ಕರೋನಾ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಲು ಮನವಿ


ರಾಜ್ಯದಲ್ಲಿ ಕೋವಿಡ್ ೧೯ ಪರಿಕ್ಷೆ ಕೇಂದ್ರಗಳನ್ನು ಹೆಚ್ಚು ಮಾಡುವುದು ಹಾಗೂ ಕೊಪ್ಪಳ ಜಿಲ್ಲೆಯ ಕೊವಿಡ್ ಆಸ್ಪತ್ರೆಗೆ ತಜ್ಞ ವೈದ್ಯರು, ಸಾಮಾನ್ಯ ವೈದ್ಯರು, ಸಿಬ್ಬಂದಿ, ನರ್ಸಗಳನ್ನು ನೇಮಕ ಮಾಡುವುದು ಮತ್ತು ಅಗತ್ಯ ಸೌಕರ್ಯ ಒದಗಿಸಿ, ಕೊರೋನಾ ವೈರಸ್ ನಿಯಂತ್ರಣ ಮಾಡಿ ಸಾವುಗಳನ್ನು ತಡೆಗಟ್ಟುವ ಕುರಿತು.

ಪ್ರಗತಿಪರ ಸಂಘಟನೆಗಳ ಒಕ್ಕೂಟ ಕೊಪ್ಪಳ.ಈ  ಮೂಲಕ ವಿನಂತಿಸಿಕೊಳ್ಳುವುದೇನಂದರೆ. ಕೊರೋನ್ ವೈರಸ್ ನಿಯಂತ್ರಣ ಮಾಡಲು ಹೆಚ್ಚು ಪರೀಕ್ಷಾ ಕೇಂದ್ರಗಳನ್ನು ತೆರೆದು, ಹೆಚ್ಚು ಹೆಚ್ಚು ಜನರನ್ನು ಆರೋಗ್ಯ ತಪಾಸಣೆಗೊಳಪಡಿಸಿ, ಚಿಕಿತ್ಸೆ ನೀಡುವುದೊಂದೆ ಸದ್ಯಕ್ಕಿರುವ ಪರಿಹಾರವೆಂದು, ಆರೋಗ್ಯ ತಜ್ಞರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಆದರೆ ಯುದ್ಧೋಪಾದಿಯಲ್ಲಿ ವೈರಸ್ ನಿಯಂತ್ರಣ ಮಾಡುವ ಕಾರ್ಯ ನಡೆಯುತ್ತಿಲ್ಲ. ರಾಜ್ಯದಲ್ಲಿ ಈಗಾಗಲೆ ಇರುವ ಪರೀಕ್ಷ ಕೇಂದ್ರಗಳಲ್ಲಿ ಪ್ರತಿ ನಿತ್ಯ ೫೦ ಸಾವಿರ ಆರೋಗ್ಯ ತಪಾಸಣೆ ನಡೆಯಬೇಕು. ಆದರೆ ಕೇವಲ ೧೩ ಸಾವಿರ ತಪಾಸಣೆ ನಡೆಯುತ್ತಿವೆ ಎಂದು ವರದಿಗಳು ತಿಳಿಸುತ್ತವೆ. ವೈರಸ್ ಸಾಮಾಜಿಕವಾಗಿ ಹರಡುವ ಹಂತ ತಲುಪಿದೆ (ಒಂದು ತಿಂಗಳ ಹಿಂದೆಯೇ ವೈರಸ್ ಸಾಮಾಜಿಕವಾಗಿ ಹರಡಿದೆ ಎಂದು ಸಾರ್ವತ್ರಿಕ ಅಭಿಪ್ರಾಯಗಳು ವ್ಯಕ್ತಗೊಂಡಿವೆ) ಎಂದು ಕೆಲವು ವರದಿಗಳು ಪ್ರಕಟಗೊಂಡಿವೆ. ವೈರಸ್ ನಿಯಂತ್ರಣ ಮಾಡಲು ಸರ್ಕಾರಕ್ಕೆ ಏಕೆ ಸಾಧ್ಯವಾಗುತ್ತಿಲ್ಲ.?
ಉನ್ನತ ಮಟ್ಟದ ಆಡಳಿತ ಅಧಿಕಾರಿಗಳ ಬೇಜವಾಬ್ದಾರಿತನ ಮತ್ತು ಮಂತ್ರಿ, ಶಾಸಕರ ನಿರ್ಲಕ್ಷ್ಯತೆಯೇ, ವೈರಸ್ ಹೆಚ್ಚಲು ಮತ್ತು ಜನರ ಸಾವುಗಳು ಸಂಭವಿಸಲು ಪ್ರಮುಖ ಕಾರಣವಾಗಿದೆ. ಯಾವ ಮುನ್ಸೂಚನೆ ಇಲ್ಲದೆ ಕೋಟ್ಯಾಂತರ ಜನರನ್ನು ಸಂಕಷ್ಟಕ್ಕೆ ತಳ್ಳಿ ಎರಡು ತಿಂಗಳು ಲಾಕ್‌ಡೌನ್ ಮಾಡಿದರೂ ಯಾವ ಪ್ರಯೋಜನ ಆಗಲಿಲ್ಲ. ವಿದೇಶದಲ್ಲಿದ್ದ ಲಕ್ಷಾಂತರ ಶ್ರೀಮಂತರನ್ನು ಕ್ವೋರೆಂಟನ್ ಮಾಡದೆ ಗುಪ್ತವಾಗಿ ಮನೆಯೊಳಗಡೆ ಬಿಟ್ಟುಕೊಳ್ಳಲಾಯಿತು. ಲಾಕ್ ಡೌನ್ ಅವಧಿಯಲ್ಲಿ ಯಾವ ಸಿದ್ದತೆ ಮಾಡಿಕೊಳ್ಳದ ಸರ್ಕಾರ ಕೈ ಚಲ್ಲಿ ಕುಳಿತುಕೊಂಡಿತು. ಈ ಕಾರಣದಿಂದಲೆ ಸೋಂಕು ನಿಯಂತ್ರಣಕ್ಕೆ ಬಾರದೆ ಸಾವುಗಳು ಹೆಚ್ಚಾಗಿವೆ.
ಸೇವೆಯುದ್ದಕ್ಕೂ ಭ್ರಷ್ಟಾಚಾರ ಎಸಗಿ ಹಣದ ಮದದಲ್ಲಿರುವ ಅಧಿಕಾರಿಶಾಹಿಗಳ ಚರ್ಮ ದಪ್ಪವಾಗಿದೆ. ಹಾಗಾಗಿ ಆಡಳಿತ ಯಂತ್ರಾಂಗ ಜಡತ್ವಗೊಂಡಿದೆ. ಹಣ ಆಸ್ತಿ ಸಂಪತ್ತಿನ ಸ್ವರ್ಗದಲ್ಲಿದ್ದ ಅಧಿಕಾರಿಶಾಹಿಗಳಿಗೆ ಕೊರೋನಾ ಎನ್ನುವ ಯುದ್ಧ ಬೇಡವಾಗಿದೆ. ಇತ್ತೀಚಿನ ವರದಿಯ ಪ್ರಕಾರ ಕೊರೋನಾ ಕಾಯ್ಲೆಯಿಂದ ಸಣ್ಣ ಮಧ್ಯಮ ವರ್ಗದ ಜನರು ಹೆಚ್ಚಿನ ಪ್ರಮಾಣದಲ್ಲಿ ಸಾವಿಗೀಡಾಗಿದ್ದಾರೆ. ಸಾಮಾನ್ಯರ ಸಾವುಗಳು ಆಳುವ ಮನಸ್ಸುಗಳಿಗೆ ದುಖಃವಾಗುವುದಿಲ್ಲವೇನೋ? ಉರಿಯುವ ಮನೆಯಲ್ಲಿ ಗಳ ಕಿತ್ತಿಕೊಂಡಂತೆ. ಜನರ ಸಾವು ನೋವುಗಳ ಗಂಭೀರ ಸ್ಥಿತಿಯಲ್ಲೂ ಹಣ ಲೂಟಿ ಹೊಡಿಯುವ ಕಾರ್ಯ ಯಥಾ ಪ್ರಕಾರ ಮುಂದುವರೆದಿದೆ. ವೈರಸ್ ನೆಗೆಟಿವ್ ಇದ್ದಂತಹ ಜನಗಳ ಹೆಸರಿನಲ್ಲಿ ಹಣ ದೋಚಲಾಗುತ್ತಿದೆ. ಪಾಜಿಟಿವ್ ಪೇಷೆಂಟ್ ಮನೆಗಳ ಮತ್ತು ಏರಿಯಾಗಳನ್ನು ಸೀಲ್ ಡೌನ್ ಮಾಡು (ಸಾನಿಟೈಜರ್ ಸಿಂಪಡನೆ ಇತರೆ ನೆಪದಲ್ಲಿ) ಕಾರ್ಯದಲ್ಲು ಕೂಡಾ ಲಕ್ಷಾಂತರ ಹಣವನ್ನು ನುಂಗಲಾಗುತ್ತಿದೆ.
ಬೆಂಗಳೂರ ಇತರೆ ಭಾಗಗಳಲ್ಲಿ ಸಮಯಕ್ಕೆ ಸರಿಯಾಗಿ ಆಂಬ್ಯುಲೆನ್ಸ್ ಬಾರದೆ, ಆಸ್ಪತ್ರೆಯಲ್ಲಿ ಎಂಟ್ರಿ ಸಿಗದ ಕಾರಣದಿಂದ ನೂರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಜಗನ್‌ಮೋಹನ ರಡ್ಡಿ ನೇತೃತ್ವದ ಆಂದ್ರ ಸರ್ಕಾರ ಜುಲೈ ೧ ರಂದು ೧೦೮೮ ಆಂಬ್ಯುಲೆನ್ಸ್ ಖರೀದಿಸಿ ಜನರ ನೆರವಿಗೆ ದಾವಿಸಿದೆ. ಕರ್ನಾಟಕ ಸರ್ಕಾರ ಇದೆ ಮಾದರಿಯನ್ನು ಅನುಸರಿಸಬೇಕಾಗಿತ್ತು?
೩೦೦ ಹಾಸಿಗೆಯುಳ್ಳ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ೫೪ ವೈದ್ಯರುಗಳ ಅಗತ್ಯವಿದೆ.. ಆದರೆ ಕೇವಲ ೭ ಜನ ವೈದ್ಯರು ಮಾತ್ರ ಸೇವೆಯಲ್ಲಿದ್ದಾರೆ. ಸಿಬ್ಬಂದಿ ಮತ್ತು ಸ್ಟಾಫ್ ನರ್ಸ್ ಕೊರತೆ ಕೂಡಾ ಇದೆ. ಕೊವಿಡ್ ೧೯ ಆಸ್ಪತ್ರಗೆ ವೈದ್ಯರನ್ನು ಕೊಟ್ಟಿರುವುದಿಲ್ಲ. ಈ ೭ ಜನ ವೈದ್ಯರನ್ನೆ ಕೊವಿಡ್ ೧೯ ಚಿಕಿತ್ಸೆ ಕಾರ್ಯಕ್ಕೆ ನಿಯೋಜಿಸಲಾಗಿದೆ. ಮೆಡಿಕಲ್ ಕಾಲೇಜ್ ಟೀಚರ್‍ಸ್ ಮತ್ತು ನರ್ಸ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಅನುಭವ ಇಲ್ಲದ ವಿದ್ಯಾರ್ಥಿಗಳಿಂದ ಚಿಕಿತ್ಸೆ ನೀಡಿದರೆ ರೋಗಿಗಳಿಗೆ ಅಪಾಯ ಸಂಭವಿಸಬಹುದು. ಈಗಾಗಲೆ ಕೊರೋನಾ ವೈರಸ್ ನಿಂದ ಜಿಲ್ಲೆಯಲ್ಲಿ ಹತ್ತಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ವೈದ್ಯರ ಮತ್ತು ತಜ್ಞ ವೈದ್ಯರ ಕೊರತೆಯಿಂದಲೆ ಕೆಲವು ಸಾವುಗಳು ಸಂಭವಿಸಿವೆ ಎಂದು ಹೇಳಲಾಗುತ್ತಿದೆ. ಕೊಪ್ಪಳ ಜಿಲ್ಲೆಯು ನಿರಂತರ ಬರಗಾಲಕ್ಕೆ ತುತ್ತಾಗಿದ್ದರಿಂದ ಜಿಲ್ಲೆಯ ಜನರು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಇದಲ್ಲದೆ ವಲಸೆ ಹೋದವರು ವಾಪಾಸ್ ಬಂದಿದ್ದರಿಂದ ಕುಟುಂಬ ನಿರ್ವಹಣೆಗೆ ತುಂಬಾ ತೊಂದರೆ ಆಗಿದೆ. ಈ ಜನರಿಗೆ ಸರ್ಕಾರಿ ಆಸ್ಪತ್ರೆಯೇ ಅತ್ಯಂತ ಅನುಕೂಲವಾಗಿತ್ತು. ಆದರೆ ವೈದ್ಯರ ಕೊರತೆಯಿಂದ ಸಾಮಾನ್ಯ ಕಾಯ್ಲೆಗೆ ಚಿಕಿತ್ಸೆ ಪಡೆಯುವ ಜನರಿಗೆ ತೀವ್ರ ತೊಂದರೆ ಆಗಿದೆ. ಸರ್ಕಾರ ನಮ್ಮ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಈ ಕೆಳ ಕಾಣಿಸಿದ ಬೇಡಿಕೆಗಳನ್ನು ತೀವ್ರಗತಿಯಲ್ಲಿ ಈಡೇರಿಸಬೇಕೆಂದು ವಿನಂತಿಸಿಕೊಳ್ಳುತ್ತೇವೆ.

ಹಕ್ಕೊತ್ತಾಯಗಳು
ಕೊಪ್ಪಳ ಕೊವಿಡ್ ಜಿಲ್ಲಾಸ್ಪತ್ರಗೆ ತಜ್ಞ ವೈದ್ಯರು ಮತ್ತು ಕೊರತೆ ಇರುವ ಸಾಮಾನ್ಯ ವೈದ್ಯರನ್ನು, ಸಿಬ್ಬಂದಿಗಳನ್ನು ಒದಗಿಸಬೇಕು. ಖಾಸಗಿ ವೈದ್ಯರಿಗೆ ೫೦ ಲಕ್ಷ ಜೀವ ವಿಮೆ ಮಾಡಿಸಿ ಅವರನ್ನು ಎರವಲು ಪಡೆಯಬೇಕು. ವೆಂಟಿಲೇಟರ್, ಪಿಪಿಕಿಟ್ ಇತರೆ ಅಗತ್ಯ ಸೌಕರ್ಯಗಳನ್ನು ಒದಗಿಸಬೇಕು.
ಖಾಸಗಿ ಆಸ್ಪತ್ರೆಗೆ ವರ್ಗಾಯಿಸುವ ಕೋವಿಡ್ ಪೇಷೆಂಟ್‌ಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರವೆ ಭರಿಸಬೇಕು.
ಸಾಮಾನ್ಯ ಕಾಯ್ಲೆಗೆ ಚಿಕಿತ್ಸೆ ಪಡೆಯುವ (ಗವಿಸಿದ್ದೇಶ್ವರ ಆಯುರ್ವೆದ್ ಕಾಲೇಜ್‌ನಲ್ಲಿರುವ ಆಸ್ಪತ್ರೆ) ಜಿಲ್ಲಾಸ್ಪತ್ರಗೆ ಅಗತ್ಯ ವೈದ್ಯರನ್ನು ನಿಯೋಜಿಸಬೇಕು ಮತ್ತು ಔಸಧ ಅಗತ್ಯ ಸೌಲಭ್ಯಗಳನ್ನು ನೀಡಬೇಕು.
ಪಟ್ಟಣ ಹಾಗೂ ಗ್ರಾಮೀಣ ಭಾಗದ ಮನೆ ಮನೆಗಳಿಗೆ ತೆರಳಿ ಜನರ ಆರೋಗ್ಯ ತಪಾಸಣಿ ಮಾಡಬೇಕು. ಜನರಲ್ಲಿ ರೋಗ ನಿರೋದಕ ಶಕ್ತಿ ಹೆಚ್ಚು ಮಾಡುವಂತಹ ಔಷಧವನ್ನು ಉಚಿತವಾಗಿ ಸರಬುರಾಜು ಮಾಡಬೇಕು.
ಆಯುಷ್ಮಾನ ವೈದ್ಯರನ್ನು ಕಾಯಂ ಮಾಡಬೇಕು ಸಾಧ್ಯವಾಗದಿದ್ದರೆ ಕಾಯಂ ವೈದ್ಯರಿಗೆ ಸಮಾನ ವೇತನ ಕೊಡಬೇಕು.
ಎಲ್ಲಾ ಆರೋಗ್ಯ ಸೇವಕರಿಗೆ ೫೦ ಲಕ್ಷ ಜೀವ ವಿಮೆ ಮಾಡಿಸಬೇಕು.
ಆಶಾ ಕಾರ್ಯಕರ್ತೆಯರ ಎಲ್ಲಾ ಬೇಡಿಕೆಗಳನ್ನು ಪರಿಹರಿಸಬೇಕು. ಇವರಿಗೂ ಕೂಡಾ ೫೦ ಲಕ್ಷ ಜೀವ ವಿಮೆ ಮಾಡಿಸಬೇಕು.
ರಾಜ್ಯದಲ್ಲಿ ಒಂದು ಕೋಟಿಗೂ ಹೆಚ್ಚು ವಾರ್ಷಿಕ ಆಧಾಯ ಇರುವ ಶ್ರೀಮಂತರಿಗೆ ಶೇ: ೨ ರಷ್ಟು ತೆರಿಗೆ ಹೆಚ್ಚು ಮಾಡಿ, ಕೊರತೆ ಇರುವ ಸಂಪನ್ಮೂಲವನ್ನು ಸರಿದೂಗಿಸಿಕೊಳ್ಳಬೇಕು.
ಕೊರೋನಾ ಕಾರಣದಿಂದ ಉದ್ಯೋಗವಿಲ್ಲದೆ ಅತಂತ್ರ ಸ್ಥಿತಿಯಲ್ಲಿರುವ ಕಾರ್ಮಿಕರು, ಬೀದಿ ವ್ಯಾಪಾರಿಗಳು ಸೇರಿಂತೆ ಪ್ರತಿನಿತ್ಯ ದುಡಿಮೆಯ ಮೇಲೆ ಅವಲಂಬನೆ ಅಗಿರುವ ಎಲ್ಲಾ ಕುಟುಂಬಗಳಿಗೆ ಪ್ರತಿ ತಿಂಗಳು ೫೦ ಕೇಜಿ ಅಕ್ಕಿ ಮತ್ತು ೧೦ ಸಾವಿರ ರೂ. ಸಹಾಯಧನವನ್ನು ನೀಡಬೇಕು.
ಕೊರೋನಾ ಕಾರಣದಿಂದ ಈ ವರ್ಷದ ಹಿಂಗಾರಿ ಅವಧಿಯ ಬೆಳೆ ನಷ್ಟವಾಗಿದ್ದರಿಂದ ರೈತರಿಗೆ ಬೀಜ,ಗೊಬ್ಬರ, ಕ್ರಿಮಿನಾಶಕ ಔಷಧ ಇತರೆ ಕೃಷಿ ಸಾಮಗ್ರಿಗಳನ್ನು ಉಚಿತವಾಗಿ ವಿತರಿಸಬೇಕು. ಸಣ್ಣ ಮಧ್ಯಮ ವರ್ಗದ ಎಲ್ಲಾ ರೈತರ ಸಾಲ ಮನ್ನಾ ಮಾಡಬೇಕು. ವಿಠಪ್ಪ ಗೋರಂಟ್ಲಿ ಡಿ.ಹೆಚ್.ಪೂಜಾರ ಆಲ್ಲಮ ಪ್ರಭು ಬೆಟ್ಟದೂರ ಬಸವರಾಜ ಶೀಲವಂತರ ಮಹಾಂತೇಶ ಕೊತಬಾಳ ಶರಣು ಗಡ್ಡಿ ಎಂದು ಆಗ್ರಹಿಸಿದ್ದಾರೆ

Please follow and like us:
error