ಕರಾಳ ಬುಧವಾರ 12 ಸಾವು, 341 ಪಾಜಿಟಿವ್ – ಎಚ್ಚರಗೊಳ್ಳಿ ಕೊಪ್ಪಳ ಜನತೆ

 

ಕನ್ನಡನೆಟ್ ನ್ಯೂಸ್ :  ಇವತ್ತು ಕೊಪ್ಪಳ ಜಿಲ್ಲೆಯ  ಇತಿಹಾಸದಲ್ಲಿಯೇ ಕರಾಳ ದಿನ.  ಇಂದು ಒಂದೇ ದಿನ 12 ಜನ ಕರೋನಾದಿಂದ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಕರೋನಾಕ್ಕೆ ಬಲಿಯಾದವರ ಸಂಖ್ಯೆ 391ಕ್ಕೆ ತಲುಪಿದೆ.  ದಿನೇ ದಿನೇ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇಡೀ ಜಿಲ್ಲೆಯ ಜನತೆ ಎಚ್ಚರಗೊಳ್ಳಬೇಕಿದೆ. ಎಲ್ಲ ರೀತಿಯ ಮುನ್ನೆಚ್ಚರಿಕೆಗಳನ್ನು ಪಾಲಿಸಲೇ ಬೇಕಿದೆ. ಇಲ್ಲವಾದಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾದೀತು.

ಇಂದು ಜಿಲ್ಲೆಯಲ್ಲಿ 341 ಪಾಜಿಟಿವ್ ಪ್ರಕರಣಗಳು ವರದಿಯಾಗಿವೆ. ಗಂಗಾವತಿ 109 ಕೊಪ್ಪಳ 129 ಯಲಬುರ್ಗಾ 51 ಮತ್ತು ಕುಷ್ಟಗಿಯಲ್ಲಿ 52 ಪ್ರಕರಣಗಳು ವರದಿಯಾಗಿವೆ. ಬೆಳಿಗ್ಗೆ 6ರಿಂದ 10 ಗಂಟೆಯ ಸಮಯದಲ್ಲಿ ಮಾರಕಟ್ಟೆ ಜನರಿಂದ ತುಂಬಿ ತುಳುಕುತ್ತಿದೆ.  ಹಬ್ಬದ ಸಮಯದಲ್ಲಿ ಯಾವ ರೀತಿ ಟ್ರಾಪಿಕ್ ಜಾಮ್ ಇರುತ್ತೊ ಆ ರೀತಿಯಲ್ಲಿ ಜನದಟ್ಟಣೆ ಸೇರುತ್ತಿದೆ. ಜಿಲ್ಲೆಯ ಜನರೇ ಎಚ್ಚೆತ್ತುಕೊಳ್ಳಿ ಮತ್ತಷ್ಟು ಅನಾಹುತವಾಗುವ ಮುನ್ನ ಮುನ್ನೆಚ್ಚರಿಕೆ ವಹಿಸಿ. ಕರೋನಾದಿಂದ ನಿಮ್ಮನ್ನು ನಿಮ್ಮ ಪರಿವಾರಗಳನ್ನು ರಕ್ಷಿಸಿಕೊಳ್ಳಿ.

Please follow and like us:
error