈಜ್ಞಾನಿಕವಾಗಿ ಕಾರಣಗಳಿವೆ. ಎಲ್ಲರೂ ಕೂಡಿ ಹಬ್ಬ ಹರಿದಿನಗಳನ್ನು ಆಚರಿಸಿ ಸೌಹಾರ್ದತೆಯಿಂದ ಜೀವನ ಸಾಗಿಸಬೇಕಾಗಿದೆ. ಕೋರೋನಾದಂತ ವೈರಸ್ ಮಹಾಮಾರಿಯ ಉಪಟಳದ ಸಂದರ್ಭದಲ್ಲಿಯೂ ಕಂದಾರಿ ಕುಟುಂಬದವರು ಮುಸ್ಲಿಂ ಬಾಂಧವರಿಗೆ ಇಪ್ತಿಯಾರ್ ಕಿಟ್ ತಲುಪಿಸುತ್ತಿರುವದ ಅತ್ಯಂತ ಶ್ಲಾಘನೀಯ. ಪ್ರತಿಯೊಬ್ಬರು ಸರ್ಕಾರದ ನಿಯಮಗಳ ಪಾಲನೆಯ ಜೊತೆಗೆ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು, ಮಾಸ್ಕ ಧರಿಸಿ ನಮ್ಮ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ‌ ನಗರಸಭೆ ಸದಸ್ಯರಾದ ದೇವಕ್ಕ ಕಂದಾರಿ, ನಗರಸಭೆ ಮಾಜಿ ಸದಸ್ಯರಾದ ಜಾಕೀರ್ ಕಿಲ್ಲೆದಾರ್, ಮುಖಂಡರಾದ ಹಾಲೇಶ ಕಂದಾರಿ, ಬಸವರಾಜ ಬನ್ನಿಕೊಪ್ಪ, ಶರಣಯ್ಯ ಹಿರೇಮಠ, ಪ್ರಕಾಶ ಗುಡೂರ್,  ತಾಹೇರ್ ಹಮ್ಮಜವಿ, ಫಜಲ್ ಖಾನಸಾಬ್, ಸಲೀಂ ಟೈಲರ್, ರಮೇಶ ಹಡಪದ, ಮಂಜುನಾಥ ತಿರ್ಲಾಪುರ, ಗಾಳೆಪ್ಪ ದೊಡ್ಡಮನಿ, ಸಂತೋಷ ಮ್ಯಾಗಳಮನಿ ಮುಂತಾದವರು ಉಪಸ್ಥಿತರಿದ್ದರು.
Please follow and like us:
error