ಕರಾಟೆ ಪಟುಗಳಿಂದ ಬ್ರೂಸ್ ಲೀ ಅವರ ೭೯ನೇ ಹುಟ್ಟುಹಬ್ಬ

Koppal :  ನಗರದ ಎಜ್ಯುಕೇರ್ ಇಂಗ್ಲೀಷ ಮೀಡಿಯಮ್ ಸ್ಕೂಲ್ ನಲ್ಲಿ ಝೆನ್ ಶಿಟೋರಿಯೊ ಕರಾಟೆ ಸಂಸ್ಥೆಯಿಂದ ಬ್ರೂಸ್ ಲೀ ಅವರ ೭೯ನೇ ಹುಟ್ಟುಹಬ್ಬ ವನ್ನು ಆಚರಿಸಲಾಯಿತು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕೋಚ್ ಶ್ರೀನಿವಾಸ ಪಂಡಿತ ಮಾತನಾಡಿ ಬ್ರೂಸ್ ಲೀ ಅವರ ಹೆಸರೇ ರೋಮಾಂಚನ. ಅವರು ಸಮರ ಕಲೆಯ ನಿಪುಣರಾದ ಇವರನ್ನು ಎಲ್ಲರೂ ಕರಾಟೆ ಚಕ್ರವರ್ತಿ ಎಂದು ಕರೆಯುತ್ತಾರೆ. ತಮ್ಮ ಕೇವಲ ೩೨ ವಯಸ್ಸಿನಲ್ಲಿಯೇ ಕರಾಟೆ ಕೌಶಲ್ಯ ಮುಖಾಂತರ ವಿಶ್ವ ವಿಖ್ಯಾತಿ ಪಡೆದು ಜಗತ್ತನ್ನೇ ತನ್ನತ್ತ ನೋಡುವಂತೆ ಮಾಡಿದ ಕರಾಟೆ ಸಾಮ್ರಾಟ ಬ್ರೂಸ್ ಲೀ. ಅವರು ಚಿತ್ರ ನಟರಾಗಿದ್ದು ತಮ್ಮನ್ನು ತಾವು ದಿನದಲ್ಲಿ ಕನಿಷ್ಠ ೧೬ ತಾಸು ಕೆಲಸದಲ್ಲಿ ತೊಡಗಿಸಿಕೊಳ್ಳುತಿದ್ದರು. ಅವರು ನಟಿಸಿದ ನಾಲ್ಕಾರು ಚಿತ್ರದಲ್ಲಿ ಎಂಟರ್ ದಿ ಡ್ರ್ಯಾಗನ್ ಚಲನಚಿತ್ರ ವಿಶ್ವಖ್ಯಾತಿ ತಂದು ಕೊಟ್ಟಿತು. ಪ್ರತಿದಿನ ದೈಹಿಕ ತರಬೇತಿಯಲ್ಲಿ ತಮ್ಮ ದೈಹಿಕ ಸಾಮರ್ಥ್ಯವನ್ನು ಗರಿಷ್ಠ ಮಟ್ಟಕ್ಕೆ ಮುಟ್ಟಿಸಲು ನಿರಂತರವಾಗಿ ಪ್ರಯೋಗಗಳನ್ನು ಮಾಡುತಿದ್ದರು. ದೇಹದಾಢ್ಯವರ್ಧನೆಗೆ ಸ್ನಾಯು, ಮಾಂಸಖಂಡಗಳನ್ನು ಬೆಳೆಸಲು ಪ್ರಯತ್ನಿಸುತಿದ್ದರು ಎಂದರು. ಎಜ್ಯುಕೇರ್ ಇಂಗ್ಲೀಷ ಮೀಡಿಯಮ್ ಸ್ಕೂಲ್ ಶಾಲೆಯ ಮುಖ್ಯೋಪಾಧ್ಯಯರಾದ ಶ್ರೀ ಗಿರಿಜಾಪತಿ ಸ್ವಾಮಿ ಮಾತನಾಡಿ ಮಕ್ಕಳು ಪಠ್ಯದ ಜೊತೆಗೆ ಆತ್ಮ ರಕ್ಷಣೆ ಕಲೆಯಾದ ಕರಾಟೆ ಕಲಿಯುವುದು ಒಳ್ಳೆಯ ಬೆಳವಣಿಗೆ ಎಂದರು. ಬ್ರೂಸ್ ಲೀ ಅವರ ನಿರಂತರ ಪರಿಶ್ರಮ ಮತ್ತು ಸಾಧನೆಯಿಂದ ಅವರ ಹೆಸರು ಇಂದಿಗೂ ಅಜರಾಮರ. ಕರಾಟೆಯಿಂದ ಮಕ್ಕಳಿಗೆ ದೈಹಿಕವಾಗಿ ಮಾನಸಿಕವಾಗಿ ಸದೃಢರಾಗಲು ಸಹಾಯ ವಾಗುವ ಕಲೆಗೆ ಪಾಲಕರಾದ ನಾವುಗಳು ಶಿಸ್ತಿನ ಕಲೆಯಾದ ಕರಾಟೆ ಕಲಿಸಲು ಪ್ರೋತ್ಸಾಹಿಸಬೇಕಾಗಿದೆ ಮತ್ತು ಸರಕಾರ ಕರಾಟೆ ಕ್ರೀಡೆಗೂ ಸವಲತ್ತುಗಳನ್ನು ನೀಡಿದಲ್ಲಿ ಕರಾಟೆಪಟುಗಲಿಗೆ ಅನುಕೂಲವಾಗುವುದೆಂದು ಅಭಿಪ್ರಾಯಪಟ್ಟರು. ವಿರುಪಾಕ್ಷಗೌಡ ಪಾಟೀಲ್ ಸ್ವಾಗತಿಸಿದರು, ಕಾಶಿನಾಥ ಹಿರೇಮಠ ವಂದಿಸಿದರು.

Please follow and like us:
error